ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮರಣದಂಡನೆಗೆ ಕಾಯುತ್ತಿರುವ ಅಫ್ಜಲ್ ಗುರು ಸಾಲಿಗೆ ಕಸಬ್! (Afzal Guru | Ajmal Kasab | Mumbai attacks | Death sentence)
Bookmark and Share Feedback Print
 
PTI
2001ರಲ್ಲಿ ದೇಶದ ಶಕ್ತಿಕೇಂದ್ರ ಸಂಸತ್ತಿಗೆ ದಾಳಿ ನಡೆಸಿದ ಆರೋಪದಲ್ಲಿ ದೋಷಿಯಾಗಿ ಸುಪ್ರೀಂ ಕೋರ್ಟಿನಿಂದ ಗಲ್ಲು ಶಿಕ್ಷೆ ತೀರ್ಪನ್ನು ಪಡೆದುಕೊಂಡು ಸಾವಿಗಾಗಿ ಕಾಯುತ್ತಿರುವ ಅಫ್ಜಲ್ ಗುರು ಎಂಬ ಪ್ರತ್ಯೇಕತಾವಾದಿ ಮುಖದ ಭಯೋತ್ಪಾದಕ ಸೇರಿದಂತೆ 51 ಪಾತಕಿಗಳ ಗುಂಪಿಗೆ ನೂತನ ಸೇರ್ಪಡೆಯಾಗಲಿದ್ದಾನೆಯೇ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್?

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಿಂದೆಂದೂ ಕಾಣದ ಭಯಾನಕ ಹತ್ಯಾಕಾಂಡವನ್ನು ಪಕ್ಕದ ರಾಷ್ಟ್ರದಿಂದ ಬಂದು ನಡೆಸಿ ಜೀವಂತವಾಗಿ ಪೊಲೀಸರ ಕೈಗೆ ಸಿಕ್ಕಿದ ಮುಗ್ಧ ಮುಖದ ಕಸಬ್ ಎಂಬ ಅಪ್ಪಟ ಭಯೋತ್ಪಾದಕನಿಗೆ ಮುಂಬೈ ವಿಶೇಷ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸುವುದರೊಂದಿಗೆ ಇಂತಹ ಹತ್ತು-ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಅಲ್ಲಿ ಕಾಯುತ್ತಿದ್ದಾರೆ 51 ಮಂದಿ..!
ಹೌದು, ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ ನಂತರ ಸಾವಿನ ನಿರೀಕ್ಷೆಯಲ್ಲಿ ಜೈಲಿನಲ್ಲಿ ಕಳೆಯುತ್ತಿರುವವರ ಸಂಖ್ಯೆಯಿದು. ಇದರಲ್ಲಿ ರಾಜೀವ್ ಗಾಂಧಿ ಹಂತಕರು, ಅಫ್ಜಲ್ ಗುರು ಮುಂತಾದವರಿದ್ದಾರೆ. ಅವರ ಸಾಲಿಗೆ ಮತ್ತೊಂದು ಸೇರ್ಪಡೆ ಅಜ್ಮಲ್ ಕಸಬ್.

ವಿಶೇಷ ನ್ಯಾಯಾಲಯದಲ್ಲಿ ಮರಣದಂಡನೆ ಶಿಕ್ಷೆಯನ್ನು ಪಡೆದುಕೊಂಡಿರುವ ಕಸಬ್ ಇದೀಗ ಹೈಕೋರ್ಟ್‌ಗೆ ಮೊರೆ ಹೋಗಬಹುದಾಗಿದೆ. ಅಲ್ಲೂ ಆತನಿಗೆ ನ್ಯಾಯ ಸಿಗದೇ ಇದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಕೊನೆಯ ಅವಕಾಶ ರಾಷ್ಟ್ರಪತಿಯವರದ್ದು. ಈ ಕೊನೆಯ ಅವಕಾಶಕ್ಕಾಗಿ ಸರದಿಯಲ್ಲಿ ಕಾಯುತ್ತಿರುವವರ ಸಂಖ್ಯೆ 51. ಕಸಬ್ ಶಿಕ್ಷೆ ಎಲ್ಲಾ ನ್ಯಾಯಾಲಯಗಳಲ್ಲೂ ಖಚಿತವಾದರೆ 52ನೇ ವ್ಯಕ್ತಿಯಾಗಲಿದ್ದಾನೆ.

ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ವಿಧಿಸಿರುವ ಕ್ಷಮಾದಾನ ಪಟ್ಟಿಯಲ್ಲಿ ರಾಜೀವ್ ಗಾಂಧಿ ಹಂತಕರು (ನಾಲ್ಕು ಮಂದಿ) ಒಂಬತ್ತನೇ ಸ್ಥಾನದಲ್ಲಿದ್ದಾರೆ. 2004ರಲ್ಲೇ ಸುಪ್ರೀಂ ಕೋರ್ಟ್‌ನಿಂದ ಗಲ್ಲು ಶಿಕ್ಷೆ ತೀರ್ಪು ಪಡೆದುಕೊಂಡಿರುವ ಅಫ್ಜಲ್ ಗುರು 28ರಲ್ಲಿದ್ದಾನೆ.

ನೀವ್ಯಾಕೆ ವಿರೋಧಪಕ್ಷದವರ ರೀತಿ ಮಾತಾಡ್ತೀರಿ?
ಅಫ್ಜಲ್ ಗುರುವಿನಂತೆ ಕಸಬ್‌ ಪ್ರಕರಣವನ್ನೂ ಸರಕಾರ ನೋಡಿಕೊಳ್ಳಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಉತ್ತರಿಸಿದ ರೀತಿಯಿದು.

ವಿರೋಧ ಪಕ್ಷಗಳು ಅಫ್ಜಲ್ ಗುರುವಿನ ಬಗ್ಗೆ ಪೀಡಿಸುತ್ತಿವೆ. ಈಗಾಗಲೇ ಹಲವು ಬಾರಿ ನಾನು ಈ ಕುರಿತು ವಿವರಣೆ ನೀಡಿದ್ದೇನೆ. ನೀವು ಮಾಧ್ಯಮದವರು ಕೂಡ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಿರುವುದು ನನಗೆ ಅಚ್ಚರಿ ತಂದಿದೆ. ಎಲ್ಲಾ ಪ್ರಕರಣಗಳನ್ನು ನಾವು ಸರದಿಯಂತೆ ಕೈಗೆತ್ತಿಕೊಳ್ಳುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ನಾವು ಮರುಪರಿಶೀಲನೆಯ ನಂತರ ನಾಲ್ಕು ಪ್ರಕರಣಗಳನ್ನು ರಾಷ್ಟ್ರಪತಿಯವರ ಬಳಿ ಕಳುಹಿಸಿದ್ದೇವೆ. ಈ ರೀತಿ ಹಂತ ಹಂತವಾಗಿ ಪ್ರಕರಣಗಳನ್ನು ರಾಷ್ಟ್ರಪತಿ ಭವನಕ್ಕೆ ನಾವು ಕಳುಹಿಸುವುದನ್ನು ಮುಂದುವರಿಸುತ್ತೇವೆ. ರಾಷ್ಟ್ರಪತಿಯವರು ಏನು ಮಾಡಬೇಕೆಂದು ಯಾರೂ ಹೇಳುವಂತಿಲ್ಲ ಎಂದರು.

ಕೊನೆಯ ಬಾರಿ ಗಲ್ಲು 2004ರಲ್ಲಿ...
ಅಧಿಕೃತ ಮಾಹಿತಿಗಳ ಪ್ರಕಾರ 1975ರಿಂದ 1991ರ ನಡುವೆ 40 ಮಂದಿ ಸೇರಿದಂತೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 55 ಮಂದಿಯನ್ನು ಗಲ್ಲಿಗೇರಿಸಲಾಗಿದೆ.

1995ರಲ್ಲಿ ಒಬ್ಬನನ್ನು ಗಲ್ಲಿಗೆ ಹಾಕಿದ ನಂತರ ನಡೆದ ಒಂದೇ ಒಂದು ನೇಣು ಪ್ರಕರಣ 2004ರ ಧನಂಜಯ್ ಚಟರ್ಜಿ ಕೇಸು. ಆ ಬಳಿಕ ಯಾರನ್ನೂ ಭಾರತದಲ್ಲಿ ಗಲ್ಲಿಗೆ ಹಾಕಲಾಗಿಲ್ಲ.

ಸಂಬಂಧಪಟ್ಟ ಸುದ್ದಿಗಳಿವು:
** 'ನೀರು ಕೊಟ್ಟ ನನ್ನ ಮಗನನ್ನೂ ಕೊಂದಿದ್ದ ಕಸಬ್‌ ನೇಣಿಗೆ ಹಾಕಿ'
** ಗೌರವಗಳು ಪರಿಹಾರವಲ್ಲ, ಕಸಬ್‌ ಸಾಯಲೇಬೇಕು: ಓಂಬಳೆ ಪುತ್ರಿ
** ಕಸಬ್‌ಗೆ ಗಲ್ಲುಶಿಕ್ಷೆಯಾಗಬಹುದೇ?; ನಾಳೆ ಅಂತಿಮ ತೀರ್ಪು
** ಪಾಕ್ ಉಗ್ರ ಕಸಬ್‌ ದೋಷಿ: ಇಬ್ಬರು ಭಾರತೀಯರ ಖುಲಾಸೆ
** ಕಸಬ್ ತೀರ್ಪು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ: ಚಿದಂಬರಂ
** ಅನ್ಸಾರಿ, ಸಬಾವುದ್ದೀನ್ ಕುಖ್ಯಾತ ಉಗ್ರರು: ಸರ್ಕಾರಿ ವಕೀಲ
** ಕಸಬ್‌ಗೆ ಮಾತ್ರ ಶಿಕ್ಷೆ ಯಾಕೆ?: ಇದು ಪಾಕಿಸ್ತಾನೀಯರ ಪ್ರಶ್ನೆ
** ಮುಂಬೈ ಮುಗ್ಧರ ಹೊಸಕಿದ ಪಾತಕಿ ಕಸಬ್‌ಗೆ ಗಲ್ಲು
ಸಂಬಂಧಿತ ಮಾಹಿತಿ ಹುಡುಕಿ