ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಚಿಂತಿಸುತ್ತಾ ಕೂಡುವುದಿಲ್ಲ:ಪನಾಂಗ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ಗ್ಲಾಮರ್ ಮತ್ತು ಸೌಂದರ್ಯ ಜಗತ್ತಿನ ತನ್ನ ಸಮಕಾಲೀನ ನಟಿಯರ ರೀತಿ ಸ್ಪರ್ಧೆಯ ಭಾಗವಾಗಿರುವುದು ಗುಲ್ ಪನಾಂಗ್‌ಗೆ ಇಷ್ಟವಿಲ್ಲ. ಅದಕ್ಕೆ ಕಾರಣವೇನೆಂದು ಆಕೆ ಹೇಳುತ್ತಾಳೆ.

ಬಾಲಿವುಡ್‌ನಲ್ಲಿ ನನ್ನ ಮುಂದಿನ ಹೆಜ್ಜೆ ಯೋಜಿಸುವ ಬಗ್ಗೆ 24 ಗಂಟೆಗಳವರೆಗೆ ಚಿಂತಿಸುತ್ತಾ ಕುಳಿತುಕೊಳ್ಳುವ ಬದಲಿಗೆ ನಾನು ಜೀವನವನ್ನು ಆಸ್ವಾದಿಸಲು ಮತ್ತು ಜಗತ್ತಿನ ಭಿನ್ನ ವಸ್ತುಗಳ ಬಗ್ಗೆ ಶೋಧಿಸಲು ಇಷ್ಟಪಡುವುದಾಗಿ ಮನೋರಮಾ ಸಿಕ್ಸ್ ಫೀಟ್ ಅಂಡರ್ ಚಿತ್ರದಲ್ಲಿ ನಟಿಸಿರುವ ಗುಲ್ ಪನಾಂಗ್ ಹೇಳುತ್ತಾಳೆ.

ಸೇನೆ ಯೋಧರ ಮಗಳಾಗಿ ಲೆಹ್ ಮತ್ತು ಲಡಕ್ ಮುಂತಾದ ಸ್ಥಳಗಳಲ್ಲಿ ಸಂಚರಿಸಿದ್ದೇನೆ ಎಂದು ಹೇಳುವ ಆಕೆ ಏಕತಾನತೆಯ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವೆಂದು ಊಹಿಸುತ್ತೀರಾ ಎಂದು ಪ್ರಶ್ನಿಸುತ್ತಾಳೆ.

ಏಕತಾನತೆಯ ಜೀವನವನ್ನು ಮುರಿಯಲು ಮನೋರಮಾ ಸಿಕ್ಸ್ ಫೀಟ್ ಅಂಡರ್ ಅವಕಾಶ ಒದಗಿಸಿತೇ ಎಂಬ ಪ್ರಶ್ನೆಗೆ ಚಿತ್ರವನ್ನು ಮೊದಲಿಗೆ ಓದಿದಾಗಲೇ ನವೀನತೆಯಿಂದ ಕೂಡಿದೆ ಅನಿಸಿತು,

ಜತೆಗೆ ಮಧ್ಯಮವರ್ಗದ ಗೃಹಿಣಿಯಾಗಿ ನಾನಾಗಿರದ ಕೆಲವು ಸ್ವಭಾವಗಳನ್ನು ಶೋಧಿಸಲು ಅವಕಾಶ ಕಲ್ಪಿಸಿತು ಎಂದು ಗುಲ್ ಹೇಳುತ್ತಾಳೆ. ಪ್ರತಿಯೊಬ್ಬ ನಟ ಇಂದು ಹಾಲಿವುಡ್ ಬಗ್ಗೆ ಮಾತನಾಡುತ್ತಿದ್ದರೆ ಗುಲ್‌ ಕೆಲವೇ ಹಾಲಿವುಡ್ ನಿರ್ದೇಶಕರ ಹೆಸರುಗಳನ್ನು ಮಾತ್ರ ನೆನಪಿಸಿಕೊಳ್ಳಬಲ್ಲಳು.