ಸ್ಕ್ರೀನ್ ಬ್ಯೂಟಿ ಕತ್ರಿನಾ ಕೈಫ್ ಪ್ರಿಯಕರ ಸಲ್ಮಾನ್ ಖಾನ್ ಬಗ್ಗೆ ಬಹಳ ಪೊಸೆಸ್ಸಿವ್‌ನೆಸ್ ತೋರಿಸುತ್ತಿದ್ದಾರೆ. ವೀರ್ ಚಿತ್ರಕ್ಕಾಗಿ ಕತ್ರಿನಾಳಂತೆಯೇ ಕಾಣುವ ಲಂಡನ್ ಬೆಡಗಿ ಜರೀನ್ ಖಾನ್‌ರನ್ನು ಸಲ್ಲು ಹುಡುಕಿ ತಂದುದು ಕತ್ರಿನಾಗೆ ಅಷ್ಟೇನು ಹಿಡಿಸಿಲ್ಲ ಎನ್ನಲಾಗುತ್ತಿದೆ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಸಲ್ಲು ಬಹಳಷ್ಟು ಸಮಯವನ್ನು ಜರೀನ್‌ಳೊಡನೆ ಕಳೆಯಲು ಆರಂಭಿಸಿದ ನಂತರ ಕತ್ರಿನಾಗೆ ಸ್ವಲ್ಪ ಮಟ್ಟಿಗೆ ಭಯ ಕಾಡಲು ಆರಂಭವಾಯಿತು. ಸಲ್ಲು ಮೇಲೆ ನಿಗಾ ಇಡಲು ಕತ್ರಿನಾ ಆಗಾಗ್ಗೆ ವೀರ್ ಸೆಟ್‌ಗೆ ಭೇಟಿಕೊಡಲು ಆರಂಭಿಸಿದರು.
ಕತ್ರಿನಾ ಸೆಟ್‌ಗೆ ಬಂದಾಗಲೆಲ್ಲಾ ಸಲ್ಲುರ ಪೂರ್ಣ ಗಮನ ಅವರ ಕಡಗೆ. ಅವರು ಎಲ್ಲವನ್ನು ಬಿಟ್ಟು ಕತ್ರಿನಾಗೆ ಜೊತೆ ನೀಡುತ್ತಿದ್ದರು. ಅವರು ಜರೀನ್ ಬಗ್ಗೆಯೂ ವಿಚಾರಿಸುತ್ತಿರಲಿಲ್ಲ. ಕತ್ರಿನಾ ಬಳಿಯಲ್ಲಿದ್ದಾಗ ಸಲ್ಲು ಜರೀನ್‌ರನ್ನು ಪೂರ್ತಿಯಾಗಿ ಕಡೆಗಣಿಸುತ್ತಿದ್ದರು. ಮೂಲಗಳು ಹೇಳುವಂತೆ ಜರೀನ್, ಸಲ್ಲು ಪಕ್ಕ ಬಂದು ಕುಳಿತುಕೊಂಡರೂ ಅವರು ಜರೀನ್ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ, ಕತ್ರಿನಾ ಅಲ್ಲಿದ್ದಾಗ ಅವರು ತಮ್ಮ ಎಲ್ಲಾ ಬಿಡುವಿನ ವೇಳೆಯನ್ನು ಅವರೊಡನೆ ಕಳೆಯುತ್ತಾರೆ.
ಆದರೆ ಕತ್ರಿನಾ ಹೇಳುವುದೇ ಬೇರೆ, "ನಾನು ವೀರ್ ಸೆಟ್‌ಗೆ ಹೋಗಿದ್ದು ನಿಜ ಆದರೆ ಕೇವಲ ಒಂದು ಬಾರಿ ಮಾತ್ರ. ಅದಕ್ಕೆ ಕಾರಣ ವೀರ್ ನಿರ್ದೇಶಕ ಅನಿಲ್ ಶರ್ಮ ನನ್ನ ಸ್ನೇಹಿತರು". ವಿಜಯ್ ಹೇಳುವಂತೆ, "ಕತ್ರಿನಾ ವೀರ್ ಸೆಟ್‌ಗೆ ಕೆಲವು ಬಾರಿ ಬಂದಿದ್ದಾರೆಯಾದರೂ ಅವರು ಮತ್ತು ಜರೀನ್ ಚೆನ್ನಾಗಿ ಹೊಂದಿಕೊಳ್ಳುತ್ತಾರೆ".