ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಮಸೀದಿ ಕಟ್ಟಿ ಕೊಡಲಿ: ಬಾಬ್ರಿ ಕ್ರಿಯಾ ಸಮಿತಿ (Congress | Babri Masjid | Hashim Ansari | Ayodhya verdict)
Bookmark and Share Feedback Print
 
ಕಾಂಗ್ರೆಸ್ ಪಕ್ಷವು ಜಾತ್ಯತೀತ ಎಂಬುದು ನಿಜವಾಗಿದ್ದರೆ, ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ನೀಡಿರುವ ಜಮೀನಿನ ಭಾಗದಲ್ಲಿ ಅದು ನಮಗಾಗಿ ಮಸೀದಿಯನ್ನು ನಿರ್ಮಿಸಿ ಕೊಡಬೇಕು ಎಂದು ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಅಧ್ಯಕ್ಷ ಹಶೀಮ್ ಅನ್ಸಾರಿ ಹೇಳಿದ್ದಾರೆ.

ಆರಂಭದಲ್ಲಿ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ತ್ರಿಸದಸ್ಯ ಪೀಠದ ತೀರ್ಪಿನ ಕುರಿತು ಅನ್ಸಾರಿಯವರು ಪ್ರತಿಕ್ರಿಯಿಸಲು ನಿರಾಕರಿಸಿದರೂ, ನಂತರ ಸ್ವಾಗತಿಸಿದರು.

ನಮ್ಮ ಪರವಾಗಿ ತೀರ್ಪು ಬಂದಿರುವುದರಿಂದ ನಾನು ಇದನ್ನು ಸ್ವಾಗತಿಸುತ್ತೇನೆ. ಬಾಬ್ರಿ ಮಸೀದಿಯ ಹೆಸರನ್ನು ರಾಜಕೀಯ ಉದ್ದೇಶಗಳಿಗೆ ಬಳಕೆ ಮಾಡಿದ್ದ ಪಕ್ಷಗಳ ಆಟ ಇನ್ನು ನಡೆಯುವುದು ಸಾಧ್ಯವಿಲ್ಲ. ಮಸೀದಿ ಧ್ವಂಸ ಪ್ರಕರಣದಲ್ಲಿ ತನ್ನದೇ ಪಾತ್ರವಹಿಸಿದ್ದ ಕಾಂಗ್ರೆಸ್ ನಿಜವಾಗಿಯೂ ಜಾತ್ಯತೀತ ಎನ್ನುವುದು ಹೌದಾಗಿದ್ದರೆ ಮಸೀದಿ ನಿರ್ಮಿಸಲಿ ಎಂದರು.

ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ನಿಟ್ಟಿನಲ್ಲಿ ಅಯೋಧ್ಯೆಯಲ್ಲೇ ಉಳಿದುಕೊಂಡಿದ್ದ ಅನ್ಸಾರಿಯವರು ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರನ್ನು ಅಭಿನಂದಿಸಿದರು.

ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗುವ ಕುರಿತು ಅನ್ಸಾರಿಯವರು ದನಿಯೆತ್ತಿಲ್ಲ. ಆದರೆ ಮತ್ತೊಂದು ಅರ್ಜಿದಾರ, ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯ ಹಾಜಿ ಮೊಹಮ್ಮದ್ ಆದೇಶದ ವಿರುದ್ಧ ಮೇಲ್ಮನವಿ ಮಾಡುವುದಾಗಿ ಹೇಳಿದ್ದಾರೆ.

ಸರಿಯಾಗಿರಲಿ ಅಥವಾ ತಪ್ಪಾಗಿರಲಿ, ನ್ಯಾಯಾಲಯದ ತೀರ್ಪನ್ನು ಸ್ವೀಕರಿಸುತ್ತೇವೆ. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಕುರಿತು ಚಿಂತನೆ ನಡೆದಿದೆ ಎಂದರು.

ಇಷ್ಟು ಹೇಳಿದರೂ ಹಾಜಿ ತನ್ನ ಅಸಮಾಧಾನವನ್ನು ಸಂಪೂರ್ಣವಾಗಿ ಮುಚ್ಚಿಡಲು ಸಾಧ್ಯವಾಗಿಲ್ಲ. ನ್ಯಾಯಾಲಯವು ತೀರ್ಪು ಕೊಡುವಾಗ ನಂಬಿಕೆಯನ್ನು ಆಧಾರವಾಗಿ ಸ್ವೀಕರಿಸಬಾರದಿತ್ತು. ಅದರ ಮುಂದಿರುವ ದಾಖಲೆಗಳನ್ನು ಅವಲಂಬಿಸಿ ತೀರ್ಮಾನ ನೀಡಬೇಕಿತ್ತು ಎಂದರು.

ಸಂಬಂಧಪಟ್ಟ ಸುದ್ದಿಗಳು:
* ಹಿಂದೂ-ಮುಸ್ಲಿಮರಿಗೆ ಅಯೋಧ್ಯೆ ಹಂಚಿಕೆ: ಹೈಕೋರ್ಟ್ ತೀರ್ಪು
* ಅಯೋಧ್ಯೆಯೇ ರಾಮ ಜನ್ಮಭೂಮಿ, ಮಸೀದಿ ಅನ್ಇಸ್ಲಾಮಿಕ್
* ರಾಮಮಂದಿರ ನಿರ್ಮಾಣ ಹಾದಿ ಸುಗಮ: ಆರೆಸ್ಸೆಸ್, ವಿಎಚ್‌ಪಿ
* ನನ್ನ ಜೀವನದ ಅಮೂಲ್ಯ ಕ್ಷಣವಿದು: ತೀರ್ಪಿಗೆ ಉಮಾ ಭಾರತಿ
* ಅಯೋಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿ: ಸುನ್ನಿ ವಕ್ಫ್ ಮಂಡಳಿ
* ಒಡೆತನ ಹಂಚಿಕೆ; ಹಿಂದೂ ಮಹಾಸಭಾ ಸುಪ್ರೀಂ ಕೋರ್ಟಿಗೆ
* ಭವ್ಯ ರಾಮಮಂದಿರ ನಿರ್ಮಾಣ ಹಾದಿ ಸುಗಮ: ಮೋದಿ
* 'ರಾಮ ಹುಟ್ಟಿದ್ದು ಎಲ್ಲಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ'
ಸಂಬಂಧಿತ ಮಾಹಿತಿ ಹುಡುಕಿ