ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹರ್ಷರ ಲವ್ವಲ್ಲಿ ಹೊಡ್ದಾವ್ನೆ... (Harsha | Prem Kahani | Ravana | Hey Sarasu)
ಸುದ್ದಿ/ಗಾಸಿಪ್
Feedback Print Bookmark and Share
 
Harsha
MOKSHA
'ಲವ್ವಲ್ಲಿ ಹೊಡ್ದಾವ್ನೆ...' ಇದು ಪ್ರೇಮ್ ಕಹಾನಿ ಚಿತ್ರದ ಹಾಡು. ಈಗಾಗಲೇ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿರುವ ಈ ಹಾಡಿನಲ್ಲಿ ಸಂಗೀತಕ್ಕಿಂತ ನೃತ್ಯವೇ ಹೈಲೈಟ್. ಈ ಮೂಲಕ ಮತ್ತೊಮ್ಮೆ ಮಿಂಚುತ್ತಿದ್ದಾರೆ ನೃತ್ಯ ನಿರ್ದೇಶಕ ಹರ್ಷ.

ಹೌದು. ಇದರ ಯಶಸ್ಸು ಇವರಿಗೆ ಸಲ್ಲಬೇಕು. ಈ ಹೊಸ ಪ್ರಯೋಗವನ್ನು ರಾವಣ ಚಿತ್ರದಲ್ಲೂ ನಡಸಿದ್ದರಂತೆ. ಇದು ಅಂಬಾರಿ ಚಿತ್ರದ 'ಹೇ ಸರಸೂ...' ಹಾಡಿನ ಯಶಸ್ಸು ಮರುಕಳಿಸಿದೆ ಎನ್ನುತ್ತಾರೆ ಹರ್ಷ. ನಿರ್ದೇಶಕ ಯೋಗರಾಜ್ ಭಟ್ಟರ ಮನಸಾರೆ ಚಿತ್ರದ ಎರಡು ಹಾಡಿಗೆ ಇವರು ನೃತ್ಯ ಸಂಯೋಜಿಸಿದ್ದಾರೆ.

ನಿರ್ದೇಶನದ ಎರಡನೇ ಚಿತ್ರ ಬಿರುಗಾಳಿ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲವಾದರೂ ಚಿತ್ರದ ಹಾಡು ಜನ ಮೆಚ್ಚಿಕೊಂಡಿದ್ದಾರೆ. ಇದೀಗ ನೃತ್ಯದತ್ತ ಹೆಚ್ಚು ಒಲವು ತೋರಿದ್ದಾರೆ ಹರ್ಷ. ಆದರೆ ಈ ಮಧ್ಯೆ ಸದ್ದಿಲ್ಲದೆ ಮತ್ತೊಂದು ಚಿತ್ರ ನಿರ್ದೇಶನಕ್ಕೆ ತಯಾರಿ ನಡೆಸಿದ್ದಾರೆ. ಮೊದಲೆರಡು ಚಿತ್ರಗಳಲ್ಲಿ ಮಾಡಿದ ತಪ್ಪನ್ನು ಅವಲೋಕಿಸಿದ್ದಾರೆ. ಹಾಸ್ಯ ಬೆರಸಿ ಚಿತ್ರ ನೀಡಲು ಅವರು ಮುಂದಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರ್ಷ, ಪ್ರೇಮ ಕಹಾನಿ, ಲವ್ವಲ್ಲಿ ಹೊಡ್ದಾವ್ನೆ, ರಾವಣ