ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶ್ರುತಿ, ಉಪೇಂದ್ರಗೂ ಇಂದು ಬರ್ತ್‌ಡೇ ಸಂಭ್ರಮ! (Shruthi | Upendra | Vishnuvardhan | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸಾಹಸಸಿಂಹ ವಿಷ್ಣುವರ್ಧನ್ ಜೊತೆಗೆ ಹುಟ್ಟುಹಬ್ಬ ಹಂಚಿಕೊಳ್ಳುವ ಮಂದಿ ಚಿತ್ರರಂಗದಲ್ಲಿ ಇನ್ನೂ ಇಬ್ಬರಿದ್ದಾರೆ. ಅದು ಎಲ್ಲರ ಪ್ರೀತಿಪಾತ್ರರಾದ ರಿಯಲ್ ಸ್ಟಾರ್ ಉಪ್ಪಿ ಹಾಗೂ ಹೆಣ್ಣುಮಕ್ಕಳ ಮನಸೂರೆಗೊಂಡು ಚಿತ್ರಗಳ ಮೂಲಕ ಕಣ್ಣೀರಲ್ಲಿ ತೋಯಿಸಿದ ನಟಿ ಶ್ರುತಿ.

ಹೌದು ಶ್ರುತಿ, ಉಪೇಂದ್ರ, ವಿಷ್ಣುವರ್ಧನ್ ಈ ಮೂವರ ಜನ್ಮದಿನವೂ ಒಂದೇ ದಿನ. ಅದು ಸೆ.18. ಈ ಮೂವರೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದವರೇ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದವರೇ. ಹಾಗಾಗಿಯೇ ಈ ದಿನ ಮೂವರ ಹುಟ್ಟುಹಬ್ಬವೂ ಅಷ್ಟೇ ಮುಖ್ಯವಾಗುತ್ತದೆ.

ಇಂದಿಗೆ ಕರೆಕ್ಟಾಗಿ 43ನೇ ಹುಟ್ಟುಹಬ್ಬ ಆಚರಿಸಿಕೊಂಡ ರಿಯಲ್ ಸ್ಟಾರ್ ಎಂದೇ ಖ್ಯಾತಿವೆತ್ತ ಉಪೇಂದ್ರ ನಿರ್ದೇಶಕನಾಗಲು ಬಂದು ನಟನಾಗಿಬಿಟ್ಟರು. ಆದರೆ ನಿರ್ದೇಶಕನಾಗಿ ಮಾಡಿದ ಅಷ್ಟೂ ಚಿತ್ರಗಳು ಪ್ರೇಕ್ಷಕರಿಂದ ಕರತಾಡನ ಗಿಟ್ಟಿಸಿದವುಗಳೇ. ಹಾಗಾಗಿ ಉಪ್ಪಿ ನಿರ್ದೇಶನ ಮಾಡುತ್ತಾರಂತೆ ಎಂಬ ಸುದ್ದಿ ಆಗಾಗ ಗಾಸಿಪ್ ಕಾಲಂಗಳಲ್ಲಿ ರಾರಾಜಿಸುತ್ತಿರುವುದು ತೀರಾ ಕಾಮನ್. ಉಪೇಂದ್ರ ಚಿತ್ರದ ನಂತರ ಉಪ್ಪಿ ಆಕ್ಷನ್ ಕಟ್ ಹೇಳಿರಲಿಲ್ಲ. ಇದೀಗ ಮತ್ತೆ ಸೂಪರ್ ಚಿತ್ರದ ಮೂಲಕ ಮತ್ತೆ ತಮ್ಮ ನಿರ್ದೇಶಕನ ಕುರ್ಚಿಯ ಕೈಚಳಕ ತೋರಿಸಲಿದ್ದಾರೆ ಎಂಬುದೇ ಅಭಿಮಾನಿಗಳ ಪಾಲಿಗೆ ಸಂತಸದ ವಿಚಾರ.
MOKSHA


ಕನ್ನಡ ಚಿತ್ರರಂಗದ ಯಶಸ್ವಿ ನಾಯಕಿ ನಟಿಯರ ಪೈಕಿ ಶ್ರುತಿ ಹೆಸರೇನೂ ಚಿಕ್ಕದಲ್ಲ. 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಅವರದ್ದು ನಿಜಕ್ಕೂ ಸಾಧನೆಯೇ ಸರಿ. ಭಾವುಕ ಪಾತ್ರಗಳಿಗೇ ಹೆಸರುವಾಸಿಯಾದ ಶ್ರುತಿ ಇತ್ತೀಚೆಗೆ ವಿಚ್ಛೇದನ ಪ್ರಕರಣದಿಂದಾಗಿ ಕೊಂಚ ವಿವಾದಗಳಲ್ಲಿ ಸುದ್ದಿ ಮಾಡಿದರೂ, ಇಂತಹ ವಿವಾದ ಅವರ ಸಾಧನೆಯ ಮುಂದೆ ಗೌಣ.

ಇಂತಹ ಸಹಜ ಸುಂದರಿ ಶ್ರುತಿ ಈಗಲೂ ಮಹಿಳೆಯರ ಹಾಟ್ ಫೇವರಿಟ್. ಹಾಗಾಗಿಯೇ ಶ್ರುತಿಗೆ ಚಿತ್ರರಂಗದಲ್ಲಿ ಈಗಲೂ ಸಾಕಷ್ಟು ಅವಕಾಶಗಳಿವೆ. ತನ್ನ ವಯಸ್ಸಿಗೆ ತಕ್ಕಂತೆ ಈಗ ಪಾತ್ರಗಳನ್ನು ಮಾಡುತ್ತಿರುವ ಶ್ರುತಿಯ ಅಭಿನಯಕ್ಕೆ ಹ್ಯಾಟ್ಸಾಫ್! ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶ್ರುತಿಗೆ ಜನ್ಮದಿನದ ಶುಭಾಷಯಗಳು.

ಈ ಸುದ್ದಿಗಳನ್ನೂ ಓದಿ...

ಗೆದ್ದ ಜೊತೆಗಾರ: ಗೆಲುವಿನ ನಗೆಯಲ್ಲಿ ಲವ್ಲೀ ಪ್ರೇಮ್

ರಜನಿ- ಐಶ್ ಎಂದಿರನ್‌ಗೆ ಎದುರು ಕನ್ನಡದ ಗುಬ್ಬಿ!

ಮಮ್ಮುಟ್ಟಿ ಶಿಕಾರಿಗೆ ಶ್ರದ್ಧಾ ಅಲ್ಲ, ಪೂನಂ!

ಚೇತನ್ ದುರಾದೃಷ್ಟ: ಕೈತಪ್ಪಿಹೊದ ಮರೆಯಲಾರೆ

ಎಸ್.ನಾರಾಯಣ್ ವೀರ ಪರಂಪರೆ ಆಡಿಯೊ ಬಿಡುಗಡೆ

ಸುದೀಪರ ಕೆಂಪೇಗೌಡನಿಗೆ ಒಲಿದ ರಾಗಿಣಿ

ನಾನು ನನ್ನ ಕನಸು: 125 ಓಡಿದ್ರೂ 70 ಲಕ್ಷ ರೂ ನಷ್ಟ!

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರುತಿ, ಉಪೇಂದ್ರ, ಎ, ವಿಷ್ಣುವರ್ಧನ್, ಕನ್ನಡ ಚಿತ್ರರಂಗ