ಆಸ್ಪತ್ರೆಯೊಂದನ್ನು ಕಟ್ಟಿಸಬೇಕೆಂಬುದು ಜಾನ್ ಅಬ್ರಹಾಂರ ಮನದಾಳದ ಇಚ್ಛೆ. ಆದರೆ ಕೂಡಲೇ ನಿರ್ಮಾಣ ಆರಂಭಿಸುವಷ್ಟು ಹಣ ಅವರಲ್ಲೀಗ ಇಲ್ಲವಂತೆ. ಪ್ರಸ್ತುತ ಜಾನ್ ಆಸ್ಪತ್ರೆ ಕಟ್ಟಿಸಲು ಹಣ ಹೇಗೆ ಒಟ್ಟುಗೂಡಿಸುವುದು ಎಂಬ ಬಗ್ಗೆ ದಾರಿ ಹುಡುಕುತ್ತಿದ್ದಾರೆ.
ಜಾನ್‌ರ ತಾಯಿ ಯಾವಾಗಲೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮನೆಯಲ್ಲಿ ಬಾಲಿವುಡ್ ಸ್ಟಾರ್ ಇದ್ದರೂ ಜಾನ್ ಕುಟುಂಬದವರು ಸಾಮಾನ್ಯರಂತೆ ಬಸ್‌ನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಜಾನ್‌ರ ಮನೆಯೂ ಸಣ್ಣದು.
ಬೇರೆಯವರ ಮುಖದಲ್ಲಿ ನಗು ತರುವುದು ಅತ್ಯಂತ ಉತ್ತಮ ಕಾರ್ಯ ಎಂಬುದನ್ನು ಜಾನ್ ತಮ್ಮ ತಾಯಿಯಿಂದ ಕಲಿತ್ತಿದ್ದಾರೆ. ಜಾನ್ ಹೇಳುವಂತೆ ಯುವಜನಾಂಗ ತಮ್ಮ ತಂದೆತಾಯಿಗಳಿಂದ ಏನಾದರು ಒಳಿತನ್ನು ಕಲಿತುಕೊಳ್ಳಬೇಕು ಮತ್ತು ಸಮಾಜಕ್ಕೆ ಏನನ್ನಾದರೂ ನೀಡುವ ಭಾವನೆಯನ್ನು ಬೆಳೆಸಿಕೊಳ್ಳಬೇಕು.