ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಕೋಮಲ್-ಭಾವನಾ ಜೋಡಿ 'ವಾರೆವ್ಹಾ' ಈ ವಾರ ತೆರೆಗೆ (Varevah | Komal | Bhavana Rao | Vijayalakshmi Singh)
ಸಿನಿಮಾ ಮುನ್ನೋಟ
Bookmark and Share Feedback Print
 
MOKSHA
ಏನಿದು ಡಿಸೆಂಬರ್ 31ರಂದು? ನ್ಯೂ ಇಯರ್ ಈವ್ ಸೆಲೆಬ್ರೆಷನ್ನಾ ಅಥವಾ ಹೊಸ ವರ್ಷ ಸ್ವಾಗತಕ್ಕೆ ಕಾಯುವ ರಾತ್ರಿನಾ? ಅವೆರಡೂ ಅಲ್ಲ, ಇದು ಕನ್ನಡದ ಕಾಮಿಡಿ ಕಿಂಗ್ ಕೋಮಲ್ ನಾಯಕನಾಗಿರುವ 'ವಾರೆವ್ಹಾ...!' ಬಿಡುಗಡೆ ದಿನ.

ಈ ಚಿತ್ರದಲ್ಲಿ ಕೋಮಲ್ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಹೆಂಗಸಿನ ಪಾತ್ರದಲ್ಲಿ ಮತ್ತೊಂದು ಟೈ ಕಟ್ಟಿಕೊಂಡು ಟಿಪ್ ಟಾಪ್ ಆಗಿ ಕಾಣಿಸುವ ವ್ಯಕ್ತಿಯಾಗಿ.

ಚಿತ್ರದ ನಾಯಕಿ ಯಾರೂ ಅಂತೀರಾ. ಆಕೆ 'ಗಾಳಿಪಟ'ದ ತುಂಟಿ, ತರ್ಲೆ ಭಾವನಾ ರಾವ್. ಬಹಳ ದಿನಗಳ ನಂತರ ಬೆಳ್ಳಿತೆರೆಗೆ ಮತ್ತೆ ಎಂಟ್ರಿ ಪಡೆದಿದ್ದಾರೆ ಭಾವನಾ.

ಚಿತ್ರದ ನಿರ್ಮಾಪಕರು ಹಿರಿಯ ನಟ ಜೈ ಜಗದೀಶ್. ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ಪತ್ನಿ ವಿಜಯಲಕ್ಷ್ಮೀ ಸಿಂಗ್ ವಹಿಸಿಕೊಂಡು ಕೋಮಲ್ ಅವರನ್ನು ಇನ್ನೂ ಸ್ವಲ್ಪ ಟ್ಯೂನ್ ಮಾಡಿದ್ದಾರೆ.

ಜೆಜೆ ಪ್ರೊಡಕ್ಷನ್ಸ್‌ನಲ್ಲಿ ಶಿವಪ್ರಸಾದ್ ಅರ್ಪಿಸುತ್ತಿರುವ ಚಿತ್ರವಿದು. ಸಂಪೂರ್ಣ ಹಾಸ್ಯಮಯ ಚಿತ್ರ. ಹಾಗಂತ ಸೆಂಟಿಮೆಂಟ್ ಟಚ್ ಕೂಡ ಇದೆ. ಬಿಡುಗಡೆಗೆ ಕ್ಷಣಗಣನೆ. ಕೋಮಲ್ ತಮ್ಮ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಾರೆವ್ಹಾ, ಕೋಮಲ್, ಭಾವನಾ ರಾವ್, ವಿಜಯಲಕ್ಷ್ಮಿ ಸಿಂಗ್