ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರಿಗೆ ಮೋಸ: ಮುಲಾಯಂ | ರಾಮನ ಕ್ಷಮೆ ಕೇಳಿ: ಬಿಜೆಪಿ (Ayodhya verdict | Samajwadi Party | Mulayam Singh | Muslim)
Bookmark and Share Feedback Print
 
ಕಾನೂನಿನ ಅಂಶಗಳಿಗಿಂತ ನಂಬಿಕೆಯನ್ನು ಆಧರಿಸಿ ಅಯೋಧ್ಯೆ ತೀರ್ಪು ನೀಡಲಾಗಿದೆ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಇದರಿಂದಾಗಿ ದೇಶದ ಮುಸ್ಲಿಮರು ವಂಚನೆಗೊಳಗಾದ ಭಾವನೆಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶವೇ ತಣ್ಣಗಾಗಿರುವ ಇಂತಹ ಹೊತ್ತಿನಲ್ಲಿ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಬೇಡಿ ಎಂದು ಇದರ ಬೆನ್ನಿಗೆ ಕಾಂಗ್ರೆಸ್ ಮುಲಾಯಂಗೆ ಎಚ್ಚರಿಕೆ ನೀಡಿದ್ದರೆ, ಅತ್ತ ಪ್ರಮುಖ ಪ್ರತಿಪಕ್ಷ ಬಿಜೆಪಿಯು 'ನೀವು ಶ್ರೀರಾಮನಲ್ಲಿ ಕ್ಷಮೆ ಯಾಚಿಸಿ' ಎಂದು ಒತ್ತಾಯಿಸಿದೆ.

ಅಯೋಧ್ಯೆ ತೀರ್ಪು ಬಂದಿದೆ. ಇದು ನನಗೆ ಸಂತಸ ತಂದಿಲ್ಲ. ಈ ತೀರ್ಮಾನವು ಒಂದು ಉತ್ತಮ ಸಂಕೇತವವಲ್ಲ ಮತ್ತು ಹಲವರು ಇದರಿಂದ ಬೇಸರಗೊಂಡಿದ್ದಾರೆ ಎಂದಿರುವ ಮುಲಾಯಂ, ತೀರ್ಪನ್ನು ಕಾನೂನು ಅಂಶಗಳನ್ನು ಆಧರಿಸದೆ ನಂಬಿಕೆಯನ್ನು ಮುಂದಿಟ್ಟುಕೊಂಡು ನೀಡಲಾಗಿದೆ ಎಂದಿದ್ದಾರೆ.

ಕಾನೂನು ಮತ್ತು ಪುರಾವೆಗಳನ್ನು ಹೊರತುಪಡಿಸಿದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಂಗ ತೀರ್ಮಾನ ತೆಗೆದುಕೊಂಡಿರುವುದು ದೇಶದ ಮುಸ್ಲಿಮರಿಗೆ ಅಸಮಾಧಾನ ತಂದಿದೆ. ಅವರು ಮೋಸ ಹೋದೆವು ಎಂದುಕೊಳ್ಳುತ್ತಿದ್ದಾರೆ. ಇಡೀ ಸಮುದಾಯವು ಹತಾಶೆಯ ಸ್ಥಿತಿಯನ್ನು ತಲುಪಿದೆ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ವಿಶ್ಲೇಷಿಸಿದರು.

ಇದು ದೇಶ, ಸಂವಿಧಾನ ಮತ್ತು ನ್ಯಾಯಾಂಗಕ್ಕೂ ಶೋಭೆ ತರುವುದಿಲ್ಲ ಎಂದಿರುವ ಅವರು, ನಿರಾಸೆಗೊಳಗಾಗಿರುವ ವಾದಿಯ ಬೆಂಬಲಕ್ಕೆ ತಾನು ನಿಲ್ಲುವುದಾಗಿ ಹೇಳಿಕೊಂಡಿದೆ. ಅಲ್ಲದೆ ಸುಪ್ರೀಂ ಕೋರ್ಟಿಗೆ ಹೋಗುವ ನಿರ್ಧಾರವನ್ನು ತಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಎಚ್ಚರಿಕೆ...
ಮುಲಾಯಂ ಸಿಂಗ್ ದಯವಿಟ್ಟು ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ರೀತಿಯ ಯಾವುದೇ ಹೇಳಿಕೆಯನ್ನು ನೀಡಬಾರದು. ಏನೇ ಹೇಳುವುದಿದ್ದರೂ ಅದನ್ನು ಸುಪ್ರೀಂ ಕೋರ್ಟ್ ಮುಂದೆ ಹೇಳಲಿ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ.

ತೀರ್ಪಿನಿಂದ ಮುಲಾಯಂ ಅಸಮಾಧಾನಗೊಂಡಿದ್ದಾರೆ ಎನ್ನುವುದು ನನಗೆ ಗೊತ್ತು. ಆದರೆ ಈ ರೀತಿ ವರ್ತಿಸುವುದು ಸರಿಯಲ್ಲ. ಇದರಿಂದ ತಮಗೇನೂ ಲಾಭವಾಗದು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ರಾಮನಲ್ಲಿ ಕ್ಷಮೆ ಕೇಳಿ...
ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ತ್ರಿಸದಸ್ಯ ಪೀಠವು ಅಯೋಧ್ಯೆ ಕುರಿತು ನೀಡಿರುವ ತೀರ್ಪಿನ ವಿರುದ್ಧ ನೀಡಿರುವ ಹೇಳಿಕೆಗಾಗಿ ಮುಲಾಯಂ ಅಯೋಧ್ಯೆಗೆ ತೆರಳಿ ಅಲ್ಲಿನ ತಾತ್ಕಾಲಿಕ ಗುಡಿಯಲ್ಲಿರುವ ಶ್ರೀರಾಮನ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮುಲಾಯಂ ನೀಡಿರುವ ಹೇಳಿಕೆ ಅನಪೇಕ್ಷಿತವಾದುದಾಗಿದೆ. ಅವರು ಇಡೀ ದೇಶದ, ಅದರಲ್ಲೂ ಅಯೋಧ್ಯೆಯ ನಿವಾಸಿಗಳಲ್ಲಿ ಕ್ಷಮೆ ಯಾಚಿಸಬೇಕು. ಅವರು ರಾಮ ಲಲ್ಲಾನ ಎದುರು ತಲೆ ಬಾಗಿಸಿ 'ನನ್ನನ್ನು ಮನ್ನಿಸು' ಎಂದು ಕೇಳಿಕೊಳ್ಳಬೇಕು ಎಂದು ಅಯೋಧ್ಯಾ ನಗರದ ನಿವಾಸಿಗಳ ಪರವಾಗಿ ನಾನು ಮುಲಾಯಂ ಅವರಿಗೆ ಬೇಡಿಕೆ ಇಡುತ್ತಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಕಟಿಯಾರ್ ಒತ್ತಾಯಿಸಿದರು.

ಸಂಬಂಧಪಟ್ಟ ಸುದ್ದಿಗಳು:
* ಹಿಂದೂ-ಮುಸ್ಲಿಮರಿಗೆ ಅಯೋಧ್ಯೆ ಹಂಚಿಕೆ: ಹೈಕೋರ್ಟ್ ತೀರ್ಪು
* ಅಯೋಧ್ಯೆಯೇ ರಾಮ ಜನ್ಮಭೂಮಿ, ಮಸೀದಿ ಅನ್ಇಸ್ಲಾಮಿಕ್
* ರಾಮಮಂದಿರ ನಿರ್ಮಾಣ ಹಾದಿ ಸುಗಮ: ಆರೆಸ್ಸೆಸ್, ವಿಎಚ್‌ಪಿ
* ನನ್ನ ಜೀವನದ ಅಮೂಲ್ಯ ಕ್ಷಣವಿದು: ತೀರ್ಪಿಗೆ ಉಮಾ ಭಾರತಿ
* ಅಯೋಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿ: ಸುನ್ನಿ ವಕ್ಫ್ ಮಂಡಳಿ
* ಒಡೆತನ ಹಂಚಿಕೆ; ಹಿಂದೂ ಮಹಾಸಭಾ ಸುಪ್ರೀಂ ಕೋರ್ಟಿಗೆ
* ಭವ್ಯ ರಾಮಮಂದಿರ ನಿರ್ಮಾಣ ಹಾದಿ ಸುಗಮ: ಮೋದಿ
* 'ರಾಮ ಹುಟ್ಟಿದ್ದು ಎಲ್ಲಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ'
* ಕಾಂಗ್ರೆಸ್ ಮಸೀದಿ ಕಟ್ಟಿ ಕೊಡಲಿ: ಬಾಬ್ರಿ ಕ್ರಿಯಾ ಸಮಿತಿ
* ಬಿಜೆಪಿಗೆ ಅಚ್ಚರಿ, ಕಾಂಗ್ರೆಸ್‌ಗೆ ಆಘಾತ; ಜನತೆಗೆ ನೆಮ್ಮದಿಯೇ?
* ಅಯೋಧ್ಯೆ ತೀರ್ಪು ಬಾಬ್ರಿ ಧ್ವಂಸದ ಸಮರ್ಥನೆಯಲ್ಲ: ಚಿದಂಬರಂ
* ಅಯೋಧ್ಯೆ ಸನ್ನಾಹ: ಎಡವಿದ ಸರಕಾರ, ಮಾಧ್ಯಮಗಳು
* 'ತೀರ್ಪು ನಮ್ಮಲ್ಲಿ ದ್ವಿತೀಯ ದರ್ಜೆ ಪೌರರೆಂಬ ಭಾವನೆ ತಂದಿದೆ'
ಸಂಬಂಧಿತ ಮಾಹಿತಿ ಹುಡುಕಿ