ಪ್ರಜ್ವಲ್ ಅಭಿನಯದ ಸರಿಗಮ ಚಿತ್ರ ಸಧ್ಯಕ್ಕೆ ನಿಂತಿದೆ. ಇಷ್ಟರೊಳಗೆ ಚಿತ್ರೀಕರಣ ಮುಗಿದು ಬಿಡುಗಡೆಯಾಗಬೇಕಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಇದರ ಸುದ್ದಿಯೇ ಇಲ್ಲ.
ಇದೀಗ ಬಂದಿರುವ ಮಾಹಿತಿ ಪ್ರಕಾರ, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರಿಗೆ ಜ್ವರ ಬಂದಿದೆಯಂತೆ. ಅದಕ್ಕೆ ಚಿತ್ರ ಅರ್ಧಕ್ಕೆ ನಿಂತಿದೆ. ಸಧ್ಯಕ್ಕೆ ವಿಶ್ರಾಂತಿಯಲ್ಲಿರುವ ದೇಸಾಯಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಪೂರ್ತಿಯಾಗಿ ಗುಣಮುಖರಾಗಲು ಒಂದು ವಾರ ಬೇಕಾಗಬಹುದು ಎನ್ನುತ್ತಾರೆ ಚಿತ್ರದ ನಾಯಕಿ ನಟಿಯರಲ್ಲಿ ಒಬ್ಬರಾದ ನಕ್ಷತ್ರ.
MOKSHA
ಚಿತ್ರದ ಚಿತ್ರೀಕರಣದಲ್ಲಿ ಶೇಕಡ 40ರಷ್ಟು ಬಾಕಿಯಿದೆ. ನಟ ಪ್ರಜ್ವಲ್ ದೇವರಾಜ್‌ಗೆ ಇದು ಎರಡನೇ ಬಾರಿ ಆಗುತ್ತಿದೆ. ಈ ಮೊದಲು ನಿರ್ಮಾಪಕ-ನಿರ್ದೇಶಕರ ನಡುವಿನ ಸಣ್ಣ ಭಿನ್ನಾಭಿಪ್ರಾಯದಿಂದ ಸೂಪರ್‌ಮ್ಯಾನ್ ಚಿತ್ರ ಸ್ಥಗಿತಗೊಂಡಿತ್ತು. ಈ ಚಿತ್ರ ಮುಗಿದ ಬಳಿಕ ಸೂಪರ್‌ಮ್ಯಾನ್‌ನಲ್ಲಿ ನಟಿಸಬೇಕಿತ್ತು. ಆದರೆ ಎರಡೂ ಆಗುತ್ತಿಲ್ಲ. ಇವರ ಇನ್ನೊಂದು ಚಿತ್ರ ಕೆಂಚ ಇದೇ 10ರಂದು ತೆರೆಕಾಣುತ್ತಿದೆ. ಆ ಬಳಿಕ ಜೀವ ತೆರೆಕಾಣಲಿದೆ. ಇವೆರಡು ಚಿತ್ರಗಳು ಪ್ರಜ್ವಲ್ ಭವಿಷ್ಯ ನಿರ್ಧರಿಸುವುದರಲ್ಲಿ ಎರಡು ಸಂಶಯವಿಲ್ಲ.