ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರ್ಷಗಟ್ಟಲೆ ಊಟವನ್ನೇ ಮಾಡದ 'ಬುದ್ಧ' ಮತ್ತೆ ಬಂದಿದ್ದಾನೆ! (Ram Bahadur Bomjon | Buddha Boy | Palden Dorje | Nepal)
Bookmark and Share Feedback Print
 
ಆತನಿಗೆ ಈಗಷ್ಟೇ 20 ತುಂಬಿದೆ. ವರ್ಷಗಟ್ಟಲೆ ತಿಂಡಿ-ತೀರ್ಥಗಳಿಲ್ಲದೆ ಬದುಕುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಾತ. ಅನುಯಾಯಿಗಳ ಪ್ರಕಾರ ಜ್ಞಾನೋದಯವೂ ಆಗಿದೆ. ಎಲ್ಲರೂ ಬಾಲ ಬುದ್ಧನೆಂದು ಕರೆದು ದೈವತ್ವಕ್ಕೇರಿಸಿದ್ದಾರೆ. ಹೆಸರು ರಾಮ್ ಬಹದ್ದೂರ್ ಬೋಂಜನ್. ಹತ್ತುಹಲವು ಕೌತುಕಗಳನ್ನು ಒಡಲಲ್ಲಿ ತುಂಬಿಕೊಂಡು ಕಾಣೆಯಾಗಿದ್ದವ ಈಗ ಮತ್ತೆ ಹೊರಜಗತ್ತಿಗೆ ಮರಳಿದ್ದಾನೆ.

ಗಿನ್ನಿಸ್ ದಾಖಲೆಗಳ ಪ್ರಕಾರ ಇದುವರೆಗೆ ನೀರಿಲ್ಲದೆ ವ್ಯಕ್ತಿಯೊಬ್ಬ ಬದುಕಿದ ಗರಿಷ್ಠ ದಿನ 18. ಆದರೆ ನೇಪಾಳದ ಈ 'ಬಾಲ ಬುದ್ಧ' ಅದನ್ನೆಲ್ಲ ಮೀರಿಸಿದ್ದಾನೆ. ತಿಂಗಳುಗಟ್ಟಲೆ, ವರ್ಷಗಟ್ಟಲೆ ಏನನ್ನೂ ಸೇವಿಸದೆ ಧ್ಯಾನಾಸಕ್ತನಾಗಿರುತ್ತಾನೆ ಎನ್ನುತ್ತಾರೆ ಆತನ ಅನುಯಾಯಿಗಳು.

ಈತನಿಗೆ ಪ್ರಾಣಿಗಳೆಂದರೆ ಅಪಾರ ಪ್ರೀತಿ, ಕಾಡಿಗೆ ಹೋಗಿ ವರ್ಷಗಟ್ಟಲೆ ಧ್ಯಾನದಲ್ಲೇ ನಿರತನಾಗಬಲ್ಲ ಶಕ್ತಿಯನ್ನೂ ಹೊಂದಿದ್ದಾನೆ. ಜನ ಈತನನ್ನು ಬುದ್ಧನ ಪುನರಾವತಾರ, ನಮ್ಮ ಪಾಪವನ್ನು ತೊಳೆಯಲು ಬುದ್ಧ ಮತ್ತೆ ಬಂದಿದ್ದಾನೆ ಎಂದೇ ನಂಬಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಬಿಬಿಸಿ, ಡಿಸ್ಕವರಿ ಸೇರಿದಂತೆ ಹಲವು ಟಿವಿ ಚಾನೆಲ್‌ಗಳು ಈತನನ್ನು ಸತ್ವ ಪರೀಕ್ಷೆಗೊಡ್ಡಿವೆ. ವಾರಗಟ್ಟಲೆ ನೇರ ಚಿತ್ರೀಕರಣ ನಡೆಸುವ ಮೂಲಕ ಬಹದ್ದೂರ್ ನಡತೆಯನ್ನು ಪರಿಶೀಲನೆ ನಡೆಸಿ ಸೋತೆವೆಂದು ಶಸ್ತ್ರಾಸ್ತ್ರ ತ್ಯಾಗ ಮಾಡಿವೆ.

ಹಲವು ವಿದೇಶಿ ವಿಜ್ಞಾನಿಗಳು ಕೂಡ ಈತನನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೂತಲ್ಲೇ ಭಂಗಿಯನ್ನೂ ಬದಲಾಯಿಸದೆ ವಾರಗಟ್ಟಲೆ ಕುಳಿತುಕೊಳ್ಳುವ ಆತನ ಶಕ್ತಿಯ ಬಗ್ಗೆ ಅವರಿಂದ ಯಾವುದೇ ಉತ್ತರ ನೀಡಲು ಸಾಧ್ಯವಾಗಿಲ್ಲ. ತಪಸ್ಸು ಮಾಡುತ್ತಿದ್ದಾತ ಇದ್ದಕ್ಕಿದ್ದಂತೆ ಮರದ ಪೊಟರೆಯೊಳಗೆ ನಾಪತ್ತೆಯಾಗುವುದೂ ನಿಗೂಢವಾಗಿಯೇ ಉಳಿದಿದೆ.

ಮುಂದಿನ ನಾಲ್ಕು ಪುಟಗಳಲ್ಲಿ ಮುಂದುವರಿದಿದೆ...

 
ಸಂಬಂಧಿತ ಮಾಹಿತಿ ಹುಡುಕಿ