ಫರ್ಹಾನ್ ಚಿತ್ರದಲ್ಲಿ ಅಮೀಷಾ ಪಟೇಲ್
ಮುಂಬೈ, ಸೋಮವಾರ, 13 ಆಗಸ್ಟ್ 2007( 15:21 IST )
ಹನಿಮೂನ್ ಟ್ರಾವೇಲ್ಸ್ ಲಿಮಿಟೆಡ್‌ನ ನಿರ್ದೆಶಕಿ ರೀಮಾ ಕಂಗ್ತಿ ನಿರ್ದೆಶನ, ಫರ್ಹಾನ್ ಅಖ್ತರ್ ಹಾಗೂ ರೀತೇಶ್ ಸಿಧವಾನಿ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಅಮಿಷಾ ಪಟೇಲ್ ಒಪ್ಪಿಕೊಂಡಿದ್ದಾರೆ.
ಚಿತ್ರದಲ್ಲಿ ಶಬಾನಾ ಅಜ್ಮಿ, ಅಭಯ ದಿಯೋಲ್, ಮಿನಿಷಾ ಲಂಬಾ, ಕೆ.ಕೆ. ಮೆನನ್, ಕರಣ ಖನ್ನಾ, ರಣವೀರ್ ಶೌರಿ, ಸಂಧ್ಯಾ ಮೃದುಲ್ ಮತ್ತು ಬೊಮ್ಮನ್ ಇರಾನಿ ಅವರು ನಟಿಸುತ್ತಿದ್ದಾರೆ.
ಅಮಿಷಾ ಚಿತ್ರಕಥೆಯನ್ನು ತುಂಬಾ ಇಷ್ಟಪಟ್ಟಿದ್ದು, ಮುಂದುವರೆಯುವುದಾಗಿ ತಿಳಿಸಿದ್ದಾರೆ ಎಂದು ರೀತೇಶ್ ಹೇಳಿದ್ದಾರೆ. ಚಿತ್ರದಲ್ಲಿ ಅನೇಕ ಖ್ಯಾತ ನಟಿಯರು ಭಾಗವಹಿಸುತ್ತಿದ್ದರು ತನ್ನ ಪಾತ್ರದ ಬಗ್ಗೆ ಭರವಸೆಯನ್ನು ಹೊಂದಿದ್ದಾಳೆ ಎಂದು ರೀತೇಶ್ ಹೇಳಿದ್ದಾರೆ.
ಅಮಿಷಾ, ಹ್ಯಾರಿ ಬಾವುಜಾ ಅವರ ತೀಸ್ರಿ ಆಂಖೆ, ವಿಕ್ರಮ್ ಭಟ್ ಹಾಗೂ ಧರ್ಮೇಶ್ ದರ್ಶನರ ಚಿತ್ರದಲ್ಲಿ ನಟಿಸುತ್ತಿದ್ದಾರೆ.