ಓಂ ಶಾಂತಿ ಓಂ ಹುಡುಗಿ ದೀಪಿಕಾ ಪಡುಕೋಣೆ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಕುಂದಾಪುರದ ಪಡುಕೋಣೆ ದೀಪಿಕಾ ಕುಟುಂಬದ ಮೂಲ. ಇವರು ಪ್ರಸಿದ್ಧ ಬಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿ. ಬಾಡ್ಮಿಂಟನ್ ಆಟಗಾರ್ತಿಯಾಗಿದ್ದ ದೀಪಿಕಾ ನಂತರ ಬಂದಿದ್ದು ತಳುಕಿನ ಮಾಡೆಲಿಂಗ್ ಪ್ರಪಂಚಕ್ಕೆ. ನಂತರ ಹೆಚ್ಚಿನವರಂತೆ ದೀಪಿಕಾರೂ ಚಿತ್ರರಂಗಕ್ಕಿಳಿದರು ಅವರ ಮೊದಲ ಚಿತ್ರ ಕನ್ನಡದ 'ಐಶ್ವರ್ಯ'. ಬಾಲಿವುಡ್‌ನಲ್ಲಿ ಕಿಂಗ್ ಖಾನ್ ಶಾರುಖ್‌ರೊಂದಿಗೆ ಓಂ ಶಾಂತಿ ಓಂ ಚಿತ್ರದ ಮೂಲಕ ಭರ್ಜರಿ ಆರಂಭ ದೀಪಿಕಾರಿಗೆ ದೊರೆಯಿತು. ಈ ಸಂದರ್ಭ ದೀಪಿಕಾರ ಕೆಲ ಮಾತುಗಳು,
ದೀಪಿಕಾರ ಗೇಮ್ ಪ್ಲಾನ್ ಬಾಲಿವುಡ್ ನನ್ನ ಅಂತಿಮ ಗುರಿಯಲ್ಲ. ನಾನು ಇಂಟೀರಿಯರ್ ಡಿಸೈನಿಂಗ್ ಬಗ್ಗೆ ಯೋಜನೆ ಹೊಂದಿದ್ದೇನೆ.
ಬಾಲಿವುಡ್‌ನಲ್ಲಿ ದೀಪಿಕಾರ ಮೊದಲ ಹೆಜ್ಜೆ ಓಂ ಶಾಂತಿ ಓಂಗಿಂತ ಉತ್ತಮ ಆರಂಭ ಸಿಗುವುದು ಸಾಧ್ಯವಿಲ್ಲ. ಇದರಲ್ಲಿ ಎಲ್ಲವೂ ಇತ್ತು- ಅತ್ಯುತ್ತಮ ಸಂಗೀತ, ರೋಮಾನ್ಸ್ ಮತ್ತು ಇವೆಲ್ಲದಕ್ಕಿಂತಲೂ ಮಿಗಲಾಗಿ ಶಾರುಖ್.
ಬಿಕಿನಿ ಸ್ನೇಹಿ ದೀಪಿಕಾ ಬಿಕಿನಿ ತೊಡುವುದರಲ್ಲಿ ನನಗೇನು ಸಮಸ್ಯೆಯಿಲ್ಲ, ಏಕೆಂದರೆ ಅದು ನನಗೆ ಹೊಂದಿಕೊಳ್ಳುತ್ತದೆ ಎಂಬುದು ನನಗೆ ತಿಳಿದಿದೆ. ನಾನು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ನಾನು ಅದನ್ನು ಆನಂದಿಸುವವರೆಗೆ ಅದರಲ್ಲೇನು ಸಮಸ್ಯೆಯಿಲ್ಲ.
ದೀಪಿಕಾಗೊಲಿದಿದೆ ಯಶಸ್ಸು? ನಾನು ನನ್ನತನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ. ನನ್ನ ಕನಸಿನಲ್ಲಿಯೂ ನಾನು ಇವೆಲ್ಲವೂ ನನಗೆ ಇಷ್ಟು ಬೇಗನೇ ದಕ್ಕುತ್ತದೆಂದು ಅಂದುಕೊಂಡಿರಲಿಲ್ಲ. ನಿಜಹೇಳಬೇಕೆಂದರೆ, ನಾನು ಯಾವಾಗಲೂ ಇದನ್ನು ಬಯಸಿದ್ದೆ ಮತ್ತು ನಾನು ಇದನ್ನು ಪಡೆದಿದ್ದೇನೆ.
ದೀಪಿಕಾರನ್ನು ಯಾವಾಗಲೂ ಐಶ್ವರ್ಯಾ ರೈರೊಂದಿಗೆ ಹೋಲಿಸಲಾಗುತ್ತಿದೆ. ಐಶ್ವರ್ಯಾರೊಂದಿಗೆ ಹೋಲಿಸಲ್ಪಡುವ ಶ್ರೇಷ್ಠ ಅನುಭವ. ಅವರು ಬಾಲಿವುಡ್ ಪ್ರವೇಶಿಸುವ ಮುನ್ನ ಮಾಡೆಲ್ ಮತ್ತು ವಿಶ್ವಸುಂದರಿಯಾಗಿದ್ದರು. ಅವರು ನನಗೆ ಸ್ಪೂರ್ತಿಯಾಗಿದ್ದಾರೆ. ಜನರು ನನ್ನನ್ನು ಅವರಿಗೆ ಹೋಲಿಸುತ್ತಾರೆ ಮತ್ತು ನಾನು ಅವರ ಹಾದಿಯಲ್ಲೇ ನಡೆಯುತ್ತೇನೆ ಎನ್ನುತ್ತಾರೆಂದರೆ ಅದು ನನಗೆ ಅತಿದೊಡ್ಡ ಪ್ರಶಂಸೆ.
ದೀಪಿಕಾ ಉತ್ತಮ ಬಾಡ್ಮಿಂಟನ್ ಆಟಗಾರ್ತಿ. ಜನರಿಗೆ ತಿಳಿದಿದೆಯೇ ಗೊತ್ತಿಲ್ಲ, ಆದರೆ ನಾನು ರಾಷ್ಟ್ರೀಯ ಬಾಡ್ಮಿಂಟನ್ ಆಡುವುದನ್ನು 2002ರಲ್ಲಿ ನಿಲ್ಲಿಸಿದ್ದೇನೆ. ನಾನು 2008ರವರೆಗೂ ಆಟ ಆಡುವುದನ್ನು ಮುಂದುವರೆಸಿದ್ದರೆ ಇಂದು ನಾನು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೆ. ಆದರೆ ಜೀವನ ನನ್ನ ಪಾಲಿಗೆ ಬೇರೆಯದೇ ಯೋಜನೆಗಳನ್ನು ಹೊಂದಿತ್ತು ಮತ್ತು ನಾನು ಸಹ ನನಗಾಗಿ ಬೇರೆಯದೇ ಯೋಜನೆ ರೂಪಿಸಿದ್ದೆ.
ರಣ್‌ಬೀರ್ ಕಪೂರ್ ಪ್ರೇಮದಲ್ಲಿ ದೀಪಿಕಾ ನಾನು ಕೇವಲ ರಣ್‌ಬೀರ್‌ರನ್ನು ಪ್ರೀತಿಸುತ್ತಿದ್ದೇನೆ. ಒಂದು ಸಂಬಂಧವನ್ನು ಮುಚ್ಚಿಡವುದು ಅಥವಾ ತೆರೆದಿಡುವುದಕ್ಕೆ ಈ ವಿಷಯ ಸಂಬಂಧಿಸಿಲ್ಲ. ಇದು ಸ್ಪಷ್ಟತೆಗೆ ಸಂಬಂಧಿಸಿದ್ದಾಗಿದೆ. ಮತ್ತು ನನ್ನ ಪ್ರಕಾರ ನಿಮ್ಮಲ್ಲಿ ಸ್ಪಷ್ಟತೆ ಇದ್ದರೆ ಮತ್ತು ನೀವು ನಿಜವಾಗಿಯೂ ಪ್ರೀತಿಯಲ್ಲಿದ್ದರೆ, ನೀವು ಅದನ್ನು ಮುಚ್ಚಿಡುವ ಅಗತ್ಯವೇನಿದೆ?