ತಮಿಳಿನ 'ಇಂದಿರನ್' ಚಿತ್ರಕ್ಕಾಗಿ ಯುರೋಪ್‌ನಲ್ಲಿ ಚಿತ್ರೀಕರಣ ಮುಗಿಸಿ ಮರಳಿರುವ ಪ್ರಮುಖ ಪಾತ್ರಧಾರಿಗಳಾದ ಐಶ್ವರ್ಯ ರೈ ಮತ್ತು ರಜನಿಕಾಂತ್ ವೆಲ್ಲೂರ್‌ನತ್ತ ತೆರಳಿದರು. ಪ್ರಸ್ತುತ ವೆಲ್ಲೂರಿನ ಇನ್ಸ್‌ಟ್ಯೂಟ್ ಅಫ್ ಟೆಕ್ನಾಲಜಿಯಲ್ಲಿ ಬಿಗಿ ಭದ್ರತೆಯ ನಡುವೆ ಚಿತ್ರೀಕರಣ ಮುಗಿದಿದ್ದು, ಕುಲುಮನಾಲಿಯತ್ತ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಭಾರತದಲ್ಲೇ ಇದುವರಗೆ ತಯಾರಿಸಲಾದ ಚಿತ್ರಗಳಲ್ಲೆಲ್ಲಾ ಅತ್ಯಂತ ದುಬಾರಿ ವೆಚ್ಚದ ಚಿತ್ರವೆನ್ನಲಾಗಿದೆ. ಚಿತ್ರಕ್ಕೆ ರೊಮ್ಯಾಂಟಿಕ್ ಟಚ್ ನೀಡಲು ನಿರ್ದೇಶಕರು ಐಶ್ ಮತ್ತು ರಜನಿ ನಡುವೆ ರೊಮ್ಯಾಂಟಿಕ್ ದೃಶ್ಯವೊಂದನ್ನು ಚಿತ್ರದಲ್ಲಿ ಸೇರಿಸಿದ್ದಾರೆ. ಈ ದೃಶ್ಯವನ್ನು ಕಾರೊಂದರ ಒಳಗೆ ಚಿತ್ರೀಕರಿಸಲಾಗುತ್ತದೆ.
ಈ ದೃಶ್ಯ ಚಿತ್ರೀಕರಿಸಲೆಂದೇ ಒಂದು ಕೋಟಿ ಬೆಳೆಬಾಳುವ ಟಾಪ್ ಮಾಡೆಲ್ ಬೆಂಜ್ ಕಾರನ್ನು ಖರೀದಿಸಲಾಗಿದೆ. ಐಶ್‌ಗೆ ಸರಿಸಾಟಿಯಾಗಲು ಮತ್ತು ಕಿರಿಯವರಾಗಿ ಕಾಣಿಸಲು ರಜನಿಕಾಂತ್‌ರಿಗೆ ವಿವಿಧ ಫೇಶಿಯಲ್ ಚಿಕಿತ್ಸೆಗಳಿಗೆ ಒಳಪಡುತ್ತಿದ್ದಾರೆ. ಕುಲುಮನಾಲಿಯಲ್ಲಿ ಐಶ್ ಮತ್ತು ರಜನಿ ಕಾರೊಂದರ ಒಳಗೆ ರೊಮಾನ್ಸ್ ನಡೆಸುವ ದೃಶ್ಯ ಸಿನಿ ಪ್ರೇಕ್ಷಕರು ಇನ್ನಷ್ಟು ಆತುರದಿಂದ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.
'ಇಂದಿರನ್' ಚಿತ್ರ ಐಶ್ವರ್ಯಾರನ್ನು ಬಾಲಿವುಡ್‌ನಲ್ಲಿ ಅತಿ ದುಬಾರಿ ವೆಚ್ಚದ ನಾಯಕಿಯನ್ನಾಗಿಸಿದೆ. ಈ ಚಿತ್ರದ ಒಟ್ಟು ಬಜೆಟ್ 165 ಕೋಟಿ ಎನ್ನಲಾಗಿದೆ. ದುಬಾರಿ ವೆಚ್ಚ, ಐಶ್-ರಜನಿ ಜೋಡಿ ಮತ್ತು ಇನ್ನೂ ಹಲವು ವಿಷಯಗಳಿಗಾಗಿ ಚಿತ್ರ ಕುತೂಹಲ ಕೆರಳಿಸಿದೆ.