ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಇಂಡಿಕಾಂನಿಂದ 'ಪೇ ಪರ್ ಕಾಲ್' ಸೌಲಭ್ಯ (Tata Indicom | CDMA | SMS | Pay per call)
 
ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್, ತನ್ನ ಸಿಡಿಎಂಎ ತಂತ್ರಜ್ಞಾನದ ಮೊಬೈಲ್ ಸೇವೆಯಲ್ಲಿ 'ಪೇ ಪರ್ ಕಾಲ್' ಸೇವೆ ಆರಂಭಿಸಿದೆ. ಈ ಸೌಲಭ್ಯವು ಕರೆ ದರದ ಸಾಮಾನ್ಯ ಒಂದು ನಿಮಿಷದ ಪಲ್ಸ್‌ನಿಂದ ಸಂಪೂರ್ಣ ಮುಕ್ತಿ ನೀಡಲಿದ್ದು, ಕರೆಯ ಅವಧಿಯ ಮಿತಿ ಇಲ್ಲದ ಹೊಸ ಸೌಲಭ್ಯ ಕಲ್ಪಿಸಲಿದೆ.

ದೂರ ಸಂಪರ್ಕ ಸೇವಾ ಸಂಸ್ಥೆ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್, ತನ್ನ ಸಿಡಿಎಂಎ ತಂತ್ರಜ್ಞಾನದ ಮೊಬೈಲ್ ಸೇವೆಯಲ್ಲಿ ಪೇ ಪರ್ ಕಾಲ್ ಸೇವೆ ಆರಂಭಿಸಿದೆ. ಈ ಸೌಲಭ್ಯವು ಕರೆ ದರದ ಸಾಮಾನ್ಯ ಒಂದು ನಿಮಿಷದ ಪಲ್ಸ್‌ನಿಂದ ಸಂಪೂರ್ಣ ಮುಕ್ತಿ ನೀಡಲಿದ್ದು, ಕರೆಯ ಅವಧಿಯ ಮಿತಿ ಇಲ್ಲದ ಹೊಸ ಸೌಲಭ್ಯ ಕಲ್ಪಿಸಲಿದೆ. ಇಲ್ಲಿ ಚಂದಾದಾರರು ಪ್ರತಿ ಕರೆಯ ಆಧಾರದಲ್ಲಿ ಸ್ಥಿರ ಶುಲ್ಕ ಪಾವತಿಸಬಹುದು.

ಸ್ಥಳೀಯ ಕರೆಗಳಿಗೆ 1ರೂ. ಎಸ್‌ಟಿಡಿಗೆ 3ರೂ. ದರದಲ್ಲಿ ಈ ಸೌಲಭ್ಯ ದೊರೆಯಲಿದೆ. ರಾಷ್ಟ್ರೀಯ ಮತ್ತು ಸ್ಥಳೀಯ ಎಸ್‌ಎಂಎಸ್‌ಗಳನ್ನು ವಿಶೇಷ ದರ 50ಪೈಸೆಯಲ್ಲಿ ಒದಗಿಸಲಿದೆ. 'ಟಾಟಾ ಇಂಡಿಕಾಂ' ಚಂದಾದಾರರು ಯಾವುದೇ ಸೇವಾ ಸಂಸ್ಥೆಯ ಮೊಬೈಲ್ ಅಥವಾ ಸ್ಥಿರ ದೂರವಾಣಿಗೆ ಮಾಡುವ ಕರೆಗಳಿಗೆ ಈ ಕೊಡುಗೆ ಅನ್ವಯವಾಗಲಿದೆ. ಈ ಸೌಲಭ್ಯವು ಆರಂಭದಲ್ಲಿ ಪೂರ್ವ ಪಾವತಿ ಗ್ರಾಹಕರಿಗೆ ದೊರೆಯಲಿದೆ.

ಇದನ್ನು ಆಯ್ಕೆ ಮಾಡಿಕೊಳ್ಳುವ ಚಂದಾದಾರರಿಗೆ ಪ್ರತಿ ದಿನಕ್ಕೆ 1ರೂ.ಶುಲ್ಕ ವಿಧಿಸಲಾಗುತ್ತದೆ. ಚಂದಾದಾರರು 96ರೂಪಾಯಿಗಳನ್ನು ಒಂದು ಬಾರಿ ಪಾವತಿಸಿ ಈ ಕೊಡುಗೆ ಪಡೆದುಕೊಳ್ಳಬಹುದು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ