ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅನ್ಸಾರಿ, ಸಬಾವುದ್ದೀನ್ ಕುಖ್ಯಾತ ಉಗ್ರರು: ಸರ್ಕಾರಿ ವಕೀಲ (Fahim Ansari | Sabauddin Ahmed | Ajmal Amir Kasab | Mumbai attack)
Bookmark and Share Feedback Print
 
ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಯಾನೆ ಸಬಾವುದ್ದೀನ್ ಶೇಖ್ ಕುಖ್ಯಾತ ಭಯೋತ್ಪಾದಕರು ಎಂದು ಸರಕಾರಿ ವಕೀಲ ಅಜ್ವಲ್ ನಿಕಂ ಹೇಳಿದ್ದು, ವಿಶೇಷ ನ್ಯಾಯಾಲಯದ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಸರಕಾರವನ್ನು ಕೋರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಬ್ ತಪ್ಪಿತಸ್ಥ ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದ ನಂತರ ಅವರು ಮಾತನಾಡುತ್ತಾ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯವು ಇಬ್ಬರು ಭಾರತೀಯ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ದೋಷಮುಕ್ತಗೊಳಿಸಿತ್ತು.

ಅನ್ಸಾರಿ ಮತ್ತು ಸಬಾವುದ್ದೀನ್ ಇಬ್ಬರೂ ನಟೋರಿಯಸ್ ಭಯೋತ್ಪಾದಕರು. ಅವರು ಲಷ್ಕರ್ ಇ ತೋಯ್ಬಾ ಭಯೋತ್ಪಾದಕರ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರೇ ಹೊರತು ಜಡವಾಗಿರುವ ಸುಪ್ತರಲ್ಲ ಎಂದು ಕಸಬ್ ವಿರುದ್ಧ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ನಿಕಂ ತಿಳಿಸಿದ್ದಾರೆ.

ಈ ತೀರ್ಪನ್ನು ನಾನು ಪ್ರಶ್ನಿಸುತ್ತೇನೆ. ಇಬ್ಬರನ್ನು ಖುಲಾಸೆಗೊಳಿಸಿರುವ ತೀರ್ಪಿಗೆ ಮೇಲ್ಮನವಿ ಸಲ್ಲಿಸುವಂತೆ ನಾನು ಸರಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅನ್ಸಾರಿಯನ್ನು 2008ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ಹಾಗೂ ಸಬಾವುದ್ದೀನ್‌ನನ್ನು 2008ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. 2008ರ ನವೆಂಬರ್ ಮುಂಬೈ ದಾಳಿಯ ನಂತರ ಅವರಿಬ್ಬರನ್ನೂ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಇವರಿಬ್ಬರೂ ತಾವು ಬಂಧನಕ್ಕೆ ಒಳಗಾಗುವ ಮೊದಲು ಭಯೋತ್ಪಾದಕರಿಗೆ ಮುಂಬೈಯ ವಿವಿಧ 12 ಸ್ಥಳಗಳ ನಕ್ಷೆಗಳನ್ನು ಒದಗಿಸಿದ್ದರು.

ಮುಂಬೈ ದಾಳಿ ನಡೆಸುವ ಮೊದಲು ಗುರಿಯಾಗುವ ಸ್ಥಳಗಳನ್ನು ಗುರುತಿಸಿ, ಅವುಗಳ ನಕ್ಷೆಯನ್ನು ಶೇಖಾ ಎಂಬ ವ್ಯಕ್ತಿಗೆ ಅನ್ಸಾರಿ ಹಸ್ತಾಂತರಿಸಿದ್ದ. ಆ ಶೇಖಾ ಎಂಬಾತ ಅದನ್ನು ಪಾಕಿಸ್ತಾನಿ ವ್ಯಕ್ತಿಗಳಿಗೆ ನೀಡಿದ್ದ. ಆದರೆ ಇದನ್ನು ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರು, 'ಇದಕ್ಕಿಂತ ಗೂಗಲ್ ಅತ್ಯುತ್ತಮ ನಕ್ಷೆಗಳನ್ನು ನೀಡುತ್ತವೆ' ಎಂದಿದ್ದಾರೆ.

ಅನ್ಸಾರಿ ಮತ್ತು ಶೇಖ್ ಇಬ್ಬರೂ ಪಾಕಿಸ್ತಾನದಲ್ಲಿ ನಡೆದ ಕಸಬ್ ಪಾಲ್ಗೊಂಡಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು ಎಂದು ಮುಂಬೈ ಕ್ರೈಂ ಬ್ರಾಂಚ್ ಆರೋಪಿಸಿತ್ತು.

ಸಂಬಂಧಪಟ್ಟ ಸುದ್ದಿಗಳಿವು:
** 'ನೀರು ಕೊಟ್ಟ ನನ್ನ ಮಗನನ್ನೂ ಕೊಂದಿದ್ದ ಕಸಬ್‌ ನೇಣಿಗೆ ಹಾಕಿ'
** ಗೌರವಗಳು ಪರಿಹಾರವಲ್ಲ, ಕಸಬ್‌ ಸಾಯಲೇಬೇಕು: ಓಂಬಳೆ ಪುತ್ರಿ
** ಕಸಬ್‌ಗೆ ಗಲ್ಲುಶಿಕ್ಷೆಯಾಗಬಹುದೇ?; ನಾಳೆ ಅಂತಿಮ ತೀರ್ಪು
** ಪಾಕ್ ಉಗ್ರ ಕಸಬ್‌ ದೋಷಿ: ಇಬ್ಬರು ಭಾರತೀಯರ ಖುಲಾಸೆ
** ಕಸಬ್ ತೀರ್ಪು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ: ಚಿದಂಬರಂ
ಸಂಬಂಧಿತ ಮಾಹಿತಿ ಹುಡುಕಿ