ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಭಯೋತ್ಪಾದನೆ: ಮೇ 6ಕ್ಕೆ ಕಸಬ್ ಹಣೆಬರಹ ನಿರ್ಧಾರ (Mohammed Ajmal Amir Kasab | Mumabi attack | Mumbai Special court | Death sentence)
Bookmark and Share Feedback Print
 
2008ರ ಮುಂಬೈ ಮಾರಣಹೋಮದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ನೀಡಬೇಕಾಗಿರುವ ಶಿಕ್ಷೆಯ ಪ್ರಮಾಣದ ಕುರಿತು ಇಂದು ವಿಶೇಷ ನ್ಯಾಯಾಲಯವು ವಾದ-ವಿವಾದಗಳನ್ನು ಆಲಿಸಿದ್ದು, ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ವಿರುದ್ಧ ಯುದ್ಧ ಸಾರಿದ್ದು, ಹಲವರ ಹತ್ಯೆ ನಡೆಸಿರುವುದು ಮತ್ತು ಭಯೋತ್ಪಾದನಾ ದಾಳಿಗಳನ್ನು ನಡೆಸಿರುವ ಪ್ರಕರಣಗಳಲ್ಲಿ ಕಸಬ್ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಆತನಿಗೆ ಗರಿಷ್ಠ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಬೇಕೆಂದು ವಿಶೇಷ ಸಾರ್ವಜನಿಕ ವಕೀಲ ಉಜ್ವಲ್ ನಿಕಂ ಇಂದು ವಾದಿಸಿದರು.

ತನ್ನಂತೆ ಇತರರು ಕೂಡ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅಥವಾ ಫಿದಾಯಿನ್ ಅಥವಾ ಆತ್ಮಹತ್ಯಾ ದಾಳಿಗಳಲ್ಲಿ ಪಾಲ್ಗೊಳ್ಳುವಂತೆ ಸ್ಫೂರ್ತಿ ನೀಡಲು ಕಸಬ್ ಬಯಸುತ್ತಿದ್ದಾನೆ. ಆತ ಮುಂಬೈಯಲ್ಲಿ ನಡೆಸಿರುವುದು ಉದ್ದೇಶಪೂರ್ವಕವಾದ ಅಮಾಯಕರ ಮಾರಣಹೋಮ. ಆತ ಬಳಸಿರುವುದು ಪಾಕಿಸ್ತಾನದಲ್ಲಿ ತಯಾರಾದ ಮೆಷಿನ್‌ಗನ್. ಖಂಡಿತಕ್ಕೂ ಆತನಿಗೆ ಶಿಕ್ಷೆಯ ಪ್ರಮಾಣದಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡಬಾರದು ಎಂದು ಸುಮಾರು ಎರಡು ಗಂಟೆಗಳ ಕಾಲ ಪ್ರಾಸಿಕ್ಯೂಷನ್ ತನ್ನ ವಾದವನ್ನು ಮಂಡಿಸಿತು.

ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಪ್ರಯಾಣಿಕರು ಮತ್ತು ಮಳಿಗೆಯವರ ಮೇಲೆ ಯದ್ವಾತದ್ವಾ ಗುಂಡು ಹಾರಿಸುತ್ತಿರುವ ಸಂದರ್ಭದಲ್ಲಿ ತಾನು ನಡೆಸುತ್ತಿರುವ ಹತ್ಯೆಯನ್ನು ಆತ ಆನಂದಿಸುತ್ತಿದ್ದ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಾನು ಗುಂಡು ಹಾರಿಸಿದ್ದರಿಂದಾಗಿ ಜನ ನೋವಿನಿಂದ ಚೀರುತ್ತಾ, ಕುಸಿದು ಬಿದ್ದು ಸಾಯುತ್ತಿರುವುದನ್ನು ನೋಡಿ ಸಂತೋಷ ಪಡುತ್ತಿದ್ದ ಎಂದು ಪ್ರಾಸಿಕ್ಯೂಟರ್ ನಿಕಂ ಒತ್ತಿ ಹೇಳಿದರು.

ಒಂದು ವೇಳೆ ಕಸಬ್‌ಗೆ ಕಡಿಮೆ ಪ್ರಮಾಣದ ಶಿಕ್ಷೆಯನ್ನು ನೀಡಿದರೆ, ಭಾರತವು ಭಯೋತ್ಪಾದಕ ಗುಂಪುಗಳಿಗೆ ಸುಲಭ ತುತ್ತಾಗಬಹುದು. ಆತ ನಡೆಸಿರುವುದು ಕ್ರೂರಾತಿಕ್ರೂರ ಕೃತ್ಯ. ಆತ ಜೀವಗಳ ಮೌಲ್ಯಗಳಿಗೆ ಬೆನ್ನು ಹಾಕಿದ್ದ. ಬದುಕುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದ ವ್ಯಕ್ತಿಗಳ ಪ್ರಾಣವನ್ನು ಆತ ತೆಗೆದಿದ್ದಾನೆ. 72 ಮಂದಿಯನ್ನು ಕೊಂದ ನಂತರವೂ ಆತ ತೃಪ್ತನಾಗದೆ, ಇನ್ನಷ್ಟು ಮಂದಿಯನ್ನು ಕೊಲ್ಲಲು ಬಯಸಿದ್ದ. ಹಾಗಾಗಿ ಆತನಿಗೆ ಮರಣ ದಂಡನೆ ವಿಧಿಸುವುದೇ ಸೂಕ್ತ ಎಂದು ನಿಕಂ ಹೇಳಿದ್ದಾರೆ.

ತನ್ನ ಕಕ್ಷಿದಾರನಿಗೆ ಕಡಿಮೆ ಶಿಕ್ಷೆಯನ್ನು ಪ್ರಕಟಿಸುವ ಮೂಲಕ ಸಹಾನುಭೂತಿ ತೋರಿಸಬೇಕು ಎಂದು ನ್ಯಾಯಾಲಯದಿಂದ ನೇಮಕಗೊಂಡಿರುವ ಕಸಬ್ ಪರ ವಕೀಲ ಕೆ.ಪಿ. ಪವಾರ್ ಇದೇ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಪರ ಮತ್ತು ವಿರೋಧದ ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ತಹಲಿಯಾನಿ ತೀರ್ಪನ್ನು ಮೇ 6ಕ್ಕೆ ಕಾಯ್ದಿರಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಗಳಿವು:
** 'ನೀರು ಕೊಟ್ಟ ನನ್ನ ಮಗನನ್ನೂ ಕೊಂದಿದ್ದ ಕಸಬ್‌ ನೇಣಿಗೆ ಹಾಕಿ'
** ಗೌರವಗಳು ಪರಿಹಾರವಲ್ಲ, ಕಸಬ್‌ ಸಾಯಲೇಬೇಕು: ಓಂಬಳೆ ಪುತ್ರಿ
** ಕಸಬ್‌ಗೆ ಗಲ್ಲುಶಿಕ್ಷೆಯಾಗಬಹುದೇ?; ನಾಳೆ ಅಂತಿಮ ತೀರ್ಪು
** ಪಾಕ್ ಉಗ್ರ ಕಸಬ್‌ ದೋಷಿ: ಇಬ್ಬರು ಭಾರತೀಯರ ಖುಲಾಸೆ
** ಕಸಬ್ ತೀರ್ಪು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ: ಚಿದಂಬರಂ
** ಅನ್ಸಾರಿ, ಸಬಾವುದ್ದೀನ್ ಕುಖ್ಯಾತ ಉಗ್ರರು: ಸರ್ಕಾರಿ ವಕೀಲ
** ಕಸಬ್‌ಗೆ ಮಾತ್ರ ಶಿಕ್ಷೆ ಯಾಕೆ?: ಇದು ಪಾಕಿಸ್ತಾನೀಯರ ಪ್ರಶ್ನೆ
ಸಂಬಂಧಿತ ಮಾಹಿತಿ ಹುಡುಕಿ