ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಭಾರತ ಸಹಿ (India | Swiss accounts | Switzerland | Black money)
Bookmark and Share Feedback Print
 
ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿಟ್ಟಿರುವ ವಂಚಕರ ವಿವರಣೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಭಾರತವು ಸ್ವಿಜರ್ಲೆಂಡ್ ಸರಕಾರದ ಜತೆ ಪರಿಷ್ಕೃತ ತೆರಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ವಿತ್ತ ಸಚಿವ ಪ್ರಣಬ್ ಮುಖರ್ಜಿ ಮತ್ತು ಸ್ವಿಜರ್ಲೆಂಡ್ ವಿದೇಶಾಂಕ ಸಚಿವೆ ಮೈಕೆಲಿನ್ ಕಾಲ್ಮಿ-ರೇ ಅವರು ನವದೆಹಲಿಯಲ್ಲಿ ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಿದರು.

ಸ್ವಿಜ್ ಫೆಡರಲ್ ಕೌನ್ಸಿಲ್ ಮಾನದಂಡದಂತೆ ಚರ್ಚಿಸಿ ನಿರ್ಣಯಕ್ಕೆ ಬರಲಾಗಿದ್ದು, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ನೀತಿ ಸಂಹಿತೆಯಲ್ಲಿರುವ ಮಾಹಿತಿ ವಿನಿಮಯ ನಿಯಮಗಳನ್ನು ಪರಿಷ್ಕೃತ ದುಪ್ಪಟ್ಟು ತೆರಿಗೆ ಒಪ್ಪಂದ ನೀತಿಯು ಒಳಗೊಂಡಿದೆ ಎಂದು ಸ್ವಿಜ್ ಫೆಡರಲ್ ಡಿಪಾರ್ಟ್‌ಮೆಂಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಲವು ಭಾರತೀಯರು ಕೋಟ್ಯಂತರ ರೂಪಾಯಿ ಹಣವನ್ನು ಸ್ವಿಸ್ ಬ್ಯಾಂಕುಗಳ ಗುಪ್ತ ಖಾತೆಗಳಲ್ಲಿ ಇಟ್ಟಿರುವ ವಿಚಾರ ಕಳೆದ ಮಹಾ ಚುನಾವಣೆಯಲ್ಲಿ ಭಾರೀ ಚರ್ಚೆಗೊಳಗಾಗಿತ್ತು. ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುವುದಾಗಿಯೂ ಸರಕಾರ ಆಗ ಹೇಳಿಕೊಂಡಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿದ್ದ ಸ್ವಿಸ್ ಬ್ಯಾಂಕುಗಳು, ಮಾಹಿತಿ ವಿನಿಮಯವು ಒಇಸಿಡಿ ನಿಯಮಗಳ ಮಾನದಂಡದಂತೆ ಇರುತ್ತದೆ ಎಂದಿತ್ತು. ಅದರಂತೆ ಇದೀಗ ಸ್ವಿಜರ್ಲೆಂಡ್ ಜತೆಗಿನ ಒಪ್ಪಂದವನ್ನು ಭಾರತ ನವೀಕರಿಸಿದೆ.

ಒಇಸಿಡಿಯ ಮಾದರಿ ತೆರಿಗೆ ಒಪ್ಪಂದದಂತೆ ಹಲವು ದೇಶಗಳ ಜತೆ ಸ್ವಿಜರ್ಲೆಂಡ್ ಪರಿಷ್ಕೃತ ತೆರಿಗೆ ಒಪ್ಪಂದಗಳಿಗೆ ಮುಂದಾಗುತ್ತಿದೆ. ಇದರ ಮೂಲಕ ತೆರಿಗೆ ವಂಚಕರ ಬ್ಯಾಂಕ್ ಖಾತೆ ವಿವರಗಳನ್ನು ಸಂಬಂಧಪಟ್ಟ ದೇಶಕ್ಕೆ ನೀಡಲಾಗುತ್ತಿದೆ.

ಇದೀಗ ಮಾಡಿಕೊಳ್ಳಲಾಗಿರುವ ದುಪ್ಪಟ್ಟು ತೆರಿಗೆ ಒಪ್ಪಂದದಂತೆ ಭಾರತವು ತನ್ನ ದೇಶದ ವ್ಯಕ್ತಿಗಳು ಹೊಂದಿರುವ ಖಾತೆಯ ವಿವರಗಳನ್ನು 2011ರ ಜನವರಿಯಿಂದ ಸ್ವಿಸ್ ಬ್ಯಾಂಕಿನಲ್ಲಿ ಕೇಳಬಹುದಾಗಿದೆ.

ಸಂಬಂಧಪಟ್ಟ ಸುದ್ದಿಗಳು:
** ಸ್ವಿಸ್ ಹಣ ಬಂದ್ರೆ ನಿಮಗೂ 50 ಸಾವಿರ ಸಿಗಲಿದೆ!
** ಕಪ್ಪುಹಣದ ಅಂಕಿ-ಅಂಶವಿಲ್ಲ: ಸ್ವಿಸ್ ಬ್ಯಾಂಕ್
** ಖಾತೆಗಳ ವಿವರ ಬಹಿರಂಗಕ್ಕೆ ಸ್ವಿಸ್ ಬ್ಯಾಂಕ್ ನಕಾರ‌
** ಒಪ್ಪಂದ ನವೀಕರಣವಾಗಲಿ, ಮಾಹಿತಿ ಕೊಡ್ತೇವೆ: ಸ್ವಿಸ್
ಸಂಬಂಧಿತ ಮಾಹಿತಿ ಹುಡುಕಿ