ದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ರಸದೌತಣ ಬಡಿಸಿದ ಹಿಂದಿ ಭಾಷೆಯ ಟಿವಿ ಚಾನೆಲ್‌ಗಳು ಪ್ರೇಕ್ಷಕರನ್ನು ಸೆಳೆಯಲು ಗೇಮ್ ಶೋ, ಕಾಮಿಡಿ, ಮಹಿಳಾ ಅಭಿರುಚಿಯ ಧಾರವಾಹಿಗಳು ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಪ್ರಸಾರ ಪಡೆದ ಸೆಟ್ ಮ್ಯಾಕ್ಸ್ ಚಾನೆಲ್, ಹಿಂದಿ ಭಾಷೆಯ ಮನೋರಂಜನಾ ಚಾನೆಲ್‌ಗಳನ್ನು ಹಿಂದಿಕ್ಕಿ ಕ್ರೀಡೆ ಹಾಗೂ ಮನೋರಂಜನೆಭರಿತ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಸೋನಿ ಎಂಟರ್‌ಟೇನ್‌ಮೆಂಟ್ ಚಾನೆಲ್ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗವಹಿಸಿದ 10 ಕಾ ದಮ್‌ನ ಎರಡನೇ ಆವೃತ್ತಿಯ ಆರಂಭಿಸಲಿದ್ದು, ಎಂಟರ್‌ಟೇನ್‌ಮೆಂಟ್ ಕೇ ಲಿಯೇ ಕುಚ್ ಭಿ ಕರೇಗಾ ಎನ್ನುವ ರಿಯಲ್ಟಿ ಶೋ ಆರಂಭಿಸಲಿದ್ದು ಈಗಾಗಲೇ ಏಳು ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸಲು ಸಿದ್ದವಾಗಿದೆ.
ಲೇಡಿಸ್ ಸ್ಪೇಶಲ್ , ಭಾಸ್ಕರ್ ಭಾರ್ತಿ, ಪಾಲಂಪುರ್ ಎಕ್ಸ್‌ಪ್ರೆಸ್ , ಚಿತ್ತೋಡ್ ಕಿ ರಾಣಿ ಪದ್ಮಿನಿ ಕಾ ಜೋಹರ್ ವಿಭಿನ್ನ ಕಥಾ ವಸ್ತುಗಳನ್ನು ಹೊಂದಿರುವ ಮಾಲಿಕೆಗಳನ್ನು ಬಿತ್ತರಿಸಿ ಪ್ರೇಕ್ಷಕರ ಮನಸೆಳೆಯಲು ಸಿದ್ದವಾಗಿದೆ.
ವಿಭಿನ್ನ ರೀತಿಯ ಧಾರವಾಹಿಗಳು, ಕಥಾವಸ್ತುಗಳು ವಿಶೇಷ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದೇವೆ. ಪ್ರತಿಯೊಂದು ಕಾರ್ಯಕ್ರಮಗಳು ಇತರ ಕಾರ್ಯಕ್ರಮಗಳಿಗಿಂತ ಭಿನ್ನವಾಗಿವೆ. ಇಲ್ಲಿಯವರೆಗೆ ನೋಡಿರುವುಕ್ಕಿಂತ ಹೊಸತನ್ನು ನೀಡಲು ಸೋನಿ ಎಂಟರ್‌ಟೇನ್‌ಮೆಂಟ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸೋನಿ ಚಾನೆಲ್‌ನ ಗುರ್ದಿಪ್ ಭಾಂಗೂ ತಿಳಿಸಿದ್ದಾರೆ.
ಕಲರ್ಸ್ ಚಾನೆಲ್ ಕೂಡಾ ಬ್ರಿಟಿಷ್ ರಿಯಲ್ಟಿ ಶೋ ರೀತಿಯಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಮತ್ತು ಮಕ್ಕಳ ಆಧಾರಿತ ಕಾಮಿಡಿ ಶೋ ಚೋಟೆ ಮಿಯಾ ಎನ್ನುವ ಎರಡು ರಿಯಲ್ಟಿ ಶೋ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡಲು ಸಿದ್ದಪಡಿಸಿಕೊಂಡಿದೆ.
ಐಪಿಎಲ್ ನಡೆಯುತ್ತಿದ್ದ ಅವಧಿಯಲ್ಲಿ ಸೆಟ್ ಮ್ಯಾಕ್ಸ್ ಚಾನೆಲ್ ಬಿಹಾರ್ ರಾಜ್ಯದಲ್ಲಿ ಯುವತಿಯರನ್ನು ಅಪಹರಿಸಿ ಮದುವೆಯಾಗುವ ಸಂಪ್ರದಾಯ ಆಧಾರಿತ ಸಬ್‌ಕಿ ಜೋಡಿ ಬನಾತಾ ಭಾಗ್ಯವಿಧಾತಾ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿತು.
ಝೀ ಟಿವಿ, ಎನ್‌ಡಿಟಿವಿ ಇಮ್ಯಾಜಿನ್ , ಸಬ್ ಟಿವಿ, ಸ್ಟಾರ್ ಒನ್ ಚಾನೆಲ್‌ಗಳು ಕೂಡಾ ಹಿಂದೆ ಬಿದ್ದಿಲ್ಲ. ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಿದ್ದಪಡಿಸುವಲ್ಲಿ ನಿರತವಾಗಿವೆ ಎನ್ನುವುದನ್ನು ಮರೆಯುವಂತಿಲ್ಲ.