ಸಂಬಂಧಿತ ಇನ್ನೊಂದು ಲೇಖನ: ಹಗರಣಗಳಲ್ಲಿ ಸತ್ಯ ಹೊರಬರಲ್ಲವೇಕೆ ಗೊತ್ತೇ?
ಈಗ ಪರಿಸ್ಥಿತಿ ಅರ್ಥವಾಗಿರಬಹುದು. ನೇರವಾಗಿಯೇ ಹೇಳಿಬಿಡೋಣವೆಂದರೆ, 2ಜಿ ಹಗರಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ಪ್ರತಿಭಟನೆ ಕೊನೆ ಮುಟ್ಟಿ, ಜೆಪಿಸಿ ರಚನೆಯಾಗಿದೆ. ಇನ್ನು, ಹೀಗೆಯೇ ಬಿಟ್ಟರೆ, ಬಿಜೆಪಿಯು ತೀವ್ರವಾಗಿ ಪ್ರತಿಭಟನೆ ಮಾಡಿದರೆ, ಪೆಟ್ರೋಲ್ ಬೆಲೆ ಏರಿಕೆಯನ್ನೂ ಹಿಂತೆಗೆದುಕೊಳ್ಳಬೇಕಾದೀತು ಅಥವಾ ಏರಿಕೆಯ ಪ್ರಮಾಣ ಕಡಿಮೆ ಮಾಡಬೇಕಾದೀತು. ಈ ಭಯದಿಂದಲೇ, ಪ್ರಧಾನ ಪ್ರತಿಪಕ್ಷವಾದ ಬಿಜೆಪಿಯನ್ನು ಒಂದಿಷ್ಟು "ಬ್ಯುಸಿ"ಯಾಗಿರುವಂತೆ ಮಾಡಿದರೆ ಹೇಗೆ? ಈ ನಿರ್ಧಾರವೇ ಕರ್-ನಾಟಕಕ್ಕೆ ಕಾರಣ ಅಂತ ವಿಶ್ಲೇಷಿಸಬಹುದು. ರಾಜ್ಯಪಾಲರ ವರದಿಯ ಮೇಲೆ ಒಂದು ವಾರ ಕುಳಿತುಬಿಟ್ಟರೆ, ದರ ಏರಿಕೆಯ ಕಾವು ಒಂದಿಷ್ಟು ಕಡಿಮೆಯಾಗುತ್ತದೆ. ಯಾಕೆಂದರೆ, ದಿನದೂಡಿದಷ್ಟು ಜನರಿಗೆ ಮರೆವು ಜಾಸ್ತಿ.