ಅಂಬಾನಿ ಬಾಲಿವುಡ್ ಪ್ರವೇಶ
ಮುಂಬೈ, ಸೋಮವಾರ, 13 ಆಗಸ್ಟ್ 2007( 15:23 IST )
ದೇಶದ ಹೆಸರಾಂತ ಉದ್ಯಮಿ ಅನಿಲ್ ಅಂಬಾನಿ ಎಕ್ಸೆಲ್ ಎಂಟರ್‌ಟೆನಮೆಂಟ್‌ನ ಫರ್ಹಾನ್ ಅಖ್ತರ್ ಹಾಗೂ ರೀತೇಶ್ ಸಿಧವಾನಿ ಅವರೊಂದಿಗೆ ಆರು ಬಾಲಿವುಡ್ ಚಿತ್ರಗಳ ಒಪ್ಪಂದಕ್ಕೆ ಸಹಿಹಾಕಿದ್ದಾರೆ.
ವಿವಿಧ ಕ್ಷೇತ್ರಗಳ ಉದ್ಯಮಿಗಳು ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ರಿಲಾಯನ್ಸ್ ಎಂಟರ್‌ಟೇನ್‌ಮಂಟ್ ಉನ್ನತ ಅಧಿಕಾರಿಗಳು ಎಕ್ಸೆಲ್ ಹಾಗೂ ಆರು ಬಾಲಿವುಡ್ ಚಿತ್ರಗಳ ನಿರ್ದೆಶಕರೊಂದಿಗೆ ಸತತ ಸಭೆಗಳನ್ನು ನಡೆಸಿದ್ದಾರೆ, ಚಿತ್ರಗಳ ನಾಯಕರನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ರೀತೇಶ್ ಸಿಧವಾನಿ ಹೇಳಿದ್ದಾರೆ.
ಝೋಯಾ ಅಖ್ತರ್, ರೀಮಾ ಕಗ್ತಿ ಹಾಗೂ ಫರ್ಹಾನ್ ಅಖ್ತರ್ ಅವರನ್ನು ಮೂರು ಚಿತ್ರಗಳ ನಿರ್ಧೆಶಕರೆಂದು ಒಪ್ಪಂದದಲ್ಲಿ ನೇಮಕ ಮಾಡಲಾಗಿದೆ. ಆದರೆ ಇನ್ನುಳಿದ ಮೂವರ ಹೆಸರುಗಳನ್ನು ಬಹಿರಂಗಪಡಿಸಲಾಗದು ಮುಂಬರುವ ಡಿಸೆಂಬರ್ ತಿಂಗಳಾಂತ್ಯದಲ್ಲಿ ಆರು ಚಿತ್ರಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.