ರಾಜ್‌ಕುಮಾರ್ ಸಂತೋಷಿಯವರ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಚಿತ್ರದ ಸೆಟ್‌ನಲ್ಲಿ ದೀಪಿಕಾ ಪಡುಕೋಣೆ ಅವರನ್ನು ನೋಡಿದಾಗ ಚಿತ್ರತಂಡ ಚಕಿತಗೊಂಡಿತು. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಮುಕ್ಯಪಾತ್ರದಲ್ಲಿದ್ದಾರೆ ಮತ್ತು ದೀಪಿಕಾಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ನಂತರ ದೀಪಿಕಾ ರಣ್‌ಬೀರ್‌ರ ಪ್ರೇಯಸಿಯಾಗಿರುವುದರಿಂದ ಅವರನ್ನು ನೋಡಲು ಬಂದಿರಬಹುದು ಅಂದುಕೊಳ್ಳಲಾಯಿತು.
ಈ ಚಿತ್ರದಲ್ಲಿ ಸಾವಿರಾರು ಜನರಿಗೆ ಹುಚ್ಚು ಹಿಡಿಸಿರುವ ಕತ್ರಿನಾ ಕೈಫ್, ರಣ್‌ಬೀರ್‌ಗೆ ನಾಯಕಿ. ಸಾಮಾನ್ಯವಾಗಿ ತಮಗಿಂತ ವಯಸ್ಸಿನಲ್ಲಿ ಹಿರಿಯ ನಾಯಕರೊಂದಿಗೇ ನಟಿಸಿದ್ದ ಕತ್ರಿನಾ ಪ್ರಥಮ ಬಾರಿಗೆ ಸಮಾನ ವಯಸ್ಕ ನಾಯಕನೊಂದಿಗೆ ನಟಿಸುತ್ತಿದ್ದಾರೆ. ಆದ್ದರಿಂದಲೇ ಇವರಿಬ್ಬರ ನಡುವೆ ಉತ್ತಮ 'ಟ್ಯೂನಿಂಗ್' ಆಗಿದೆಯಂತೆ.
ಚಿತ್ರೀಕರಣದ ಸಂದರ್ಭ ರಣ್‌ಬೀರ್ ಕತ್ರಿನಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಂತೆ ಮತ್ತು ಕತ್ರಿನಾ ಕೂಡ ರಣ್‌ಬೀರ್‌ರನ್ನು ಬಹಳೇ ಹೊಗಳಿದ್ದರು. ದೀಪಿಕಾ ಕಿವಿಗೆ ಈ ವಿಷಯ ತಲುಪಿದಾಗ ಅವರಿಗೆ ಅಸುರಕ್ಷತೆಯ ಭಾವ ಉಂಟಾಯಿತು. ಅವರು ನೇರವಾಗಿ ರಣ್‌ಬೀರ್ ಮತ್ತು ಕತ್ರಿನಾ ಶೂಟಿಂಗ್ ನಡೆಸುತ್ತಿದ್ದ ಸೆಟ್‌ಗೆ ಬೇಟಿ ನೀಡಿದರು.
ಈ ವಿಷಯದ ಕುರಿತು ರಣ್‌ಬೀರ್ ಮತ್ತು ದೀಪಿಕಾ ನಡುವೆ ಸಾಕಷ್ಟು ಜಗಳವೂ ಆಯಿತು ಎಂದು ಹೇಳಲಾಗುತ್ತಿದೆ.