ನಟಿ ರಮ್ಯಾ ಬಿಡಿ ಒಂದಿಲ್ಲೊಂದು ಕಾರ್ಯದಲ್ಲಿ ಬ್ಯುಸಿಯಾಗಿರುತ್ತಾರೆ. ತಮ್ಮನ್ನು ತಾವು ಯಾವತ್ತು ಫ್ರೀಯಾಗಿ ಇರೋದಕ್ಕೆ ಬಿಡುವುದಿಲ್ಲ. ರಮ್ಯ ಸದ್ಯ ಕನ್ನಡ ಚಿತ್ರಗಳಲ್ಲಲ್ಲದೆ ತಮಿಳು ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.
ರಮ್ಯಾ ಕನ್ನಡದಲ್ಲಿ ಕಿಚ್ಚ ಹುಚ್ಚ ಮತ್ತು ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾದರೆ, ತಮಿಳಿನಲ್ಲಿ ಕಾದಲ್ 2 ಕಲ್ಯಾಣಂ ಮತ್ತು ಸಿಂಗಂ ಪುಲಿ ಚಿತ್ರಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ರಮ್ಯ ಒಟ್ಟೊಟ್ಟಿಗೆ ನಾಲ್ಕು ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ರಮ್ಯಾಗೆ ಒಂದು ಹೊಸ ಆಸೆ ಶುರುವಾಗಿದೆ. ಏನೆಂದರೆ ಪೌರಾಣಿಕ ಪಾತ್ರಗಳಲ್ಲಿ ಇವರು ನಟಿಸಬೇಕಂತೆ. ಅಂಥ ಪಾತ್ರಗಳಲ್ಲಿ ವಸ್ತ್ತ್ರವಿನ್ಯಾಸ, ನಟನೆ, ನೋಟ ಎಲ್ಲವೂ ಅದ್ಬುತ ಅಂತೆ. ಮುಂದಿನ ದಿನಗಳಲ್ಲಿ ರಾಣಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುತ್ತಾರಂತೆ ರಮ್ಯಾ. ಇವರಿಗೆ ನೆಗೆಟಿವ್ ಪಾತ್ರಗಳಲ್ಲಿ ನಟಿಸುವುದು ಇಷ್ಟವಿಲ್ಲವಂತೆ. ರಮ್ಯಾ ಅಭಿನಯದ ನಾಲ್ಕು ಚಿತ್ರದ ಚಿತ್ರೀಕರಣ ಒಂದೇ ಸಮಯದಲ್ಲಿ ನಡೆಯುತ್ತಿದೆ. ಇವರ ಯಾವ ಚಿತ್ರ ಮೊದಲು ಬರುತ್ತದೆ ಎಂದು ಕಾದು ನೋಡಬೇಕಿದೆ. ( ರಮ್ಯಾಳ ಮಾದಕ ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ)