ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಮಾಚಲದಲ್ಲಿ ಕೊನೆಗೂ ಸೆರೆ ಸಿಕ್ಕ ನಿತ್ಯಾನಂದ ಸ್ವಾಮಿ (Nityananda Swami Arrest | Sex Scandal | Ranjitha | Bidadi | Dhyanapeeta)
Bookmark and Share Feedback Print
 
ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳು ನಟಿ ರಂಜಿತಾ ಜತೆಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದಕ್ಕೆ ತುತ್ತಾಗಿ ತಲೆ ಮರೆಸಿಕೊಂಡಿದ್ದ ಪರಮಹಂಸ ನಿತ್ಯಾನಂದ ಸ್ವಾಮಿಯನ್ನು ಹಿಮಾಚಲ ಪ್ರದೇಶದಲ್ಲಿ ಇಂದು ಬಂಧಿಸಲಾಗಿದೆ.

ಹಿಮಾಚಲ ಪ್ರದೇಶದ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಪೊಲೀಸರು ಸೋಲನ್ ಜಿಲ್ಲೆಯ ಅರ್ಕಿ ಪ್ರದೇಶದ ವಿಕ್ರಂಪುರದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸ್ವಾಮಿಯನ್ನು ಬಂಧಿಸಲಾಗಿದೆ. ಮಾರ್ಚ್ 27ರಿಂದ ಸ್ವಾಮಿಯನ್ನು ಇಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.

ಸ್ವಾಮಿ ಜತೆಗಿದ್ದ ಅವರ ನಾಲ್ವರು ಸಹಚರರನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 1.30ರ ಸಮಯಕ್ಕೆ ಆರೋಪಿಗಳನ್ನು ಬಂಧಿಸಲಾಗಿದೆ. ನಾಳೆ ಶಿಮ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರೆದುರು ಹಾಜರುಪಡಿಸಿದ ನಂತರ ಕರ್ನಾಟಕ್ಕೆ ತರಲಾಗುತ್ತದೆ ಎಂದು ಸಿಒಡಿ ಎಸ್‌ಪಿ ಯೋಗಪ್ಪ ಅವರು ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠಕ್ಕೆ ತಿಳಿಸಿದ್ದಾರೆ.

ಮೇ 20ರೊಳಗೆ ಬಂಧಿಸುವಂತೆ ಆದೇಶವಿತ್ತು...
ಸೆಕ್ಸ್ ಕಾಂಡ ಬಹಿರಂಗವಾಗುತ್ತಿದ್ದಂತೆ ಚೆನ್ನೈಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ನಿತ್ಯಾನಂದ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ನಂತರ ಪ್ರಕರಣವನ್ನು ತಮಿಳುನಾಡು ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಸ್ವಾಮಿ ಎಲ್ಲಿದ್ದಾರೆ ಎಂಬ ಮಾಹಿತಿ ಇದ್ದರೂ, ಇಲ್ಲದೇ ಇದ್ದರೂ ಆರೆಸ್ಟ್ ವಾರೆಂಟ್ ಜಾರಿಗೊಳಿಸುವಂತೆ ಸೋಮವಾರ ಶ್ರೀಪೆರಂಬೂರ್ ಜಿಲ್ಲಾ ಮುನ್ಸಿಪ್ ಮ್ಯಾಜಿಸ್ಟ್ರೇಟ್ ಎಸ್. ಗುಣಶೇಖರ್ ಅವರು ಕರ್ನಾಟಕದ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಆದೇಶ ನೀಡಿದ್ದರು. ಅಲ್ಲದೆ ಈ ಸಂಬಂಧ ಅಗತ್ಯ ಬಿದ್ದರೆ ಒಂದು ವಿಶೇಷ ತಂಡವನ್ನು ರಚಿಸಿ ಮೇ 20ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದರು.
PR

ಸ್ವಾಮಿಯ ಅನುಯಾಯಿ, ಮಾಜಿ ಕಾರು ಚಾಲಕ ಲೆನಿನ್ ಕರುಪ್ಪನ್ ಯಾನೆ ಧರ್ಮಾನಂದ ಎಂಬಾತ ನೀಡಿದ ದೂರಿನ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ವಿರುದ್ಧ ಸೆಕ್ಷನ್ 420, 120ಬಿ, 377, 376, 295ಎ ಮತ್ತು 506ರ ಅಡಿಯಲ್ಲಿ ಅತ್ಯಾಚಾರ, ಸಲಿಂಗಕಾಮ, ವಂಚನೆ, ಧಾರ್ಮಿಕ ನಂಬಿಕೆಗಳಿಗೆ ದ್ರೋಹ ಮುಂತಾದ ಹಲವು ಕ್ರಿಮಿನಲ್ ಪ್ರಕರಣಗಳು ವಿವಿಧೆಡೆ ದಾಖಲಾಗಿವೆ.

ಆರೋಪಗಳನ್ನು ಎದುರಿಸುತ್ತಿದ್ದ ನಿತ್ಯಾನಂದ ಸ್ವಾಮಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟನ್ನು ಹೊರಡಿಸಲಾಗಿತ್ತು. ಸ್ವಾಮಿ ಕೃತ್ಯದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಸೆಲ್ವಮಣಿ ಎಂಬವರು ದಾಖಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯವು ಸ್ವಾಮಿ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು.

ಆಶ್ರಮದ ಮೇಲೆ ದಾಳಿ...
ಈ ನಡುವೆ ಇಂದು ಬಿಡದಿ ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಆಶ್ರಮದಿಂದ ಮೂರು ಲಕ್ಷ ರೂಪಾಯಿ ನಗದು, ಏಳು ಸಾವಿರ ಅಮೆರಿಕನ್ ಡಾಲರ್ಸ್ (ಸುಮಾರು 3.11 ಲಕ್ಷ ರೂಪಾಯಿ) ಮತ್ತು ಟ್ರಾವೆಲರ್ಸ್ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ ಸ್ವಾಮಿಯರ ಇಬ್ಬರು ಅನುಯಾಯಿಗಳಾದ ನಿತ್ಯಾಭಕ್ತಾನಂದ, ಗೋಪಾಲ ಸೀಲಂ ರೆಡ್ಡಿ ಎಂಬವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಿಐಡಿ ಪೊಲೀಸ್ ಮಹಾ ನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ತಿಳಿಸಿದ್ದಾರೆ.

ಮಾರ್ಚ್ 2ರಂದು ಬಹಿರಂಗವಾಗಿತ್ತು...
ತಮಿಳು ನಟಿ ರಂಜಿತಾ ಮತ್ತು ಯುವರಾಣಿ ಎಂಬ ಇಬ್ಬರು ನಟಿಯರ ಜತೆ ಬಿಡದಿಯಲ್ಲಿ ಪ್ರಧಾನ ಆಶ್ರಮ ಹೊಂದಿರುವ ನಿತ್ಯಾನಂದ ಸ್ವಾಮಿ ರಾಸಲೀಲೆಯಲ್ಲಿ ತೊಡಗಿದ್ದಾರೆ ಎಂದು ತಮಿಳುನಾಡಿನ ಸನ್ ಟೀವಿ ತನ್ನ ವಾರ್ತಾವಾಹಿನಿಯಲ್ಲಿ ವೀಡಿಯೋ ಸಹಿತ ಪ್ರಸಾರ ಮಾಡಿತ್ತು. ಇದರ ಬೆನ್ನಿಗೆ ಭಾರೀ ಪ್ರತಿಭಟನೆಗಳು ನಡೆದಿದ್ದವು.

ಬಿಡದಿ, ಚೆನ್ನೈ ಸೇರಿದಂತೆ ದೇಶ-ವಿದೇಶಗಳಲ್ಲಿ ನೂರಾರು ಆಶ್ರಮಗಳನ್ನು ಹೊಂದಿದ್ದ ನಿತ್ಯಾನಂದ ಸ್ವಾಮಿಯ ವಿರುದ್ಧ ಭಾರೀ ಆಕ್ರೋಶಗಳು ಬರುತ್ತಿದ್ದಂತೆ ದೇವಮಾನವ ನಾಪತ್ತೆಯಾಗಿದ್ದರು. ಆದರೆ ಅವರ ವಕ್ತಾರರು ಸ್ವಾಮಿಯನ್ನು ಸಮರ್ಥಿಸಿಕೊಂಡೇ ಬರುತ್ತಿದ್ದರು.

ಈ ನಡುವೆ ಸ್ವಾಮೀಜಿಯ ರಾಸಲೀಲೆಯನ್ನು ಚಿತ್ರೀಕರಿಸಿದ್ದು ನಾನೇ ಎಂದು ಲೆನಿನ್ ಕರುಪ್ಪನ್ ಎಂಬ ವ್ಯಕ್ತಿ ಬೆಳಕಿಗೆ ಬಂದಿದ್ದರು. ತಾನು ಸ್ವಾಮಿಯ ಮಾಜಿ ಅನುಯಾಯಿಯೆಂದು ಹೇಳಿಕೊಂಡ ಇವರ ಮತ್ತೊಂದು ಹೆಸರು ಧರ್ಮಾನಂದ. ತನ್ನನ್ನು ಸ್ವಾಮಿ ಕಡೆಯವರು ಹತ್ಯೆಗೈಯಲು ಯತ್ನಿಸಿದ್ದರು, ಈಗಲೂ ಜೀವ ಬೆದರಿಕೆ ಎದುರಿಸುತ್ತಿದ್ದೇನೆ ಎಂದಿದ್ದ ಕರುಪ್ಪನ್, ಸ್ವಾಮಿ ಕುರಿತ ಹಲವು ವಿಚಾರಗಳನ್ನು ಪೊಲೀಸರಲ್ಲಿ ಬಹಿರಂಗಪಡಿಸಿದ್ದಲ್ಲದೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರು.

ಇದಾದ ಕೆಲ ದಿನಗಳ ನಂತರ ತನ್ನ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದ ಸ್ವಾಮಿ, ಅಜ್ಞಾತ ಸ್ಥಳದಿಂದ ತನ್ನ ಭಕ್ತರಿಗೆ ಸಂದೇಶ ಕಳುಹಿಸಿದ್ದರು. ಬಳಿಕ ಹಲವು ಮಾಧ್ಯಮಗಳಲ್ಲಿ ನಿತ್ಯಾನಂದ ಸಂದರ್ಶನಗಳು ಭಿತ್ತರವಾಗಿದ್ದವು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಾನೇನೂ ತಪ್ಪು ಮಾಡಿಲ್ಲ, ವೀಡಿಯೋಗಳಲ್ಲಿರುವುದು ನಾನೇ, ಆದರೆ ಪೂರ್ತಿ ನಾನಲ್ಲ. ವೀಡಿಯೋಗಳನ್ನು ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ. ಇದು ನನ್ನ ಏಳ್ಗೆಯನ್ನು ಸಹಿಸದ ವಿರೋಧಿಗಳು ಮಾಡಿರುವ ಕುತಂತ್ರ. ಭಕ್ತರು ತಾಳ್ಮೆಯಿಂದಿರಬೇಕು ಎಂದು ಸಂದರ್ಶನಗಳಲ್ಲಿ ನಿತ್ಯಾನಂದ ತಿಳಿಸಿದ್ದರು.

ಸ್ವಾಮಿಯವರು ಕುಂಭಮೇಳಕ್ಕೆ ತೆರಳಿದ್ದಾರೆ, ಕಾರ್ಯಕ್ರಮ ಮುಗಿದ ನಂತರ ಅವರು ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತ ಬಿಡದಿ ಆಶ್ರಮದ ಸ್ವಾಮಿ ಅನುಯಾಯಿಗಳು ಹೇಳುತ್ತಿದ್ದರು. ಆದರೆ ಕುಂಭಮೇಳ ಮುಗಿದ ನಂತರವೂ ಸ್ವಾಮಿ ಕಾಣಿಸಿಕೊಂಡಿರಲಿಲ್ಲ.

ಕೊನೆಗೂ ಸ್ವಾಮಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಒಂದೆರಡು ದಿನಗಳಲ್ಲಿ ಅವರನ್ನು ಹಿಮಾಚಲ ಪ್ರದೇಶದಿಂದ ಕರ್ನಾಟಕಕ್ಕೆ ತಂದು ಇಲ್ಲಿನ ಮ್ಯಾಜಿಸ್ಟ್ಟೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಸಿಒಡಿ ಮೂಲಗಳು ತಿಳಿಸಿವೆ.

ಸಂಬಂಧಪಟ್ಟ ಸುದ್ದಿಗಳಿವು:
** ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ
** 80 ರೂಪಾಯಿಗೆ 'ಸ್ವಾಮಿಕಾಮ' ಸಿಡಿ; ಟ್ವಿಟ್ಟರಲ್ಲೂ ಸೂಪರ್‌ಹಿಟ್!
** ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
** ಸ್ವಾಮಿಯನ್ನು ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ?
** ಕಳಂಕಿತ ನಿತ್ಯಾನಂದ ಸ್ವಾಮಿ ಮಲೇಷಿಯಾ ಆಶ್ರಮಕ್ಕೆ ಬೀಗ
** ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
** ಇನ್ನು ಯಾವುದೇ ಪ್ರಯೋಗ ಮಾಡಲಾರೆ: ನಿತ್ಯಾನಂದ ಸ್ವಾಮಿ
** ನೋವು ಮರೆಯಲು ಸ್ವಾಮಿಯಿಂದ ಹರಿದ್ವಾರ ಹೊಟೇಲಿನಲ್ಲಿ ಧ್ಯಾನ!
** 'ನಿತ್ಯಾನಂದ ಸ್ವಾಮಿ ಮಹಾತ್ಮೆ'ಯ ಇನ್ನೆರಡು ಸಿಡಿಗಳಿವೆ: ಲೆನಿನ್
ಸಂಬಂಧಿತ ಮಾಹಿತಿ ಹುಡುಕಿ