ಬಾಲಿವುಡ್‌ನ ಯಶಸ್ವಿ 'ಮೈ ಹೂ ನಾ' ಚಿತ್ರದ ನಿರ್ದೇಶಕಿ ನಟಿ ಫರಹಾ ಖಾನ್ ನಿರ್ದೇಶನದ ಮುಂದಿನ ಚಿತ್ರ 'ಹ್ಯಾಪಿ ನ್ಯೂ ಇಯರ್'. ಚಿತ್ರದ ಬಗ್ಗೆ ಮಾತನಾಡಿದ ಫರಾಹ ಇದೊಂದು ಆಧುನಿಕತೆಯ ಸಮಕಾಲೀನ ಚಿತ್ರವಾಗಿದೆ ಎಂದಿದ್ದಾರೆ. ಆದರೇ ಚಿತ್ರಕತೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. 'ಹ್ಯಾಪಿ ನ್ಯೂ ಇಯರ್' ಚಿತ್ರದ ನಿರ್ಮಾಣ ಹಕ್ಕನ್ನು ಶಾರುಕ್ ಖಾನ್‌ರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣವು ಪೂರ್ತಿಗೊಳ್ಳಲಿದೆ.