ರಬ್ನೆ ಬನಾ ದಿ ಜೋಡಿ ಬಿಡುಗಡೆಯಾಗುವವರೆಗೆ ಬಾಲಿವುಡ್ ಕಿಂಗ್ ಪಟ್ಟಕ್ಕೆ ಸ್ಪರ್ಧೆ ನೀಡುತ್ತಿರುವ ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಅಕ್ಷಯ್ ಬೆಂಬಲಕ್ಕೆ ಈಗಾಗಲೇ ಹಿಟ್ ಎನಿಸಿರುವ ಸಿಂಗ್ ಈಸ್ ಕಿಂಗ್ ಇದ್ದರೆ ಶಾರುಖ್ ಪಾಲಿಗೆ ರಬ್ನೆ ಬನಾ ದಿ ಜೋಡಿ ಬಹಳ ಪ್ರಾಮುಖ್ಯತೆ ಹೊಂದಿತ್ತು. ರಬ್ನೆ ಬನಾ ದಿ ಜೋಡಿ ಯಶಸ್ವಿಯೆನಿಸದೇ ಇರುತ್ತಿದ್ದರೆ ಇಂದು ಅಕ್ಷಯ್ ಬಾಲಿವುಡ್ ಸಿಂಹಾಹನದ ಮೇಲೆ ಭದ್ರವಾಗಿ ನೆಲೆಯೂರುತ್ತಿದ್ದರು. ಶಾರುಖ್ ದಶಕಕ್ಕೂ ಹೆಚ್ಚು ಕಾಲದಿಂದ ಕಿಂಗ್ ಪಟ್ಟವನ್ನು ಹಿಡಿದಿಟ್ಟಿದ್ದಾರೆ.
ಅದೇನೇ ಇದ್ದರೂ, ರಬ್ನೆ ಬನಾ ದಿ ಜೋಡಿ ಯಶಸ್ವಿಯೆನಿಸಿದೆ ಇದರಿಂದಾಗಿ 2008 ಶಾರುಖ್ ಮತ್ತು ಅಕ್ಷಯ್ ಇಬ್ಬರಿಗೂ ಖುಷಿ ತಂದ ವರ್ಷವೆನಿಸಿದೆ.
ತಾವೂ ಶಾರುಖ್‌ರಿಗೆ ಸ್ಪರ್ಧೆ ನೀಡುವುದನ್ನು ಮುಂದುವರೆಸಲು ಅಕ್ಷಯ್ ಪಾಲಿಗೆ ಚಾಂದಿನಿ ಚೌಕ್ ಟೂ ಚೀನಾ ಪ್ರಮುಖವೆನೆಸಿದೆ. ಚಿತ್ರ ರಬ್ನೆ ಬನಾ ದಿ ಜೋಡಿಗಿಂತ ಉತ್ತಮ ಆರಂಭ ಕಾಣಬೇಕು ಮತ್ತು ಗಳಿಕೆ ಸಿಂಗ್ ಈಸ್ ಕಿಂಗ್ ದಾಖಲೆ ದಾಟಬೇಕು ಅಥವಾ ಅದರ ಹತ್ತಿರಕ್ಕಾದರೂ ತಲುಪಬೇಕು. ಚಿತ್ರಕ್ಕೆ ಮೆಗಾ ರಿಲೀಸ್ ಸಿಗುವುದು ಖಾತ್ರಿಯಾಗಿರುವುದರಿಂದ ಇದು ಅಷ್ಟೊಂದು ಕಷ್ಟಕರವೇನಲ್ಲ ಎನಿಸಿತ್ತು.
ಆದರೆ, ಗಜನಿ ಬಿಡುಗಡೆಯ ನಂತರ ಪರಿಸ್ಥಿತಿ ಬದಲಾಗಿದೆ. ಅಮೀರ್ ಖಾನ್ ಹೆಸರಿನ ಮೇಲೆ ನಡೆಯುತ್ತಿರುವ ಈ ಚಿತ್ರದ ಮೊದಲ ವಾರದ ಗಳಿಕೆಯೇ 60 ಕೋಟಿ ದಾಟುತ್ತಿದೆ (ಸರಿಯಾದ ಅಂಕಿಅಂಶ ಶೀಘ್ರದಲ್ಲಿ ಬಿಡುಗಡೆಯಾಗಲಿದೆ). ಈಗ ಅಕ್ಷಯ್‌ರ ಚಾಂದಿನಿ ಚೌಕ್ ಟೂ ಚೀನಾ ಎದುರಿರುವ ಸವಾಲು ಇನ್ನಷ್ಟು ಹಿರಿದಾಗಿದೆ.
ಚಾಂದಿನಿ ಚೌಕ್ ಟೂ ಚೀನಾ ಬಿಡುಗಡೆಗೆ ಇನ್ನು 15 ದಿನಗಳಷ್ಟೇ ಇರುವುದರಿಂದ ಇದು ಅಷ್ಟೊಂದು ಸುಲಭಕಾರ್ಯವಾಗಿ ಉಳಿದಿಲ್ಲ. ಚಿತ್ರದ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಬೇಕಾದ ಅಗತ್ಯವಿದೆ. ಅಮೀರ್ ಗಜನಿಗೆ ನೀಡಿದ ಪ್ರಚಾರ ಮತ್ತು ಅದರ ಪರಿಣಾಮಗಳನ್ನೂ ಗಮನಿಸಬೇಕಾಗುತ್ತದೆ. ಇದಲ್ಲದೆ ಪ್ರೇಕ್ಷಕ ವರ್ಗ ಈಗಾಗಲೇ ತಮ್ಮ ದುಡಿತವನ್ನು ಎರಡು ಚಿತ್ರಗಳಿಗೆ-ರಬ್ನೆ ಬನಾ ದಿ ಜೋಡಿ ಮತ್ತು ಗಜನಿಗೆ ವ್ಯಯಿಸಿರುವುದರಿಂದ ಒಂದೇ ತಿಂಗಳಲ್ಲಿ ಮತ್ತೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಚಿತ್ರಮಂದಿರಗಳಿಗೆ ಸೆಳೆಯುವುದು ಸುಲಭವಲ್ಲ. ಆದ್ದರಿಂದ ಖಂಡಿತವಾಗಿಯೂ ಅಕ್ಷಯ್ ಮುಂದಿನ ಸವಾಲು ಹಿರಿದು.
ಬಾಲಿವುಡ್‌ನಲ್ಲಿ ಯಶಸ್ಸಿನ ನಗುವನ್ನು ನಿರಂತರವಾಗಿರಿಸಲು ಸತತ ಮೂರನೇ 'ಮನಿ ಸ್ಪಿನ್ನರ್' ಚಿತ್ರವನ್ನು ನೀಡುವುದಕ್ಕೆ ಅಕ್ಷಯ್ ಸಮರ್ಥರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.