ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದ: ಮತದಾನಕ್ಕೆ ಬಿಜೆಪಿ ಪಟ್ಟು
ಭಾರತ-ಅಮೆರಿಕ ಪರಮಾಣು ಒಪ್ಪಂದವು ಭವಿತವ್ಯದ ಪರಮಾಣು ಪರೀಕ್ಷೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುತ್ತಾ ತಿರಸ್ಕರಿಸಿರುವ ಬಿಜೆಪಿಯು, ಒಡಂಬಡಿಕೆಗೆ ಸಹಿ ಹಾಕುವ ಮುನ್ನ ಲೋಕಸಭೆಯಲ್ಲಿ ಈ ಬಗ್ಗೆ ಮತದಾನ ನಡೆಯಬೇಕು ಎಂದು ಆಗ್ರಹಿಸಿದೆ.

184ನೇ ವಿಧಿಯನುಸಾರ ಈ ಕುರಿತು ಮತದಾನ ನಡೆಸುವಂತೆ ನಾವು ಲೋಕಸಭೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದೇವೆ ಎಂದು ಲೋಕಸಭೆಯ ಬಿಜೆಪಿ ಉಪನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ಅವರು ಹೇಳಿದರು. ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 10ರಂದು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೇಳಿಕೆ ಹೊರಬಿದ್ದಿದೆ.

ಜುಲೈ 22ರಂದು ವಾಷಿಂಗ್ಟನ್‌ನಲ್ಲಿ ನಡೆದ 123 ಒಡಂಬಡಿಕೆಯ ಕುರಿತು ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಎಡಪಕ್ಷಗಳ ನಾಯಕರು ತಮ್ಮೊಳಗೆ ಸಮಾಲೋಚನೆ ನಡೆಸುತ್ತಿರುವ ಸಮಯದಲ್ಲೇ ಪ್ರತಿಪಕ್ಷಗಳು ಈ ಒತ್ತಾಯ ಮುಂದಿಡುತ್ತಿವೆ.

ನಾಗರಿಕ ಪರಮಾಣು ಒಪ್ಪಂದವು ಕಾರ್ಯಾನುಷ್ಠಾನಗೊಂಡ ಬಳಿಕ ಈ ಕರಡು ಒಪ್ಪಂದವು ಭವಿಷ್ಯದಲ್ಲಿ ಭಾರತದ ಅಣು ಪರೀಕ್ಷೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಲ್ಹೋತ್ರಾ ಆಪಾದಿಸಿದರು.

ಶುಕ್ರವಾರ ಕೇಂದ್ರ ಸರಕಾರವು 123 ಒಪ್ಪಂದದ ಕರಡು ಬಿಡುಗಡೆಗೊಳಿಸಿದ ಬಳಿಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ಪಕ್ಷದ ಸಹೋದ್ಯೋಗಿಗಳಾದ ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್ ಮತ್ತು ಅರುಣ್ ಶೌರಿ ಅವರು ಸಭೆ ಸೇರಿ ಈ ಕುರಿತು ಬಿಜೆಪಿಯು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದರು.
ಮತ್ತಷ್ಟು
ತೃತೀಯ ರಂಗ ಪತನ: ಯೆಚೂರಿ
ಬಿಹಾರ,ಅಸ್ಸಾಂ ಪ್ರವಾಹಕ್ಕೆ ತತ್ತರ
ನನ್ನದು ಸಕ್ರಿಯ ರಾಜಕೀಯ-ಪ್ರತಿಭಾ
ಹನೀಫ್‌:ಬಿಜೆಪಿ-ಆರ್‌ಎಸ್‌ಎಸ್ ದ್ವಂದ್ವ
ಪೊಲೀಸ್‌ ಗುಂಡು:1ಸಾವು
ಸಿಂಗ್‌, ಸೋನಿಯಾ-ಕ್ರಿಮಿನಲ್ ದೂರು