'ಲಕ್ಕಿ'ಯಲ್ಲಿ ಥೇಟ್ ಐಶ್ವರ್ಯಾ ರೈ ಪಡಿಯಚ್ಚು ಎಂದು ಹೊಗಳಿಕೆ ಪಡೆದದ್ದು ಬಿಟ್ಟರೆ ನಂತರದ ದಿನಗಳಲ್ಲಿ ಈ ಸ್ನೇಹಾ ಉಳ್ಳಾಲ್ ಮಿಂಚಿದ್ದು ಕಡಿಮೆ. ಬಾಲಿವುಡ್ ಬ್ಯಾಚುಲರ್ ಸಲ್ಮಾನ್ ಖಾನ್ ಎತ್ತಿ ಆಡಿಸಿ ಕೆಳಗಿಟ್ಟ ಕೂಸು ನಂತರ ಯಾವ ಚಿತ್ರಗಳಲ್ಲೂ ಹೆಸರು ಮಾಡಲೇ ಇಲ್ಲ.
ಇಂತಿಪ್ಪ ಮಂಗಳೂರು ಮೂಲದ ಈ ಹುಡುಗಿ ಸುಮ್ಮನೆ ಕುಳಿತಿಲ್ಲ. 'ಲಕ್ಕಿ.. ನೋ ಟೈಮ್ ಫಾರ್ ಲವ್' ನಂತರ ಸಲ್ಮಾನ್ ಸಹೋದರನ ಜತೆ 'ಆರ್ಯನ್', ತೆಲುಗಿನ 'ಉಲ್ಲಾಸಂಗ ಉತ್ಸಾಹಂಗ' ಚಿತ್ರಗಳಲ್ಲಿ ನಟಿಸಿದ್ದಳು. 'ಕಾಶ್ ಮೇರೆ ಹೋತೆ', 'ಕ್ಲಿಕ್', ತೆಲುಗಿನ 'ಕರೆಂಟ್' ಮತ್ತು ಇಂಗ್ಲೀಷಿನ 'ಗಾಂಧಿ ಪಾರ್ಕ್' ಮುಂತಾದ ಚಿತ್ರಗಳು ಕೈಯಲ್ಲಿವೆ.
ಇದುವರೆಗೆ ಯಾವುದೇ ಹಾಟ್ ಸೀನ್‌ಗಳಲ್ಲಿ ಅಭಿನಯಿಸಿಲ್ಲ ಎನ್ನುವುದು ಪ್ಲಸ್ ಪಾಯಿಂಟ್. ಸೆಟ್‌ನಲ್ಲಿ ಎಲ್ಲರೂ ಆಕೆಯನ್ನು ಮಗುವಿನಂತೆ ಟ್ರೀಟ್ ಮಾಡುತ್ತಾರಂತೆ. ಅದೇ ಸದ್ಯ ಆಕೆಗಾಗಿರುವ ತೊಂದರೆ ಕೂಡ. ಹಾಗಾಗಿ ಸಂದರ್ಶನವೊಂದರಲ್ಲಿ ತಾನಿನ್ನೂ ಮಗುವಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.
"ಈಜುಡುಗೆ ಧರಿಸಲು ಸಿದ್ಧ ಆದರೆ ಬಿಕಿನಿ ಬೇಡ, ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲೂ ಸಿದ್ಧಳಿದ್ದೇನೆ. ಚಿತ್ರಕ್ಕೆ ಬೇಕಾದಷ್ಟು ಎಕ್ಸ್‌ಪೋಸ್ ಮಾಡಲು... ನೋ ಪ್ರಾಬ್ಲಮ್. ನನ್ನನ್ನು ಸೆಕ್ಸಿಯಾಗಿ ಬೇಕಾದರೆ ತೋರಿಸಬಹುದು - ಆದರೆ ವಲ್ಗರ್ ಆಗಿರಬಾರದು. ನನ್ನ ಎರಡನೇ ಚಿತ್ರ 'ಕಾಶ್ ಮೇರೆ..'ಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದೇನೆ" ಎಂದು ಹೇಳಿದ್ದಾಳೆ.
ಇಷ್ಟೆಲ್ಲ ಆಕೆ ಬಿಚ್ಚಿಟ್ಟ ಮೇಲೆ ಕಿಸ್ ಬಗ್ಗೆ ಕೇಳದಿದ್ದರೆ ಸರಿಯಾಗುವುದಿಲ್ಲ ಎಂದುಕೊಂಡ ವರದಿಗಾರ ಅದನ್ನೂ ಕೇಳಿಯೇ ಬಿಟ್ಟ. "ನಾನೀಗ ಒಬ್ಬಂಟಿ. ಬೆರೆಯಲು ಸಿದ್ಧ. ಹಾಗಂತ ವಯ್ಯಾರಿಯಲ್ಲ. ಸಿನಿಮಾಗಳಲ್ಲಿ ತುಟಿಗೆ ತುಟಿ ಬೆರೆಸಲು ನಾನು ಸಿದ್ಧಳಿಲ್ಲ. ನನ್ನ ಪ್ರಕಾರ ಅದನ್ನು ಬೆಡ್‌ರೂಮಿನಲ್ಲಿ ಖಾಸಗಿಯಾಗಿ ಮಾತ್ರ ಮಾಡಬೇಕು" ಎಂದಾಗ ಉಳಿದ ಪ್ರಶ್ನೆಗಳಿಗೆ ಬ್ರೇಕ್ ಬಿತ್ತು.
ಚಿತ್ರ: 'ಕಾಶ್ ಮೇರೆ ಹೋತೆ' ಚಿತ್ರದ ಒಂದು ದೃಶ್ಯದಲ್ಲಿ ಸ್ನೇಹಾ ಉಳ್ಳಾಲ್...