ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್‌ಗೆ ಮಾತ್ರ ಶಿಕ್ಷೆ ಯಾಕೆ?: ಇದು ಪಾಕಿಸ್ತಾನೀಯರ ಪ್ರಶ್ನೆ (Faridkot | Pakistan | Mohammed Ajmal Amir Kasab | Mumabi attack)
Bookmark and Share Feedback Print
 
ತಪ್ಪು ಮಾಡಿದ ಎಲ್ಲರನ್ನೂ ಒಂದೇ ರೀತಿಯಲ್ಲಿ ಉಪಚರಿಸುವುದನ್ನು ಬಿಟ್ಟು ಕೇವಲ ನಮ್ಮ ಕಸಬ್‌ನನ್ನು ಮಾತ್ರ ಕ್ರಿಮಿನಲ್ ಎಂದು ಘೋಷಿಸಲಾಗಿದೆ. ಇದು ಪಾಕಿಸ್ತಾನದ ವಿರುದ್ಧ ನೀಡಲಾಗಿರುವ ತೀರ್ಪು. ಕಸಬ್ ಮಗು ಇದ್ದಂತೆ, ಮುಂಬೈ ದಾಳಿ ಘಟನೆಗೆ ಅವನು ಕಾರಣನಲ್ಲ -- ಹೀಗೆಂದು ಹೇಳುತ್ತಿರುವವರು ಕಸಬ್ ಹುಟ್ಟೂರಿನವರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಜೀವಂತವಾಗಿ ಸೆರೆ ಸಿಕ್ಕಿದ್ದ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ನಿನ್ನೆ ವಿಶೇಷ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ದಾಳಿಯಲ್ಲಿ ನೆರವಾಗಿದ್ದ ಇಬ್ಬರು ಭಾರತೀಯರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರನ್ನು ನಿರ್ದೋಷಿಗಳೆಂದು ಹೇಳಿತ್ತು.

ಆದರೆ ಈ ತೀರ್ಪಿಗೆ ಕಸಬ್ ಹುಟ್ಟೂರು ಫರೀದ್‌ಕೋಟ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನಮ್ಮ ಹುಡುಗನಿಗೆ ತಾರತಮ್ಯ ಎಸಗಲಾಗಿದೆ, ಆತ ಆ ಕೃತ್ಯವನ್ನು ನಡೆಸೇ ಇಲ್ಲ ಎಂದು ಅವರು ವಾದಿಸುತ್ತಿದ್ದಾರೆ.

ನ್ಯಾಯಾಲಯ ತೀರ್ಪು ನೀಡಲಿದ್ದ ಹಿನ್ನೆಲೆಯಲ್ಲಿ ನಿನ್ನೆ ದಿನಪೂರ್ತಿ ಬಹುತೇಕ ಪಾಕಿಸ್ತಾನೀಯರು ಟಿವಿ ಪೆಟ್ಟಿಗೆಗಳ ಮುಂದೆಯೇ ಕಳೆದಿದ್ದರು. ಕಸಬ್ ತಪ್ಪಿತಸ್ಥ ಎಂದು ಪ್ರಕಟವಾಗುತ್ತಿದ್ದಂತೆ ಅವರೆಲ್ಲ ನಿರಾಸೆಗೊಳಗಾಗಿದ್ದಾರೆ.

ಬಂಧಿತ ಎಲ್ಲರನ್ನೂ ಒಂದೇ ರೀತಿಯಾಗಿ ಯಾಕೆ ನೋಡಿಕೊಳ್ಳಲಾಗಿಲ್ಲ. ಅಜ್ಮಲ್ ಒಬ್ಬನನ್ನೇ ಯಾಕೆ ಕ್ರಿಮಿನಲ್ ಎಂದು ಘೋಷಿಸಲಾಗಿದೆ. ಇದು ಸಂಪೂರ್ಣವಾಗಿ ಪಾಕಿಸ್ತಾನದ ವಿರುದ್ಧವಾಗಿದೆ. ನಮ್ಮ ಅಜ್ಮಲ್ ಮಗು. ಆತ ಖಂಡಿತಾ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ ಎಂದು ಫರೀದ್‌ಕೋಟ್‌ನ 50ರ ಹರೆಯದ ರೈತ ಮುಹಮ್ಮದ್ ಇಕ್ಬಾಲ್ ಎಂಬವರು ಕೋಪದಿಂದಲೇ ಹೇಳಿಕೊಂಡಿದ್ದಾರೆ.

ಇದು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದೆ. ನನ್ನ ಪ್ರಕಾರ ಕಸಬ್‌ನನ್ನು ಗಲ್ಲಿಗೇರಿಸುವ ಬದಲು ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವುದೇ ಉತ್ತಮ ಎಂದು ಮತ್ತೊಬ್ಬ ರೈತ ಮುಹಮ್ಮದ್ ಯಾಸಿನ್ ತಿಳಿಸಿದ್ದಾರೆ.

ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುವ ಈ ಹಳ್ಳಿಯಲ್ಲಿ ಬಹುತೇಕ ಮಂದಿ ಕಾರ್ಮಿಕರು ಮತ್ತು ಸಣ್ಣ ರೈತರು. ಇಲ್ಲಿರುವ ಕೆಲವೇ ಕೆಲವರು ಮಾತ್ರ ಅಕ್ಷರಸ್ಥರಾಗಿದ್ದಾರೆ.

ಭಾರತದ ವಿರುದ್ಧ ಆತ ಮಾಡಿದ್ದು ಸರಿ...
ಭಾರತದಲ್ಲಿ ಕಸಬ್‌ ತಪ್ಪಿತಸ್ಥ ಎಂದು ಘೋಷಣೆಯಾಗಿರುವುದರ ಕುರಿತು ಚರ್ಚೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ನೂರ್ ಅಹ್ಮದ್ ಎಂಬ 45ರ ಹರೆಯದ ವ್ಯಕ್ತಿಯೊಬ್ಬರು, 'ಅವರು ನಮ್ಮ ಅಜ್ಮಲ್ ಕುರಿತು ಮಾತನಾಡುತ್ತಿದ್ದಾರೆಯೇ?' ಎಂದು ಪ್ರಶ್ನಿಸಿದರು.

ನಂತರ, ಇಲ್ಲ.. ನಮಗೆ ಆತನ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಆತ ಮುಸ್ಲಿಂ ಆಗಿರುವುದರಿಂದ ಆತನ ಬಗ್ಗೆ ನಮ್ಮ ಸಹಾನುಭೂತಿಯಿದೆ ಎಂದರು.

ಆದರೆ ಕಸಬ್‌ಗೆ ನೀಡುವ ಯಾವುದೇ ಶಿಕ್ಷೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ನೋಡಿ, ಕಸಬ್‌ನನ್ನು ದೂಷಿಸಬೇಡಿ. ನಮ್ಮ ಧರ್ಮದಲ್ಲಿ ನಂಬಿಕೆಯಿಲ್ಲದ ಭಾರತದಂತಹ ದೇಶದ ವಿರುದ್ಧ ಉತ್ತಮ ಉದ್ದೇಶದೊಂದಿಗೆ ಆತ ಈ ಕೃತ್ಯ ಎಸಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಕಸಬ್‌ನನ್ನು ಭಾರತ ಕ್ಷಮಿಸಬೇಕು. ಪಾಕಿಸ್ತಾನದೊಂದಿಗಿನ ಸಂಬಂಧ ವೃದ್ಧಿಯ ನಿಟ್ಟಿನಲ್ಲಿ ಆತನನ್ನು ಬಿಡುಗಡೆ ಮಾಡಲಿ ಎಂದು 60 ಹರೆಯದ ರೈತ ಅಮ್ಜದ್ ಆಲಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ರೈತ 42ರ ಹರೆಯದ ಬಕಾತ್ ಯಾರ್ ಎಂಬವರು ಆರಂಭದಲ್ಲಿ ಕಸಬ್ ತಪ್ಪಿತಸ್ಥನಾದರೆ ಶಿಕ್ಷೆ ನೀಡಲಿ ಎಂದು ಹೇಳಿದರಾದರೂ, ನಂತರ ಅದನ್ನು ವಾಪಸ್ ಪಡೆದುಕೊಂಡರು. ಅಲ್ಲದೆ ಭಾರತವು ಕಸಬ್‌ಗೆ ಮರಣದಂಡನೆ ನೀಡಬಾರದು. ಆತ ಒಬ್ಬ ಮುಸ್ಲಿಂ. ಹಾಗಾಗಿ ಭಾರತದ ವಿರುದ್ಧ ಹಾಗೆ ಮಾಡಿದ್ದರೆ, ನಮ್ಮ ಪಕ್ಕದ ರಾಷ್ಟ್ರ ಭಾರತವು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಸಂಬಂಧಪಟ್ಟ ಸುದ್ದಿಗಳಿವು:
** 'ನೀರು ಕೊಟ್ಟ ನನ್ನ ಮಗನನ್ನೂ ಕೊಂದಿದ್ದ ಕಸಬ್‌ ನೇಣಿಗೆ ಹಾಕಿ'
** ಗೌರವಗಳು ಪರಿಹಾರವಲ್ಲ, ಕಸಬ್‌ ಸಾಯಲೇಬೇಕು: ಓಂಬಳೆ ಪುತ್ರಿ
** ಕಸಬ್‌ಗೆ ಗಲ್ಲುಶಿಕ್ಷೆಯಾಗಬಹುದೇ?; ನಾಳೆ ಅಂತಿಮ ತೀರ್ಪು
** ಪಾಕ್ ಉಗ್ರ ಕಸಬ್‌ ದೋಷಿ: ಇಬ್ಬರು ಭಾರತೀಯರ ಖುಲಾಸೆ
** ಕಸಬ್ ತೀರ್ಪು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ: ಚಿದಂಬರಂ
** ಅನ್ಸಾರಿ, ಸಬಾವುದ್ದೀನ್ ಕುಖ್ಯಾತ ಉಗ್ರರು: ಸರ್ಕಾರಿ ವಕೀಲ

ಸಂಬಂಧಿತ ಮಾಹಿತಿ ಹುಡುಕಿ