ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುದರ್ಶನ್ ಮೇಲೆ ಸೋನಿಯಾ ಕೇಸು ಹಾಕಲಿ: ಆರೆಸ್ಸೆಸ್ (RSS | Sonia Gandhi | KS Sudarshan | Congress)
Bookmark and Share Feedback Print
 
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಗ್ಗೆ ಆಕ್ಷೇಪಕಾರಿ ಹೇಳಿಕೆ ನೀಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಮುಖ್ಯಸ್ಥ ಕೆ.ಎಸ್. ಸುದರ್ಶನ್ ವಿರುದ್ಧ ಕೇಸರಿ ಪಾಳಯ ಮುಗಿ ಬೀಳುವುದನ್ನು ಮುಂದುವರಿಸಿದ್ದು, ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವಂತೆ ಸ್ವತಃ ಆರೆಸ್ಸೆಸ್ ನಾಯಕರೇ ಸಲಹೆ ನೀಡಿದ್ದಾರೆ.
PTI

ಸುದರ್ಶನ್ ಮಾಡಿರುವ ಆರೋಪಗಳನ್ನು ಸೋನಿಯಾ ಗಾಂಧಿ ಲಘುವಾಗಿ ಪರಿಗಣಿಸುವ ಬದಲು, ಕಾನೂನು ಕ್ರಮಕ್ಕೆ ಮುಂದಾಗಲಿ. ಸುದರ್ಶನ್ ವಿರುದ್ಧ ಮಾನಹಾನಿಯ ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣ ದಾಖಲಿಸಲಿ ಎಂದು ಆರೆಸ್ಸೆಸ್ ಮಾಜಿ ವಕ್ತಾರ ಎಂಜಿ ಆಲಿಯಾಸ್ ಬಾಬುರಾವ್ ವೈದ್ಯ ಹೇಳಿದ್ದಾರೆ.

ಅಮೆರಿಕಾ ಬೇಹುಗಾರಿಕಾ ಇಲಾಖೆ ಸಿಐಎ ಏಜೆಂಟ್ ಎಂಬುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಸೋನಿಯಾ ಮೇಲೆ ಮಾಡಲಾಗಿದೆ. ಅವರು ಸುಮ್ಮನಿರುವ ಬದಲು ನ್ಯಾಯಾಲಯದ ಮೆಟ್ಟಿಲೇರಬೇಕು. ಹಾಗೆಲ್ಲಾದರೂ ನ್ಯಾಯಾಲಯದ ಮೆಟ್ಟಿಲೇರದಿದ್ದರೆ, ಆರೋಪಗಳು ಹಾಗೆಯೇ ಉಳಿದು ಬಿಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುದರ್ಶನ್ ಅಂತಹ ಹೇಳಿಕೆ ನೀಡಬಾರದಿದ್ದು, ಅದು ದುರದೃಷ್ಟಕರವಾದದ್ದು. ಆದರೆ ಅವರ ಪ್ರತಿಕೃತಿಗಳನ್ನು ದಹಿಸಿದ ಮಾತ್ರಕ್ಕೆ ಪರಿಹಾರ ಸಿಗದು. ಅವರು ನೀಡಿರುವ ಹೇಳಿಕೆಯಿಂದ ಸ್ವತಃ ಆರೆಸ್ಸೆಸ್ ದೂರ ಸರಿದಿದ್ದು, ಈ ಕುರಿತು ವಿಷಾದ ವ್ಯಕ್ತಪಡಿಸಿದೆ ಎಂದು ವೈದ್ಯ ತನ್ನ ನಿಲುವನ್ನು ಸ್ಪಷ್ಟಪಡಿಸಿದರು.

ಸುದರ್ಶನ್ ಘನತೆಗೆ ಪೆಟ್ಟು: ಗೋವಿಂದಾಚಾರ್ಯ
ಸೋನಿಯಾ ಗಾಂಧಿ ವಿರುದ್ಧ ಈ ರೀತಿಯ ಆರೋಪ ಮಾಡುವ ಮೂಲಕ ಸುದರ್ಶನ್ ತನ್ನ ಘನತೆಯನ್ನು ಕುಗ್ಗಿಸಿಕೊಂಡಿದ್ದಾರೆ ಎಂದು ಸಂಘ ಪರಿವಾರದ ಮಾಜಿ ಸೈದ್ಧಾಂತಿಕವಾದಿ ಕೆ.ಎನ್. ಗೋವಿಂದಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಇಂದೋರ್‌ನಲ್ಲಿ ಮಾತನಾಡುತ್ತಿದ್ದ ಅವರು, ಸೋನಿಯಾ ಕುರಿತು ಸುದರ್ಶನ್ ಎತ್ತಿರುವ ಪ್ರಶ್ನೆಗಳ ಕುರಿತು ಪ್ರಸಕ್ತ ಪರಿಸ್ಥಿತಿಯಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ. ಆದರೆ ಇಂತಹ ಹೇಳಿಕೆಗಳು ಆರೆಸ್ಸೆಸ್ ಮಾಜಿ ಮುಖ್ಯಸ್ಥರ ಗೌರವಕ್ಕೆ ಕುಂದು ತಂದಿರುವುದು ಹೌದು ಎಂದರು.

ಸುದರ್ಶನ್ ನೀಡಿರುವ ಹೇಳಿಕೆ ಸಂಘ ಪರಿವಾರದ ಸಂಸ್ಕೃತಿಗೆ ಹೊಂದಾಣಿಕೆಯಾಗುವುದಿಲ್ಲ. ಇದರಿಂದ ಸಂಘದ ಘನತೆಗೂ ಹಾನಿಯಾಗಿದೆ. ಈ ಸಂಬಂಧ ಆರೆಸ್ಸೆಸ್ ಕ್ಷಮೆ ಯಾಚಿಸಿರುವುದು ಸರಿಯಾಗಿಯೇ ಇದೆ. ಇದು ಸಂಘದ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಇದು ದೊಡ್ಡ ತಪ್ಪು: ಜೋಷಿ
ಕಾಂಗ್ರೆಸ್ ಅಧ್ಯಕ್ಷೆಯ ವಿರುದ್ಧ ಆಕ್ಷೇಪಕಾರಿ ಆರೋಪ ಮಾಡುವ ಮೂಲಕ ಸುದರ್ಶನ್ ದೊಡ್ಡ ಪ್ರಮಾದ ಎಸಗಿದ್ದಾರೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕೈಲಾಸ್ ಜೋಷಿ ಹೇಳಿದ್ದಾರೆ.

ಹಿರಿಯ ಬಿಜೆಪಿ ನಾಯಕರೂ ಆಗಿರುವ ಜೋಷಿ ಮಧ್ಯಪ್ರದೇಶದ ಹರ್ದಾದಲ್ಲಿ ಮಾತನಾಡುತ್ತಾ, ಸೋನಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಸುದರ್ಶನ್ ಮಾಡಿರುವ ದೊಡ್ಡ ತಪ್ಪು; ಸಂಘ ಮತ್ತು ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧವಿಲ್ಲ ಎಂದರು.

ಅದೇ ಹೊತ್ತಿಗೆ ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಜೋಷಿ ಹೇಳಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಇಂದಿರಾ, ರಾಜೀವ್ ಸಾವಿಗೆ ಸೋನಿಯಾ ಕಾರಣ: ಸುದರ್ಶನ್
** ಸುದರ್ಶನ್ ವಿರುದ್ಧ ಎಫ್ಐಆರ್; ಆರೆಸ್ಸೆಸ್ ನಿಷೇಧಿಸಿ-ಕಾಂಗ್ರೆಸ್
** ಸೋನಿಯಾ ಕ್ಷಮೆಯಾಚಿಸಿದ ಆರ್‌ಎಸ್ಎಸ್ ಮುಖಂಡರು
** ಆರೆಸ್ಸೆಸ್ ವಿರುದ್ಧ ಬೀದಿಗಿಳಿಯಿರಿ: ಆಕ್ರೋಶಿತ ಕಾಂಗ್ರೆಸ್ ಕರೆ
** ಸುದರ್ಶನ್ ಸೋನಿಯಾ ನಿಂದನೆ ಹೇಳಿಕೆ: ಆರೆಸ್ಸೆಸ್ ವಿಷಾದ
ಸಂಬಂಧಿತ ಮಾಹಿತಿ ಹುಡುಕಿ