ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ ದುರಂತ; ಭಾರತವು ಅಮೆರಿಕಾದಲ್ಲಿ ಪ್ರಶ್ನಿಸದು? (Attorney general | Bhopal gas tragedy | USA | Dow Chemicals)
Bookmark and Share Feedback Print
 
ಅಮೆರಿಕಾದ ಅಣತಿಯಂತೆ ಪ್ರತಿ ಹೆಜ್ಜೆಯನ್ನು ಇಡುತ್ತಿದೆ ಎಂಬ ಆರೋಪವನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಭೋಪಾಲ್ ಅನಿಲ ದುರಂತ ಸಂಬಂಧ ಅಮೆರಿಕಾ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡದೇ ಇರಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಭಾರತದ ಹಲವು ನ್ಯಾಯಾಲಯಗಳಲ್ಲಿ ಭೋಪಾಲ್ ಕೇಸುಗಳು ಇತ್ಯರ್ಥವಾಗದೆ ಉಳಿದಿರುವುದರಿಂದ ಅಮೆರಿಕಾದಲ್ಲಿ ಕೇಸು ದಾಖಲಿಸುವುದು ಬೇಡ ಎಂದು ಕೇಂದ್ರ ಸರಕಾರಕ್ಕೆ ಅಟಾರ್ನಿ ಜನರಲ್ ಗೂಲಂ ಇ ವಾಹನಾವತಿ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಗೃಹಸಚಿವ ಪಿ. ಚಿದಂಬರಂ ನೇತೃತ್ವದ ಸಚಿವರ ಸಮಿತಿಗೆ ಅಟಾರ್ನಿ ಜನರಲ್ ಪ್ರಕರಣ ದಾಖಲಿಸದೇ ಇರಲು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕಾ ಮೂಲದ ಡೋ ಕೆಮಿಕಲ್ಸ್ ಮತ್ತು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಭಾರತ ಸರಕಾರವು ಇತ್ತೀಚೆಗಷ್ಟೇ ಪರಿಹಾರ ಅರ್ಜಿಯನ್ನು ದಾಖಲಿಸಿರುವುದರಿಂದ ಅಟಾರ್ನಿ ಜನರಲ್ ಸಲಹೆಯಂತೆ ಅಮೆರಿಕಾದಲ್ಲಿ ಪ್ರಕರಣ ದಾಖಲಿಸದೇ ಇರಲು ನಿರ್ಧರಿಸಿದೆ.

ಭೋಪಾಲ ಅನಿಲ ದುರಂತ ನಡೆಯುವ ಸಂದರ್ಭದಲ್ಲಿ ಇದ್ದ ಯೂನಿಯನ್ ಕಾರ್ಬೈಡ್ ನಂತರದ ದಿನಗಳಲ್ಲಿ ಡೋ ಕೆಮಿಕಲ್ಸ್ ಆಗಿ ಪರಿವರ್ತನೆಗೊಂಡಿತ್ತು. ಇದು ಮೆಕ್‌ಲಿಯಾಡ್ ರಸ್ಸೆಲ್ ಇಂಡಿಯಾ ಮತ್ತು ಎವೆರಿಡೆ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಇತರ ಎರಡು ಸಹಸಂಸ್ಥೆಗಳನ್ನೂ ಭಾರತದಲ್ಲಿ ಹೊಂದಿದೆ.

1989ರಲ್ಲಿ ಮಾಡಿಕೊಳ್ಳಲಾದ ಒಪ್ಪಂದದಂತೆ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ಪಡೆದುಕೊಂಡಿದ್ದ ಪರಿಹಾರ ಮೊತ್ತವನ್ನು 470 ಮಿಲಿಯನ್ ಡಾಲರುಗಳಿಗೆ ಹೆಚ್ಚಳಗೊಳಿಸಬೇಕು ಎಂುದ ಸರಕಾರವು ಇದೇ ವರ್ಷ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿತ್ತು.

ಸಂಬಂಧಪಟ್ಟ ಸುದ್ದಿಗಳು:
* ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ
* ಭೋಪಾಲ್ ಖಳ ರಾಜೀವ್‌ ಗಾಂಧಿಯಲ್ಲ, ನರಸಿಂಹರಾವ್!
* ನನಗೆ ಅಮೆರಿಕಾ ಕಾನೂನಿದೆ, ಬೈ ಇಂಡಿಯಾ ಎಂದಿದ್ದ ಪಾಪಿ!
* ಭೋಪಾಲ ತೀರ್ಪು ಬರುವಾಗ ಸಂತ್ರಸ್ತರು ಇರಲ್ಲ: ಸುಪ್ರೀಂ
* ಭೋಪಾಲ್ ದುರಂತ; ರಾಜೀವ್ ಗಾಂಧಿಯತ್ತ ಬಿಜೆಪಿ ಬೆಟ್ಟು
* ಮತ್ತಷ್ಟು ಆಂಡರ್ಸನ್‌ಗಳ ಸೃಷ್ಟಿ ತಡೆದೀತೇ ಕೇಂದ್ರ?
* ಆಂಡರ್ಸನ್ ಬಿಡುಗಡೆಗೆ ರಾಜೀವ್ ಗಾಂಧಿ ಡೀಲ್?
* ರಾಜೀವ್ ಗಾಂಧಿ 'ಡೀಲ್' ಆರೋಪ ಶುದ್ಧ ಸುಳ್ಳು: ಕಾಂಗ್ರೆಸ್
ಸಂಬಂಧಿತ ಮಾಹಿತಿ ಹುಡುಕಿ