ಐತಿಹಾಸಿಕ ಚಿತ್ರವೊಂದನ್ನು ಓವರ್ ಗ್ಲಾಮರೈಸ್ ಮಾಡಲಾಗಿದೆ ಎಂಬ ಆರೋಪ ಎದುರಿಸುತ್ತಲೇ ಬಿಡುಗಡೆಗೆ ಸಿದ್ಧವಾಗಿರುವ 'ರಂಗ್ ರಸ್ಸಿಯಾ'ದಲ್ಲಿ ಮುದ್ದಾಟ ಮತ್ತು ಅರೆ ಬೆತ್ತಲೆ ದೃಶ್ಯಗಳಿದ್ದರೂ ಇದೊಂದು ನೋಡಲೇ ಬೇಕಾದ ಚಿತ್ರ ಎಂದು ಚಿತ್ರದ ನಾಯಕ ರಣ್‌ದೀಪ್ ಹೂಡಾ ತಿಳಿಸಿದ್ದಾರೆ.
IFM
ಅದೊಂದು ಅದ್ಭುತ ಕಲಾಕೃತಿ. ನೋಡಲಾಗದಂತಹ ಕೆಟ್ಟ ಬಿಸಿ ಬಿಸಿ ದೃಶ್ಯಗಳು ಅದರಲ್ಲಿಲ್ಲ. ಕೆಲವು ಕಿಸ್ಸಿಂಗ್ ಸೀನ್‌ಗಳಿವೆ. ಅಲ್ಲಲ್ಲಿ ಅರೆ ಬೆತ್ತಲೆ ದೃಶ್ಯಗಳಿವೆ. ಆದರೆ ಇವೆಲ್ಲದಕ್ಕೂ ಸೆನ್ಸಾರ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಇದು ನೋಡಬಹುದಾದ ಸಿನಿಮಾ. ಮೃದು ಭಾವನೆಗಳೊಂದಿಗೆ ಮೇಳೈಸುತ್ತಿರುವ 'ರಂಗ್ ರಸ್ಸಿಯಾ' ಒಂದು ಮಹಾಕಾವ್ಯ. ಇಲ್ಲಿ ಎಲ್ಲವೂ ಇದೆ. ಇದನ್ನು ಎಲ್ಲರೂ ನೋಡಲೇ ಬೇಕಾದ ಅಗತ್ಯವಿದೆ. ಜನ ಚಿತ್ರ ನೋಡಿದ ನಂತರವೂ ಕಾಡುವ ಅಂಶಗಳು ಇದರಲ್ಲಿದೆ ಎಂಬುದು ನಾಯಕನ ಅಭಿಪ್ರಾಯ.
ಇಲ್ಲಿ ಬೆತ್ತಲಾಗಿರುವುದು ನಂದನಾ ಸೇನ್ ಮಾತ್ರವಲ್ಲ.. ರಣ್‌ದೀಪ್ ಹೂಡಾ ಕೂಡ ಬಟ್ಟೆಯೇ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಭಾಷೆಯಿಲ್ಲದ ದೇಹದ ಎಲ್ಲೆಗಳನ್ನೂ ಮೀರಿದ ಭಾವನೆಗಳ ತಾಕಲಾಟ ಇಲ್ಲಿ ತುಂಬಿಸಲಾಗಿದೆ ಎನ್ನುವುದು ಚಿತ್ರ ತಂಡದ ಮಾತು.
19ನೇ ಶತಮಾನದ ಕಲಾಕಾರ ರಾಜಾ ರವಿವರ್ಮಾ ಮತ್ತು ಸುಗಂಧಾ ನಡುವಿನ ಪ್ರೇಮದ ಕಥೆಯನ್ನು ಹೊಂದಿರುವ ಮರಾಠಿ ಲೇಖಕ ರಂಜಿತ್ ದೇಸಾಯಿಯವರ ಕಥೆಯನ್ನಾಧರಿಸಿದ 'ರಂಗ್ ರಸ್ಸಿಯಾ'ದಲ್ಲಿ ರಣದೀಪ್ ಹೂಡಾ ಮತ್ತು ನಂದನಾ ಸೇನ್ ಪ್ರಧಾನ ಪಾತ್ರಧಾರಿಗಳಾಗಿದ್ದಾರೆ.
IFM
ನಂದನಾ ಸೇನ್ ಚಿತ್ರದಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದು, ರಾಜಾ ರವಿವರ್ಮಾ ಜತೆಗಿನ ಸರಸದ ದೃಶ್ಯಗಳನ್ನು ನೈಜತೆಗೂ ಮಿಗಿಲಾಗಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ರಾಜಾ ರವಿವರ್ಮಾ ತನ್ನ ಪ್ರೇಯಸಿ ಸುಗಂಧಿಯ ಬೆತ್ತಲೆ ಚಿತ್ರ ಬಿಡಿಸುವ ದೃಶ್ಯವೊಂದು ಚಿತ್ರದಲ್ಲಿರುವುದು ಸೆನ್ಸಾರ್ ಮಂಡಳಿ ಕಣ್ಣು ಕುಕ್ಕಿತ್ತು. ಇದೀಗ ಎಲ್ಲಾ ವಿವಾದಗಳನ್ನು ಮುಗಿಸಿ ಚಿತ್ರ ಹೊರಬಂದಿದ್ದು, ಜನವರಿ 30ರಂದು ಇಂಗ್ಲೀಷ್ ಅವತರಣಿಕೆಯಲ್ಲಿಯೂ ಬಿಡುಗಡೆಯಾಗಲಿದೆ.