ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹನೀಫ್ ಗೌರವ ಪ್ರಜೆ:ಆಸ್ಟ್ರೇಲಿಯ ನಕಾರ
ಉಗ್ರಗಾಮಿ ಸಂಪರ್ಕ ಆರೋಪದನ್ವಯ ಆಸ್ಟ್ರೇಲಿಯಾದಿಂದ ಭಾರತ ಸೇರಿರುವ ವೈದ್ಯ ಡಾ.ಹನೀಫ್‌ಗೆ 'ಗೌರವಪ್ರಜೆ'ಯಾಗಿ ನೆಲೆಸುವ ಅವಕಾಶವನ್ನೂ ಅಲ್ಲಿನ ಸರ್ಕಾರ ನಿರಾಕರಿಸಿದೆ.

ಡಾ. ಹನೀಫ್ ಇತ್ತೀಚೆಗೆ ಸಲ್ಲಿಸಿದ ಮನವಿಯಲ್ಲಿ ತನಗೆ ಗೌರವ ಪ್ರಜೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಲು ಅವಕಾಶ ನೀಡಬೇಕೆಂದು ಆ ಸರ್ಕಾರವನ್ನು ವಿನಂತಿಸಿದ್ದರು.

ಪ್ರಸ್ತುತ ವಿನಂತಿಗೆ ಪ್ರತಿಕ್ರಿಯಿಸಿರುವ ಅಲ್ಲಿನ ಪ್ರಧಾನಮಂತ್ರಿ ಜಾನ್ ಹಾರ್ವರ್ಡ್ ಅವರು ಗೌರವ ಪ್ರಜೆಯಾಗಿ ವಿದೇಶಿಯರಿಗೆ ನೆಲೆಸಲು ಅವಕಾಶ ನೀಡುವ ಯಾವುದೇ ಕಾಯ್ದೆ ಆಸ್ಟ್ರೇಲಿಯಾದಲ್ಲಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ಹನೀಫ್ ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ, ನಾನೋರ್ವ ಉತ್ತಮ ವೈದ್ಯ, ಈ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರವು ನನಗೆ ಗೌರವ ಪ್ರಜೆ ಎನ್ನುವ ವಿಧಾನದಲ್ಲಾದರೂ ಅಲ್ಲಿ ನೆಲೆಸಲು ಅವಕಾಶ ನೀಡಬಹುದು ಎಂದಿದ್ದರು. ಹಾವರ್ಡ್ ಅವರು ಪ್ರಸ್ತುತ ಮಾಧ್ಯಮ ಹೇಳಿಕೆಯನ್ನುಲ್ಲೇಖಿಸಿ ಪ್ರಸ್ತುತ ನಿರಾಕರಣೆ ವ್ಯಕ್ತಪಡಿಸಿದ್ದಾರೆ.

ಪರಿಹಾರ: ಭಾರತದಿಂದ ಆಸ್ಟ್ರೇಲಿಯಾ ತಲುಪಿರುವ ಡಾ. ಹನೀಫ್‌ರ ವಕೀಲ ಪೀಟರ್ ರೂಸೊ ಇದೀಗ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಹೊಸ ಪ್ರಕರಣವೊಂದನ್ನು ದಾಖಲಿಸಲು ನಿರ್ಧರಿಸಿದ್ದಾರೆ. ಆಸ್ಟ್ರೇಲಿಯಾದಿಂದ ಹೊರಹಾಕಿರುವುದರಿಂದ ವೈದ್ಯನ ಕುಟುಂಬಕ್ಕಾಗಿರುವ ನಷ್ಟವನ್ನು ಆಸ್ಟ್ರೇಲಿಯಾ ಭರಿಸಬೇಕಿದೆ ಎಂದಿದ್ದಾರೆ. ಆದರೆ ಕುಟುಂಬ ಈ ಕುರಿತು ಏನನ್ನೂ ನೇರವಾಗಿ ತಿಳಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು
ಅಣು ಒಪ್ಪಂದ: ಮತದಾನಕ್ಕೆ ಬಿಜೆಪಿ ಪಟ್ಟು
ತೃತೀಯ ರಂಗ ಪತನ: ಯೆಚೂರಿ
ಬಿಹಾರ,ಅಸ್ಸಾಂ ಪ್ರವಾಹಕ್ಕೆ ತತ್ತರ
ನನ್ನದು ಸಕ್ರಿಯ ರಾಜಕೀಯ-ಪ್ರತಿಭಾ
ಹನೀಫ್‌:ಬಿಜೆಪಿ-ಆರ್‌ಎಸ್‌ಎಸ್ ದ್ವಂದ್ವ
ಪೊಲೀಸ್‌ ಗುಂಡು:1ಸಾವು