ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಗತ್ಯ ಕರೆ:ಕಂಪೆನಿಗಳಿಗೆ ದಂಡ ವಿಧಿಸಲು ಟ್ರಾಯ್ ನಿರ್ಧಾರ (Pesky calls | Telemarketing | TRAI | CCPR | NDNC)
Bookmark and Share Feedback Print
 
PTI
ಮೊಬೈಲ್ ಗ್ರಾಹಕರಿಗೆ ಟೆಲಿ ಮಾರ್ಕೆಟಿಂಗ್ ಕಂಪೆನಿಗಳ ಅನಗತ್ಯ ಕರೆಗಳ ಕಿರಿಕಿರಿ, ಜನೆವರಿ 2011ರಿಂದ ದೂರವಾಗಲಿದಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಗ್ರಾಹಕರು ಡು ನಾಟ್ ಕಾಲ್ ಸೌಲಭ್ಯ ಬಳಸುತ್ತಿದ್ದರೂ ಆತನಿಗೆ ಕರೆ ಮಾಡುವ ಟೆಲಿ ಮಾರ್ಕೆಟಿಂಗ್ ಕಂಪೆನಿಗಳಿಗೆ ಹಾಗೂ ಮೊಬೈಲ್ ಆಪರೇಟರ್‌ಗಳಿಗೆ ದಂಡ ಹಾಕಲು ದೂರ ಸಂಪರ್ಕ ನಿಯಂತ್ರಣ ಇಲಾಖೆ ಟ್ರಾಯ್ ನಿರ್ಧರಿಸಿದೆ.

ಟ್ರಾಯ್ ಇಲಾಖೆ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಲಿದ್ದು, ಮೊಬೈಲ್ ಗ್ರಾಹಕರು ನೆಮ್ಮದಿಯಿಂದ ಕಾಲ ಕಳೆಯಬಹುದಾಗಿದೆ.ಟೆಲಿ ಮಾರ್ಕೆಟಿಂಗ್ ಕಂಪೆನಿಗಳಿಗೆ 700 ರಿಂದ ಆರಂಭವಾಗುವ ಸಂಖ್ಯೆಗಳನ್ನು ಒದಗಿಸಿದ್ದು,ಅಂತಹ ಸಂಖ್ಯೆಯಿಂದ ಬರುವ ಕರೆಗಳನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎನ್ನುವುದನ್ನು ಗ್ರಾಹಕರು ತೀರ್ಮಾನಿಸಬೇಕು ಎಂದು ಟ್ರಾಯ್ ಹೇಳಿಕೆ ನೀಡಿದೆ.

ಮೊಬೈಲ್ ಗ್ರಾಹಕರು ಅನಗತ್ಯ ಕರೆಗಳಿಂದ ತೊಂದರೆಗೊಳಗಾಗುತ್ತಿರುವುದರಿಂದ, ಅನಗತ್ಯ ಕರೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.ಆದರೆ, ಸಂದೇಶಗಳಿಗೆ ಕಡಿವಾಣ ಹಾಕಲು ಇಲ್ಲಿಯವರೆಗೆ ನಿರ್ಧರಿಸಿಲ್ಲ ಎಂದು ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಏತನ್ಮಧ್ಯೆ, ನೂತನ ವ್ಯವಸ್ಥೆಯಲ್ಲಿ, ಗ್ರಾಹಕರು ತಮ್ಮ ಮೊಬೈಲ್ ಆಪರೇಟರ್‌ಗಳಲ್ಲಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಸಂಖ್ಯೆ ನೋಂದಾವಣಿಯ ಏಳು ದಿನಗಳ ನಂತರ ಅನಗತ್ಯ ಕರೆಗಳಿಗೆ ಕಡಿವಾಣ ಹಾಕಲಾಗುತ್ತದೆ. ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ 45 ದಿನಗಳ ನಂತರ ಅನಗತ್ಯ ಕರೆಗಳನ್ನು ನಿಯಂತ್ರಿಸಲಾಗುತ್ತದೆ.

ಒಂದು ವೇಳೆ ಟೆಲಿ ಮಾರ್ಕೆಟಿಂಗ್ ಕಂಪೆನಿಗಳು 700 ಸಂಖ್ಯೆಯನ್ನು ಹೊರತುಪಡಿಸಿ, ಇತರ ಸಂಖ್ಯೆಗಳಿಂದ ಕರೆ ಮಾಡಿದಲ್ಲಿ ಕಂಪೆನಿ ಭಾರಿ ದಂಡವನ್ನು ತೆರಬೇಕಾಗುತ್ತದೆ. ಆರಂಭದಲ್ಲಿ ದಂಡವನ್ನು ಹಾಕಲಾಗುತ್ತದೆ. ಆರನೇ ಬಾರಿ ಕೂಡಾ ಇಂತಹ ತಪ್ಪೆಸಗಿದಲ್ಲಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಷನಲ್ ಡು ನಾಟ್ ಕಾಲ್ (ಎನ್‌ಡಿಎನ್‌ಸಿ) ವ್ಯವಸ್ಥೆಯಡಿ, 700 ಸಂಖ್ಯೆಯನ್ನು ಹೊರತುಪಡಿಸಿ ಕರೆ ಮಾಡುವ ಟೆಲಿಮಾರ್ಕೆಟಿಂಗ್ ಕಂಪೆನಿಗಳಿಗೆ 500 ಮತ್ತು 1000 ರೂಪಾಯಿಗಳ ದಂಡವನ್ನು ವಿಧಿಸಲು ನಿರ್ಧರಿಸಲಾಗಿದೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ