ಈ ಮೊದಲು ಸಲೀನಾ ಜೇಟ್ಲಿ, ತುಷಾರ್ ಕಪೂರ್‌ರೊಂದಿಗೆ 'ಸಿ ಕಂಪೆನಿ' ಎಂಬ ಚಿತ್ರ ಮಾಡಿದ್ದರು. ಈ ಚಿತ್ರವನ್ನು ತುಷಾರ್ ಅಕ್ಕ ಎಕ್ತಾ ಕಪೂರ್ ನಿರ್ಮಿಸಿದ್ದರು. ಈ ಫ್ಲಾಫ್ ಚಿತ್ರದಲ್ಲಿ ಸಲೀನಾ ಪಾತ್ರ ಬಹಳ ಸಣ್ಣದಾಗಿತ್ತು ಮತ್ತು ತುಷಾರ್ ಹಾಗು ಸಲೀನಾರ ಮೇಲೆ ಒಂದು ಹಾಡನ್ನು ಚಿತ್ರೀಕರಿಸಲಾಗಿತ್ತು. ಈ ಕೆಲವೇ ದಿನಗಳ ಚಿತ್ರೀಕರಣವೂ ಇವರಿಬ್ಬರ ನಡುವೆ ಸ್ನೇಹ ಬೆಳೆಯಲು ಸಾಕಾಗಿತ್ತು. ಸಲೀನಾ ಮತ್ತು ತುಷಾರ್ ಅಂದಿನಿಂದ ಉತ್ತಮ ಸ್ನೇಹಿತರಾದರು. ಈಗ ಇತ್ತೀಚಿಗೆ 'ಗೋಲ್‌ಮಾಲ್ ರಿಟರ್ನ್ಸ್' ಚಿತ್ರದಲ್ಲಿ ಇವರಿಬ್ಬರು ಮತ್ತೆ ಜೊತೆಯಾಗಿ ನಟಿಸಿದರು. ಈ ಚಿತ್ರದ ಚಿತ್ರೀಕರಣ ವಿದೇಶಗಳಲ್ಲಿ ಬಹಳ ದಿನಗಳ ಕಾಲ ನಡೆದಿತ್ತು ಮತ್ತು ಸಲೀನಾ ಹಾಗು ತುಷಾರ್‌ಗೆ ಜೊತೆಯಾಗಿ ಕಾಲಕಳೆಯಲು ಸಮಯ ಒದಗಿತ್ತು. ಇವರಿಬ್ಬರು ಜೊತೆಯಾಗಿ ಹಲವು ಕಡೆ ಕಾಣಿಸಿಕೊಳ್ಳತೊಡಗಿದರು ಮತ್ತು ಬಾಲಿವುಡ್ ವಲಯದಲ್ಲಿ ಇವರಿಬ್ಬರ ನಡುವೆ ರೊಮಾನ್ಸ್ ನಡೆಯುತ್ತಿದೆ ಎಂಬ ಚರ್ಚೆ ಆರಂಭವಾಗಿದೆ.
ಬಾಯ್‌ಫ್ರೆಂಡ್ ಹುಟುಕಾಟ ಸಲೀನಾ ಪ್ರೀತಿಯ ವಿಚಾರದಲ್ಲಿ ಅಷ್ಟೊಂದು ಭಾಗ್ಯಶಾಲಿಯಲ್ಲ. ಅವರ ಜೀವನದಲ್ಲಿ ಇಬ್ಬರೂ, ಮೂವರ ವ್ಯಕ್ತಿಗಳು ಬಂದರು ಆದರೆ ನಂತರ ಸಂಬಂಧ ಮುರಿದು ಬಿತ್ತು. ನಿರಂತರವಾಗಿ ಸಂಬಂಧಗಳು ಮುರಿದುದರಿಂದ ಸಲೀನಾರನ್ನು ನಿರಾಶೆ ಅವರಿಸಿಕೊಂಡಿತು. ಆದರೆ ಅವರು ತಮ್ಮ ಕೆರಿಯರ್ ಕಡೆ ಹೆಚ್ಚಿನ ಗಮನ ಹರಿಸುವ ಪ್ರಯತ್ನ ಮಾಡಿದರು. ತಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ, ತಮ್ಮ ಸುಖ,ದುಃಖಗಳನ್ನು ಹಂಚಿಕೊಳ್ಳಬಲ್ಲ ಬಾಯ್‌ಫ್ರೆಂಡ್‌ನ ನಿರೀಕ್ಷೆಯಲ್ಲಿರುವುದಾಗಿಯೂ ಸಲೀನಾ ಮುಕ್ತವಾಗಿ ಹೇಳಿ ಬಿಟ್ಟಿದ್ದರು. ಮೂಲಗಳ ಪ್ರಕಾರ ತುಷಾರ್‌ರಲ್ಲಿ ಸಲೀನಾರಿಗೆ ಈ ಎಲ್ಲಾ ಗುಣವಿಶೇಷಗಳು ಕಾಣಿಸುತ್ತಿದೆಯಂತೆ.
ತುಷಾರ್‌ರ ಹೊಸ ಮನೆ ಇತ್ತೀಚೆಗಷ್ಟೇ ತುಷಾರ್ ತಂದೆ, ತಾಯಿ ಜಿತೇಂದ್ರ ಮತ್ತು ಶೋಭಾ ಕಪೂರ್ ತುಷಾರ್‌ಗೆ ಕಟ್ಟವೊಂದರಲ್ಲಿ ಎರಡು ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ತುಷಾರ್ ಬಹಳ ದಿನಗಳಿಂದ ತಮ್ಮದೇ ಆ ಮನೆ ಬಯಸಿದ್ದರು, ಅವರ ಆಸೆಯನ್ನು ಅವರ ತಂದೆ, ತಾಯಿ ನೆರವೇರಿಸಿದರು. ತಮಗೆ ಹೊಸ ಮನೆ ಸಿಕ್ಕಿದೆಯೆಂದರೆ ತಾವು ತಂದೆ ತಾಯಿಯಿಂದ ಬೇರೆಯಾಗುತ್ತಿದ್ದೇನೆ ಎಂದರ್ಥವಲ್ಲ. ಆ ಫ್ಲಾಟ್‌ಗಳಲ್ಲಿ ತಾವು ಯಾವಾಗ ಬೇಕೆಂದರೆ ಅವಾಗ ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯುವುದಾಗಿ ತುಷಾರ್ ಹೇಳುತ್ತಾರೆ. ತುಷಾರ್‌ರ ಹೊಸ ಮನೆಯಲ್ಲಿ ಸಲೀನಾ ಮತ್ತು ತುಷಾರ್ ರೊಮಾನ್ಸ್ ಚರ್ಚೆ ಮತ್ತಷ್ಟು ಬಿಸಿಯೇರಿದೆ.
IFM
ಸಲೀನಾರ ನಿರಾಕರಣೆ ಸಾಮಾನ್ಯವಾಗಿ ಸಲೀನಾ ತಮ್ಮ ಸಂಬಂಧಗಳನ್ನು ಮುಚ್ಚಿಡಲು ಪ್ರಯತ್ನಿಸಿದವರಲ್ಲ. ಆದರೆ ತುಷಾರ್‌ರೊಂದಿಗಿನ ರೊಮಾನ್ಸ್ ಸುದ್ದಿಯನ್ನು ಅವರು ಆಧಾರಹೀನ ಎಂದಿದ್ದಾರೆ. ಸಲೀನಾ ಈಗ ತಮ್ಮ ಕೆರಿಯರ್‌ನ ಪ್ರಮುಖ ಘಟ್ಟದಲ್ಲಿದ್ದಾರೆ 'ಗೋಲ್‌ಮಾಲ್ ರಿಟರ್ನ್ಸ್' ಯಶಸ್ಸಿನ ನಂತರ ಅವರ ಬೇಡಿಕೆ ಹೆಚ್ಚಿದೆ. ಆದ್ದರಿಂದ ತಮ್ಮ ರೊಮಾನ್ಸ್ ಸುದ್ದಿ ಕೆರಿಯರ್ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದು ಅವರಿಗಿಷ್ಟವಿಲ್ಲ. ಕನಿಷ್ಠ ಪಕ್ಷ ಇನ್ನೂ ಏಳು ವರ್ಷಗಳ ನಂತರ ತಾವು ವಿವಾಹವಾಗುವುದಾಗಿ ಸಲೀನಾ ಹೇಳಿದ್ದಾರೆ.