ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹಾಲಿವುಡ್ ನಟಿಯ ತುಟಿ ಕಚ್ಚಿದ ಅಕ್ಷಯ್ ಕುಮಾರ್!
ಸುದ್ದಿ/ಗಾಸಿಪ್
Feedback Print Bookmark and Share
 
90ರ ದಶಕದಲ್ಲಿ 'ಸೆಕ್ಸೀ' ಎಂದೇ ಖ್ಯಾತಳಾಗಿದ್ದ ಹಾಲಿವುಡ್ ಬೊಂಬೆ ಡೆನೀಸ್ ರಿಚರ್ಡ್ಸ್ ಮತ್ತು ಅಕ್ಷಯ್ ಕುಮಾರ್ ಸಾರ್ವಜನಿಕವಾಗಿ ಕಿಸ್ಸಿಂಗ್‌ನಲ್ಲಿ ತೊಡಗಿ ಇದೀಗ ಸುದ್ದಿಯಲ್ಲಿದ್ದಾರೆ. ಅದು ಕಿಸ್ ಕೊಟ್ಟದ್ದು ಕೆನ್ನೆಗಲ್ಲ.. ತುಟಿಗೆ ತುಟಿ ಬೆರೆಸಿ.. ಛೇ..! ಜತೆಗೆ ಆ ಕಿಸ್ಸಿಂಗ್ ದೃಶ್ಯಗಳೂ ಇಂಟರ್‌ನೆಟ್‌ನಲ್ಲಿ ಓಡಾಡುತ್ತಿವೆ. ಅದೇನಾದರೂ ಟ್ವಿಂಕಲ್ ಕೈಗೆ ಸಿಕ್ಕಲ್ಲಿ ಅಕ್ಷಯ್ ಕಥೆ ಅಷ್ಟೇ...!
IFM


ಹುಡುಗಿಯರನ್ನು ಹುಚ್ಚೆಬ್ಬಿಸುವ ಚಾರ್ಮ್ ಇನ್ನೂ ಉಳಿಸಿಕೊಂಡಿರುವ 41ರ ಚಿರ ಯುವಕ ಅಕ್ಷಯ್ ಕುಮಾರ್ ನೆನಪಾಗುವುದೇ ಅಂತಹ ವಿಚಾರಗಳಿಗೆ ! ಅವನ ಚಿತ್ರದ ಹುಡುಗಿಯರನ್ನು ಅಡ್ಡಡ್ಡ ಮಲಗಿಸಿ, ಹಾರಿಸಿ, ಬೀಳಿಸಿ.. ಹೇಗ್ಹೆಗೋ 'ಸಾಹಸ' ಮಾಡಿ ಕಣ್ಣು ಮಿಟುಕಿಸದಂತೆ ಮಾಡುವುದು ಅವನ ಸ್ಪೆಷಾಲಿಟಿ.

ಯಾವತ್ತೂ ಚಿತ್ರಗಳಲ್ಲಿ ಸಾಹಮಯಿಯಾಗಿ ಗುರುತಿಸಿಕೊಳ್ಳುತ್ತಿದ್ದ ಅಕ್ಷಯ್ ಇತ್ತೀಚಿನ ಟ್ರೆಂಡ್‌ನಲ್ಲಿ ಹಾಸ್ಯಕ್ಕೆ ಮೊರೆ ಹೋಗಿದ್ದ. ಅದು ರೊಮ್ಯಾಂಟಿಕ್ ಪಾತ್ರವಿರಲಿ, ಸಾಹಸ ದೃಶ್ಯವಿರಲಿ ಅಥವಾ ಹಾಸ್ಯ ಸನ್ನಿವೇಶಗಳಿರಲಿ, ಎಲ್ಲದರಲ್ಲೂ ಸರಿ ಸಮಾನಾಗಿ ಮಿಂಚುವ ತಾಕತ್ತು ಬಾಲಿವುಡ್‌ನಲ್ಲಿ ಅಕ್ಷಯ್ ಹೊರತು ಪಡಿಸಿ ಇನ್ನ್ಯಾರಿಗೂ ಇಲ್ಲವೆಂದೇ ಹೇಳಬಹುದು.

ಇದೀಗ ತನ್ನ ಗತಕಾಲವನ್ನು ಮರಳಿ ಪಡೆಯುವ ಚಿತ್ರವೊಂದು ಈ ಖಿಲಾಡಿ ಕೈಯಲ್ಲಿದೆ. ಅದೇ 'ಕಂಬಕ್ತ್ ಇಷ್ಕ್'. ಈಗಾಗಲೇ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲೋನ್ ನಟಿಸಿ ಸುದ್ದಿಯಾಗಿದ್ದಾರೆ. ಇದೀಗ ಡೆನೀಸ್ ರಿಚರ್ಡ್ಸ್ ಸರದಿ.

ಈ ಚಿತ್ರದಲ್ಲಿ ನಾಯಕಿ ಕರೀನಾ ಕಪೂರ್. ಸಾಹಸಮಯ ಮತ್ತು ರೊಮ್ಯಾಂಟಿಕ್ ಪಾತ್ರದಲ್ಲಿ ಮಿಂಚಲಿರುವ ಅಕ್ಷಯ್ ಕುಮಾರ್‌ ಡೆನೀಸ್ ರಿಚರ್ಡ್ಸ್ ಜತೆ ಸರಸವಾಡುವ ದೃಶ್ಯವೂ ಚಿತ್ರದಲ್ಲಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ 2009ರ ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಚಿತ್ರದಲ್ಲಿನ ಹಾಟ್ ಸೀನ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಚಿತ್ರದ ನಿರ್ಮಾತೃಗಳು, "ಇದು ಅಂತಾರಾಷ್ಟ್ರೀಯ ಲವ್ ಸ್ಟೋರಿ. ಹಾಗಾಗಿ ಎಲ್ಲವನ್ನೂ ಅದೇ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ" ಎಂದು ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಕ್ಷಯ್ ಕುಮಾರ್, ಬಾಲಿವುಡ್, ಹಾಲಿವುಡ್, ಡೆನೀಸ್ ರಿಚರ್ಡ್ಸ್