ಲೂಸ್ ಮಾದ ಯೋಗೀಶ್ ತಮ್ಮ 20ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಈ ವರ್ಷ ಅವರಿಗೆ ಅದೃಷ್ಟ ವರ್ಷ ಎಂದೇ ಹೇಳಬೇಕು. ದುನಿಯಾ ಚಿತ್ರದಲ್ಲಿ ಲೂಸ್ ಮಾದ ಆದಾಗ ಈತ ಇಷ್ಟು ಪ್ರಮಾಣದಲ್ಲಿ ಬೆಳೆಯುತ್ತಾನೆ ಎಂದು ಕನ್ನಡ ಚಿತ್ರಗಳ ಪ್ರೇಕ್ಷಕರೇಕೆ, ಗಾಂಧಿನಗರದ ಮಂದಿಯೇ ಅಂದುಕೊಂಡಿರಲಿಲ್ಲ.
ಆದರೆ ದುನಿಯಾ ಯೋಗೀಶ್ ಭವಿಷ್ಯದ ಚಿತ್ರಣವನ್ನೇ ಬದಲಿಸಿತ್ತು. ಆ ಬಳಿಕ ನಂದ ಲವ್ಸ್ ನಂದಿತಾ, ಅಂಬಾರಿ, ಪ್ರೀತ್ಸೆ ಪ್ರೀತ್ಸೆ ಚಿತ್ರಗಳು ಸಾಕಷ್ಟು ಜನಪ್ರಿಯ ಗಳಿಸದಿದ್ದರೂ, ಯೋಗೀಶ್ ಅದೃಷ್ಟ ಮಾತ್ರ ಗಟ್ಟಿಯಾಗಿಯೇ ಇದೆ.
ಇದೀಗ ಯೋಗಿ ಕೈಯಲ್ಲಿ ಒಂಭತ್ತು ಚಿತ್ರಗಳಿವೆ. ಯೋಗಿ, ರಾವಣ, ಮಿಸ್ಟರ್ ಪೇಂಟರ್, ಪುಂಡ ಚಿತ್ರೀಕರಣ ಈಗಾಗಲೇ ಪ್ರಾರಂಭಗೊಂಡಿದೆ. ಇದರ ಬಳಿಕ ಯಕ್ಷ, ಪ್ರೊಡಕ್ಷನ್ ನಂ.3, ಶನಿವಾರ... ಹೀಗೆ ಹಲವು ಚಿತ್ರಗಳಿಗೆ ಎಸ್ ಅಂದಿದ್ದಾರೆ. ಏನೇ ಇರಲಿ. ವಿಶ್ ಯೂ ಹ್ಯಾಪಿ ಬರ್ತಡೆ ಯೋಗೀಶ್...