ಹೊಸ ಚಿತ್ರದಲ್ಲಿ ಧನುಷ್
ನಿನ್ನ ಪೂಜೆಗೆ ಬಂದೆ ಮಾದೇಶ್ವರ... ಹಾಡಿನ ಮೂಲಕ ಗಮನ ಸೆಳೆದ ಚಿತ್ರ ಸೈಕೋ. ಆದರೆ, ಈ ಸೈಕೋ ತಂತ್ರಜ್ಞಾನದಿಂದ ಜನಪ್ರಿಯ ಗಳಿಸಿದರೂ ಹಿಟ್ ಆಗಲಿಲ್ಲ. ಇದೀಗ ಅದರ ನಿರ್ಮಾಪಕ ಗುರುದತ್ತ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಚಿತ್ರಕ್ಕಿನ್ನು ಹೆಸರಿಟ್ಟಿಲ್ಲ. ಆದರೆ ನಾಯಕನ ಆಯ್ಕೆ ಆಗಿದೆ. ಇದಕ್ಕೊ ಸೈಕೋ ನಾಯಕ ಧನುಷ್ ಅವರೇ ಹೀರೋ. ಚಿತ್ರವನ್ನು ಗುರುದತ್ ಹಾಗೂ ಜಿ. ರಘುದತ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಮೊದಲು ರಘುದತ್ ಅವರು ರಮೇಶ್ ಅರವಿಂದ್ ನಿರ್ದೇಶನದ ಅಕ್ಸಿಡೆಂಟ್ ಚಿತ್ರವನ್ನು ನಿರ್ಮಿಸಿದ್ದರು.ಕೆಲವು ಮೂಲಗಳ ಪ್ರಕಾರ ರಘುದತ್ ಅವರೇ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದ ಹಾಗೆ ಚಿತ್ರಕ್ಕಾಗಿ ಧನುಷ್ ಐದು ಕೆ.ಜಿ. ತೂಕ ಇಳಿಸಿದ್ದಾರಂತೆ. ಚಿತ್ರ ಸೆಪ್ಟೆಂಬರ್‌ನಲ್ಲಿ ಸೆಟ್ಟೇರಲಿದೆ. ಶುಭವಾಗಲಿ.