ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಗಲ್ಲು- ಪೋಟಾ ಇಲ್ದಿದ್ರೂ ಸಮಸ್ಯೆಯಿಲ್ಲ: ಕೇಂದ್ರ (M Veerappa Moily | Pakistan | Ajmal Kasab | Mumbai attacks)
Bookmark and Share Feedback Print
 
ಪೋಟಾ ಕಾಯ್ದೆ ಜಾರಿಯಲ್ಲಿ ಇದ್ದಿದ್ದರೆ ಏನಾಗುತ್ತಿತ್ತು? ಏನಿಲ್ಲ. ನನಗೆ ನಮ್ಮ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ನಾವು ಕಸಬ್‌ನನ್ನು ಸಾಮಾನ್ಯ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸುವಲ್ಲಿ ಸಫಲರಾಗಿದ್ದೇವೆ ಎಂದು ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕಾನೂನಿನಲ್ಲಿ ತಿದ್ದುಪಡಿ ತಂದು ಪೋಟಾವನ್ನು ಜಾರಿಗೆ ತರಬೇಕೆಂದು ಬಿಜೆಪಿ ಆಗ್ರಹಿಸುತ್ತಿರುವುದು ಕೇವಲ ಅಲ್ಪಸಂಖ್ಯಾತರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಂದು ಇದೇ ಸಂದರ್ಭದಲ್ಲಿ ಸಚಿವರು ಆರೋಪಿಸಿದ್ದಾರೆ.

ಇಂದು ವಿಶೇಷ ನ್ಯಾಯಾಲಯವು ಮುಂಬೈ ದಾಳಿ ಪ್ರಕರಣದ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ಗೆ ಮರಣ ದಂಡನೆ ವಿಧಿಸಿರುವುದಕ್ಕೆ ಅವರು ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು.

ಕಾನೂನಿಗೆ ತಿದ್ದುಪಡಿ ತರುವುದರಿಂದ ಅದು ದುರುಪಯೋಗವಾಗಬಹುದೆಂದು ಅಲ್ಪಸಂಖ್ಯಾತರು, ಪರಿಶಿಷ್ಟರು, ದುರ್ಬಲ ವರ್ಗದವರು, ರಾಜಕೀಯ ಪಕ್ಷಗಳು ಸೇರಿದಂತೆ ಸಮಾಜದ ಹೆಚ್ಚಿನವರು ಪೋಟಾ ಕಾನೂನನ್ನು ವಿರೋಧಿಸುತ್ತಿದ್ದಾರೆ. ಅದರ ಅಗತ್ಯವೇ ಇಲ್ಲ. ನಮ್ಮಲ್ಲಿರುವ ಸಾಮಾನ್ಯ ಕಾನೂನುಗಳೇ ಉಗ್ರರನ್ನು ಶಿಕ್ಷಿಸಲು ಸಮರ್ಥವಿದೆ ಎಂಬುದು ಇಂದು ಸಾಬೀತಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ: ಮೊಯ್ಲಿ
ಮುಂಬೈ ದಾಳಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ನೀಡಿರುವ ತೀರ್ಪು ಪಾಕಿಸ್ತಾನವು ಭಾರತದ ಆಂತರಿಕ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಬಾರದು, ಹಾಗೆ ಮಾಡಿದಲ್ಲಿ ಇಂದು ಅಜ್ಮಲ್ ಕಸಬ್‌‌ಗೆ ಒದಗಿದ ಸ್ಥಿತಿಯೇ ಭಯೋತ್ಪಾದಕರಿಗೂ ಕಾದಿದೆ ಎಂಬ ಕಠಿಣ ಸಂದೇಶವನ್ನು ಪಕ್ಕದ ರಾಷ್ಟ್ರಕ್ಕೆ ರವಾನಿಸಿದೆ ಎಂದು ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಕಸಬ್ ತಾನು ಮಾಡಿದ ಕೃತ್ಯಗಳಿಗಾಗಿ ಮರಣದಂಡನೆ ಶಿಕ್ಷೆ ಪಡೆಯಲು ಅರ್ಹನಾಗಿದ್ದಾನೆ. ಅದಕ್ಕಿಂತ ಹೆಚ್ಚಿನ ಶಿಕ್ಷೆ ನೀಡುವುದು ಸಾಧ್ಯವಾಗುವುದಿದ್ದರೆ ಅದಕ್ಕೂ ಸ್ವಾಗತವಿದೆ ಎಂದು ಪಾಕಿಸ್ತಾನಿ ಭಯೋತ್ಪಾದಕನಿಗೆ ನ್ಯಾಯಾಲಯ ಇಂದು ಘೋಷಿಸಿದ ತೀರ್ಪಿಗೆ ಮೊಯ್ಲಿ ಪ್ರತಿಕ್ರಿಯಿಸಿದರು.

ಕಸಬ್‌ನಿಗೆ ಮರಣ ದಂಡನೆ ವಿಧಿಸಿರುವುದು ಪಾಕಿಸ್ತಾನಕ್ಕೂ ಒಂದು ಸಂದೇಶ ರವಾನಿಸಿದಂತಾಗಿದೆ. ಆ ಮೂಲಕ ದೇಶದ ಆಸ್ತಿಪಾಸ್ತಿ ನಷ್ಟ ಮಾಡುವ ಅಧಿಕಪ್ರಸಂಗ ಮಾಡಬಾರದು ಎಂಬುವುದನ್ನು ತಿಳಿಸಿದಂತಾಗಿದೆ. ಅವರಿಂದ ಪ್ರೋತ್ಸಾಹ ಪಡೆದುಕೊಂಡು ಬಂದ ಭಯೋತ್ಪಾದಕರಿಗೆ ಕಸಬ್‌ಗೆ ಆದ ಗತಿಯೇ ಆಗುತ್ತದೆ ಎಂಬುದು ಇದರಿಂದ ಸಾಬೀತಾಗಿದೆ ಎಂದರು.

ಭಾರತಕ್ಕೆ ದಾಳಿ ಮಾಡುವ ಎಲ್ಲಾ ಭಯೋತ್ಪಾದಕರಿಗೂ ಕಸಬ್‌ಗೆ ಆದ ಗತಿಯೇ ಆಗುತ್ತದೆ ಎಂಬ ಸಂದೇಶವನ್ನು ಈ ತೀರ್ಪು ರವಾನಿಸಿದೆ. ಜತೆಗೆ ಇದು ಕಸಬ್‌ನ ಮಾಸ್ಟರ್ ಮೈಂಡ್‌ಗಳಿಗೂ ಎಚ್ಚರಿಕೆಯ ಸಂದೇಶ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನವನ್ನು ಕ್ಷಮಿಸಲ್ಲ: ಕಾಂಗ್ರೆಸ್
ಕಸಬ್‌ಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಆಡಳಿತ ಪಕ್ಷ ಕಾಂಗ್ರೆಸ್ ಸ್ವಾಗತಿಸಿದೆ. ಕರಾಳ ಹತ್ಯಾಕಾಂಡ ನಡೆಸಿದ್ದ ಕಸಬ್‌ಗೆ ನ್ಯಾಯಾಲಯವು ಸಮರ್ಥವಾದ ತೀರ್ಪನ್ನು ನೀಡಿದೆ ಎಂದು ಕಾಂಗ್ರೆಸ್ ಪಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ಭಾರತದ ವಿರುದ್ಧ ಯುದ್ಧ ಸಾರಲು ಪಿತೂರಿ ನಡೆಸುತ್ತಿರುವ ಭಯೋತ್ಪಾದಕರು ಮತ್ತು ಇತರ ಮಾಸ್ಟರ್ ಮೈಂಡ್‌ಗಳಿಗೆ ಇದು ಕಠಿಣ ಸಂದೇಶವನ್ನು ರವಾನಿಸಿದ್ದು, ಪಿತೂರಿ ನಡೆಸುವವರಿಗೆ ಭಾರತದ ನ್ಯಾಯಾಂಗ ವ್ಯವಸ್ಥೆಯು ಸಮರ್ಥವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಜನರ ವಿರುದ್ಧದ ಸಮರ ಮತ್ತು ದೇಶದ ಪುರುಷರು-ಮಹಿಳೆಯರನ್ನು ಕೊಂದಿರುವ ಘೋರ ಅಪರಾಧ ನಡೆಸಿರುವ ಕಸಬ್‌ನನ್ನು ನಾವು ಯಾವತ್ತೂ ಕ್ಷಮಿಸಲು ಸಾಧ್ಯವಿಲ್ಲ. ಪಾಕಿಸ್ತಾನವನ್ನೂ ನಾವು ಕ್ಷಮಿಸಲಾರೆವು. ನಮ್ಮ ನ್ಯಾಯಾಂಗ ವ್ಯವಸ್ಥೆಯು ಪಾರದರ್ಶಕತೆಯಿಂದ ಕೂಡಿದೆ ಮತ್ತು ಇಂತಹ ಪ್ರಮುಖ ಪ್ರಕರಣಗಳನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂಬುದು ಕೂಡ ಸಾಬೀತಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಗಳಿವು:
** 'ನೀರು ಕೊಟ್ಟ ನನ್ನ ಮಗನನ್ನೂ ಕೊಂದಿದ್ದ ಕಸಬ್‌ ನೇಣಿಗೆ ಹಾಕಿ'
** ಗೌರವಗಳು ಪರಿಹಾರವಲ್ಲ, ಕಸಬ್‌ ಸಾಯಲೇಬೇಕು: ಓಂಬಳೆ ಪುತ್ರಿ
** ಕಸಬ್‌ಗೆ ಗಲ್ಲುಶಿಕ್ಷೆಯಾಗಬಹುದೇ?; ನಾಳೆ ಅಂತಿಮ ತೀರ್ಪು
** ಪಾಕ್ ಉಗ್ರ ಕಸಬ್‌ ದೋಷಿ: ಇಬ್ಬರು ಭಾರತೀಯರ ಖುಲಾಸೆ
** ಕಸಬ್ ತೀರ್ಪು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ: ಚಿದಂಬರಂ
** ಅನ್ಸಾರಿ, ಸಬಾವುದ್ದೀನ್ ಕುಖ್ಯಾತ ಉಗ್ರರು: ಸರ್ಕಾರಿ ವಕೀಲ
** ಕಸಬ್‌ಗೆ ಮಾತ್ರ ಶಿಕ್ಷೆ ಯಾಕೆ?: ಇದು ಪಾಕಿಸ್ತಾನೀಯರ ಪ್ರಶ್ನೆ
** ** ಮುಂಬೈ ಮುಗ್ಧರ ಹೊಸಕಿದ ಪಾತಕಿ ಕಸಬ್‌ಗೆ ಗಲ್ಲು
** ಮರಣದಂಡನೆಗೆ ಕಾಯುತ್ತಿರುವ ಅಫ್ಜಲ್ ಗುರು ಸಾಲಿಗೆ ಕಸಬ್!
ಸಂಬಂಧಿತ ಮಾಹಿತಿ ಹುಡುಕಿ