ಐಶ್ವರ್ಯಾ ರೈ ಇಂದಿನ ದಿನಗಳಲ್ಲಿ ಕೇವಲ ತಮ್ಮ ಪತಿ ಅಭಿಷೇಕ್ ಬಚ್ಚನ್‌ರೊಂದಿಗಷ್ಟೇ ಚಿತ್ರ ಮಾಡಬೇಕೆಂದು ನಿರ್ಧರಿಸಿರುವಂತಿದೆ. ಪ್ರಸ್ತುತ ಅವರು ಮಣಿರತ್ನಂರ 'ರಾವಣ' ಚಿತ್ರದಲ್ಲಿ ಅಭಿಗೆ ನಾಯಕಿ. 'ಅಭಿಮಾನ್' ಚಿತ್ರದ ರಿಮೇಕ್‌ನಲ್ಲೂ ಐಶ್ ಮತ್ತು ಅಭಿ ಜೊತೆಯಾಗಲಿದ್ದಾರೆ. ಈಗ ಇವರಿಬ್ಬರು ಜೋಡಿಯಾಗಿ ನಟಿಸುವ ಇನ್ನೊಂದು ಚಿತ್ರ ಘೋಷಣೆಯಾಗಿದೆ.
ರಿತೇಶ್ ಸಿಧ್ವಾನಿ ಮತ್ತು ಫರಾನ್ ಅಖ್ತರ್ ಈ ಜೋಡಿಯೊಂದಿಗೆ ತಮ್ಮ ಮುಂದಿನ ಚಿತ್ರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಒಂದು ಟ್ರೈಲರ್ ಚಿತ್ರವಾಗಿರುತ್ತದೆ ಮತ್ತು ಈ ವರ್ಷದ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗುವುದು.
ಅಭಿಷೇಕ್ ಮತ್ತು ಐಶ್ವರ್ಯ ಇದಕ್ಕೆ ಮೊದಲು 'ಗುರು', 'ಕುಚ್ ನಾ ಕಹೊ', 'ಸರ್‌ಕಾರ್ ರಾಜ್' ಮತ್ತು 'ಉಮ್ರಾವ್ ಜಾನ್' ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಆದರೆ ಐಶ್, ಅಭಿ ಜೊತೆಗೇ ನಟಿಸುತ್ತಿರುವುದು ಅನಿವಾರ್ಯತೆಯಿಂದಾಗಿ ಎಂದೂ ಹೇಳಲಾಗುತ್ತಿದೆ.
ಖಾನ್ ತ್ರಯರೊಂದಿಗಿನ ಐಶ್ವರ್ಯ ಸಂಬಂಧ ಅಷ್ಟಕ್ಕಷ್ಟೇ. ಅಕ್ಷಯ್ ಕುಮಾರ್ ಚಿತ್ರದಲ್ಲಿ ನಾಯಕಿಯರು ಮಾಡುವಂತಹುದು ಏನು ಇರುವುದಿಲ್ಲ. ಹೃತಿಕ್ ರೋಶನ್ ಅತ್ಯಂತ ಕಡಿಮೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಇಂತಹುದರಲ್ಲಿ ಅಭಿಷೇಕ್ ಏಕೈಕ ಆಯ್ಕೆಯಾಗಿ ಉಳಿದುಬಿಡುತ್ತಾರೆ. ವೀಕ್ಷಕರು ಇದೇ ಜೋಡಿಯನ್ನು ನೋಡಿ ಬೋರ್ ಆಗದಿದ್ದರೆ ಸಾಕು.