ಬೆಂಗಳೂರು ಮೂಲದ ಕನ್ನಡ ನಟಿ ಸಂಜನಾ ಗಲ್ರಾನಿ ತಾನು ನಟಿಸಿದ ಚಿತ್ರಗಳ ಬಗ್ಗೆ ಕಡಿಮೆ ಸುದ್ದಿ ಮಾಡಿದರೂ ಇತ್ತೀಚೆಗೆ ಐಪಿಎಲ್ 20-20 ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿರುವ, ಕ್ರಿಕೆಟಿಗ ವಿರಾಟ್ ಕೋಹ್ಲಿ ಅವರೊಂದಿಗಿನ ಹತ್ತಿರದ ಸಂಬಂಧದಿಂದಾಗಿ ಕ್ರೀಡಾ ,ಸಿನಿಮಾ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದಾರೆ.
ನಮ್ಮಿಬ್ಬರ ನಡುವೆ ಯಾವ ಸಂಬಂಧವಿಲ್ಲ. ನಾವು ಕೇವಲ ಗೆಳೆಯರು ಅಷ್ಟೆ. ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಜೊತೆ ಜೊತೆಯಾಗಿ ತಿರುಗುತ್ತವೆ.ಆದರೆ ಇದರರ್ಥ ನಮ್ಮ ಸಂಬಂಧ ಗೆಳತನವನ್ನು ಮೀರಿದೆ ಎಂದಲ್ಲ. ವಿರಾಟ್ ಕೊಹ್ಲಿಯವರನ್ನು ನಮ್ಮಿಬ್ಬರಿಗೆ ಆತ್ಮಿಯರಾಗಿರುವ ಗೆಳೆಯರು ಪರಿಚಯಿಸಿದ್ದಾರೆ. ವಿರಾಮದ ಸಮಯದಲ್ಲಿ ಪರಸ್ಪರರನ್ನು ಭೇಟಿಯಾಗುತ್ತೇವೆ. ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ.ಆತನಿಗೂ ಚಿತ್ರಗಳಲ್ಲಿ ನಟಿಸಲು ಆಸಕ್ತಿಯಿದೆ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ.
ಏತನ್ಮಧ್ಯೆ ,ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ " ಶ್ಲೋಕ " ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಬಹುತೇಕ ತೆಲುಗು ಚಿತ್ರಗಳಾದ ಸತ್ಯಮೇವ ಜಯತೆ ಮತ್ತು ಸಮರ್ಥಡು ಚಿತ್ರಗಳಲ್ಲಿರುವಂತೆ ಪ್ರಧಾನ ನಾಯಕಿಯಾಗಿ ನಟಿಸುತ್ತಿದ್ದೇನೆ. ಈ ಸಂಜೆ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ.
ಬುಜ್ಜಿಗಾಡು ಚಿತ್ರದಲ್ಲಿ ಮಾದಕ ನಟನೆಯಿಂದ ಮನಸೂರೆಗೊಂಡ ಕನ್ನಡ ನಟಿ ಸಂಜನಾ, ರಾಜಶೇಖರ್ ನಾಯಕನಾಗಿ ನಟಿಸಿರುವ ಸತ್ಯಮೇವ ಜಯತೆ ಚಿತ್ರದಲ್ಲಿ ನಟಿಸಿ ಗೃಹಿಣಿಯರ ಪ್ರಂಶಸೆಗೆ ಪಾತ್ರರಾಗಿದ್ದರು.
ಈ ಹಿಂದೆ ಸಮರ್ಥಡು,ಪೊಲೀಸ್ ಚಿತ್ರಗಳಲ್ಲಿ ನಟಿಸಿ ಟಾಲಿವುಡ್‌ನಲ್ಲಿ ಖ್ಯಾತಿ ಪಡೆದ ಸಂಜನಾ ಗಾಂಧಿ, ಕ್ರಿಕೆಟರ್ ಕೋಹ್ಲಿ ಮಧ್ಯೆ ಏನೋ ನಡೆದಿದೆ ಎನ್ನುವ ಗುಸು ಗುಸು ಶಬ್ದ ಟಾಲಿವುಡ್‌ನಲ್ಲಿ ಕೇಳಿಬರುತ್ತಿದೆ.
ಅಷ್ಟೆ ಅಲ್ಲಾ ...ಕ್ರಿಕೆಟ್ ಬ್ಯಾಟ್ಸ್‌ಮೆನ್ ವಿರಾಟ್ ಕೋಹ್ಲಿ ಸಂಜನಾಳ ಮಧ್ಯೆ ಆಳವಾದ ಫ್ರೆಂಡ್‌ಶಿಪ್‌ಯಿದೆ. ಬೆಂಗಳೂರಿನಲ್ಲಿ ಇಬ್ಬರು ಪಾರ್ಟಿಗಳಿಗೆ ಜೊತೆಯಾಗಿ ಹೋಗುತ್ತಾರೆ ಎಂದು ಜನ ಮಾತನಾಡುತ್ತಿದ್ದಾರೆ.
"ಒಬ್ಬರು ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳಬೇಕಾದಲ್ಲಿ ಇಬ್ಬರೂ ಪರಸ್ಪರರ ಅಭಿರುಚಿಗಳನ್ನು ತಿಳಿದುಕೊಳ್ಳಬೇಕು" ಎಂದು ಸಂಜನಾ ಹೇಳಿಕೆ ನೀಡಿದ್ದಾರೆ.