ಬ್ಯುಸಿಯಾದ ಮನೋಮೂರ್ತಿ
ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತೆ ಬ್ಯುಸಿಯಾಗಲಿದ್ದಾರೆಯೇ? ಹೌದು. ಇವರ ಮುಂದೆ ಸಾಲು ಸಾಲು ಚಿತ್ರಗಳಿವೆ. ಮೂರು ವಾರಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಚಾರ ತೆರೆಕಂಡಿದೆ.ರಮೇಶ್ ಯಾದವ್ ನಿರ್ಮಾಣದ ಜನುಜನುಮದಲ್ಲೂ ಮುಗಿದು ಇನ್ನೇನು ತೆರೆಗೆ ಬರಲು ತವಕಿಸುತ್ತಿದೆ. ಆದರೆ ಚಿತ್ರ ಬಿಡುಗಡೆ ಆಗಿಲ್ಲ ಎಂದು ಆಶ್ಚರ್ಯಪಡುತ್ತಿದ್ದಾರೆ ಮನೋಮೂರ್ತಿ. ಇವರ ಸಂಯೋಜನೆಯ ಮಳೆ ಬರಲಿ ಮಂಜು ಬರಲಿ ಚಿತ್ರ ಈ ತಿಂಗಳಲ್ಲಿ ತೆರೆಗೆ ಬರಲಿದೆ. ಈ ನಡುವೆ ಯೋಗರಾಜ್ ಭಟ್ಟರ ಮನಸಾರೆ ಪ್ರಾಜೆಕ್ಟಿಗೂ ಇವರು ಸಾಥ್ ನೀಡುತ್ತಿದ್ದಾರೆ. ಮಿಲನ ಬಳಿಕ ಪ್ರಕಾಶ್ ಜೊತೆ ಗೋಕುಲದಲ್ಲಿ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಇದು ಕೂಡ ಸಂಗೀತ ಪ್ರಧಾನ ಚಿತ್ರ ಎಂದು ನಿರ್ದೇಶಕರು ಹೇಳಿದ್ದಾರೆ. ಅಂತೂ ಮನೋಮೂರ್ತಿ ಕೈ ತುಂಬಾ ಕೆಲಸ ಇದೆ. ಕಾದು ಕೇಳಲು ನಮ್ಮ ಕಿವಿಯೂ ಇದೆ.