ಚಿತ್ರರಂಗದ ಚಟುವಟಿಕೆಗಳಿಗಾಗಿ ಮೀಸಲಿರುವ ಕಂಠೀರವ ಸ್ಟುಡಿಯೋಗೆ ನವೀಕರಣದ ಭಾಗ್ಯ ಬಂದಂತಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಸೌಲಭ್ಯದ ಕೊರತೆಗಳಿಂದ ಸೊರಗಿದ್ದ ಕಂಠೀರವ ಸ್ಟುಡಿಯೋಗೆ ಮತ್ತೆ ಹೊಸ ಜೀವ ತುಂಬಲು ಕಂಠೀರವ ಸ್ಟುಡಿಯೋದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗಿರೀಶ್ ಮಟ್ಟಣವರ್ ನಿರ್ಧರಿಸಿದ್ದಾರೆ.
ಸ್ಟುಡಿಯೋವನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸಿ ಚಿತ್ರರಂಗದ ಮಂದಿಯನ್ನು ಇತ್ತ ಸೆಳೆಯುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಿರುವ ಅವರು, ಚಿತ್ರರಂಗದ ಹಳೆಯ ತಾಂತ್ರಿಕ ವಸ್ತುಗಳನ್ನು ಮುಂದಿನ ಪೀಳಿಗೆಯೂ ನೋಡಲು ಅವಕಾಶವಾಗುವಂತೆ ಒಂದು ಪ್ರತ್ಯೇಕ ಕೋಣೆಯನ್ನು ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಈ ಮೂಲಕ ಚಿತ್ರ ನಿರ್ಮಿಸಲು ಬಳಸುತ್ತಿದ್ದ ಹಳೆಯ ಮಾದರಿಯ ತಾಂತ್ರಿಕ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲು ಸಹಾಯವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಸುಮಾರು 5 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಸ್ಟುಡಿಯೋದೊಳಗೆ ಹಾಲಿ ಇರುವ ಕೋರ್ಟ್, ಪೊಲೀಸ್ ಠಾಣೆ, ದೇವಸ್ಥಾನ, ಮನೆ ಇವೆಲ್ಲವನ್ನು ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಳಿಲಿವೆ. ಈ ಮೂಲಕ ಅತ್ಯಾಧುನಿಕ ಸ್ಟುಡಿಯೋ ಬಯಸಿ ಹೊರಗಡೆ ಹೋಗುವ ಚಿತ್ರಮಂದಿಯನ್ನು ಇತ್ತ ಸೆಳೆಯಬೇಕೆಂಬ ಉದ್ದೇಶ ಹೊಂದಿದ್ದಾರೆ. ಆದರೆ ಎಷ್ಟೇ ಸೌಲಭ್ಯ ಬಂದರೂ ನಮ್ಮವರಿಗೆ ಹಿತಲ್ಲ ಗಿಡ ಮದ್ದಲ್ಲ ಬಿಡಿ...