ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುನೀತ್-ರಾಧಿಕಾ ಪಂಡಿತ್ ನಾಡೋಡಿಗಳ್ ಈಗ 'ಹುಡುಗ್ರು' (Hudugru | Puneet Raj Kumar | Radhika Pandit | Sreenagara Kitty)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಚಿತ್ರಕ್ಕೆ ಕೊನೆಗೂ ಹೆಸರು ಇಡಲಾಗಿದೆ. ತಮಿಳಿನ ಹಿಟ್ ಚಿತ್ರ 'ನಾಡೋಡಿಗಳ್' ರೀಮೇಕ್‌ಗೆ 'ಹುಡುಗ್ರು' ಎಂದು ನಾಮಕರಣ ಮಾಡಲಾಗಿದೆ.

ರಾಜ್ ಬ್ಯಾನರ್ ಅಡಿಯಲ್ಲೇ ತಯಾರಾಗುತ್ತಿರುವ ಚಿತ್ರಕ್ಕೆ ಅಲೆಮಾರಿಗಳು ಎಂದು ಹೆಸರಿಡಲಾಗುತ್ತದೆ ಎಂದು ಈ ಹಿಂದೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಆದರೆ ಅವೆಲ್ಲಕ್ಕೂ ಈಗ ತೆರೆ ಎಳೆಯಲಾಗಿದೆ. ವಿವಾದವೊಂದು ಏಳುವ ಮೊದಲೇ ಮುಳುಗಿ ಹೋಗಿದೆ.

ಶ್ರೀನಗರ ಕಿಟ್ಟಿ, ಲೂಸ್ ಮಾದ ಯೋಗೀಶ್ ಕೂಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರದಲ್ಲಿ ರಮ್ಯಾ ಬಾರ್ನೆ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ರಂಗಾಯಣ ರಘು ಮತ್ತು ವನಿತಾವಾಸು ಮುಂತಾದವರು ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಅಲೆಮಾರಿಗಳು ಎಂದು ಹೆಸರಿಡಲು ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ನಿರ್ಧರಿಸಿದ್ದರು ಎಂದು ಹೇಳಲಾಗಿತ್ತು. ಆದರೆ ಇಲ್ಲಿ ಸಮಸ್ಯೆ ಎದುರಾಗಿದ್ದು ನಿರ್ಮಾಪಕ ಅಶ್ವಿನ್ ರಾಮ್ ಪ್ರಸಾದ್ 'ಅಲೆಮಾರಿ' ಎಂಬ ಚಿತ್ರ ಮಾಡುತ್ತಿರುವುದು. ಹಾಗಾಗಿ ಶೀರ್ಷಿಕೆ ವಿವಾದ ಉಂಟಾಗಬಹುದು ಎಂದೂ ಹೇಳಲಾಗುತ್ತಿತ್ತು.

ಅಂದ ಹಾಗೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಮಾದೇಶ. ಸತ್ಯ ಹೆಗಡೆ ಕ್ಯಾಮರಾಮೆನ್. 'ಮಠ' ಸಂಭಾಷಣೆ ವೀರ ಗುರು ಪ್ರಸಾದ್ ಕೂಡ ಚಿತ್ರಕ್ಕಾಗಿ ಪೆನ್ನು ಹಿಡಿದಿದ್ದಾರೆ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರದ ಚಿತ್ರೀಕರಣ ನಡೆಯಲಿದೆ. ಶೀಘ್ರದಲ್ಲೇ ಈ ಕುರಿತು ವೇಳಾಪಟ್ಟಿ ಸಿದ್ಧವಾಗಲಿದೆ ಎಂದು ಚಿತ್ರತಂಡದ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಡುಗ್ರು, ಪುನೀತ್ ರಾಜ್ಕುಮಾರ್, ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ