ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ವಾಟ್ಸ್ ಯುವರ್ ರಾಶಿ?: ನೋಡಬಹುದಾದ ಬೋರ್ ಚಿತ್ರ (What's Your Rashee | Movie Review | Harman Baweja | Priyanka Chopra | Ashutosh Gowarikar)
ಸಿನಿಮಾ ವಿಮರ್ಶೆ
Feedback Print Bookmark and Share
 
Whats Your Rashee?
IFM
ಬಹುನಿರೀಕ್ಷಿತ ಚಿತ್ರ ವಾಟ್ಸ್ ಯುವರ್ ರಾಶಿ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ 12 ಪಾತ್ರಗಳನ್ನು ನಿಭಾಯಿಸಿ ಮೂಲಕ ಗಿನ್ನಿಸ್ ದಾಖಲೆಗೆ ಪ್ರಿಯಾಂಕ ಛೋಪ್ರಾ ನಾಮನಿರ್ದೇಶನಗೊಂಡಿದ್ದಾಳೆ. ಮೂರುವರೆ ಗಂಟೆಗಳ ಕಾಲ ಓಡುವ ಸುದೀರ್ಘ ಚಿತ್ರವಿದು.

ವಾಟ್ಸ್ ಯುವರ್ ರಾಶಿ ಚಿತ್ರದ ಕಥಾ ಹಂದರ ಇಷ್ಟೇ. ಆತ ಯೋಗೇಶ್ ಪಟೇಲ್ (ಹರ್ಮಾನ್ ಭವೇಜಾ) ಎಂಬಿಎ ಓದುತ್ತಿರುವ ಒಬ್ಬ ಯುವಕ. ಲವ್ ಮ್ಯಾರೇಜ್ ಮೂಲಕವೇ ತಾನು ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ತತ್ವದ ಮೇಲೆ ಬಲವಾದ ನಂಬಿಕೆಯಿಟ್ಟವನು ಆತ. ಆದರೆ ಒಮ್ಮೆ ಆತನಿಗೆ ಕೇವಲ ಹತ್ತೇ ದಿನಗಳೊಳಗೆ ಸಂಗಾತಿಯನ್ನು ಆಯ್ಕೆ ಮಾಡದಿದ್ದರೆ ನಿನ್ನ ಕುಟುಂಬ ದೊಡ್ಡದೊಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂಬ ಭವಿಷ್ಯ ಹೇಳುತ್ತಾರೆ. ಇದರಿಂದ ಗೊಂದಲಕ್ಕೊಳಗಾಗಿ ಹತ್ತು ದಿನದಲ್ಲಿ ಸಂಗಾತಿ ಹುಡುಕುವ ಕಾರ್ಯಕ್ಕೆ ಹೊರಡುತ್ತಾನೆ ಆತ.

Whats Your Rashee?
IFM
10 ದಿನದಲ್ಲಿ ಜೀವನಪೂರ್ತಿ ಜತೆಗಿರಬಲ್ಲ ಹುಡುಗಿಯೊಬ್ಬಳನ್ನು ಆಯ್ಕೆ ಮಾಡೋದು ಅಂದರೆ ಸುಲಭದ ಮಾತಾ? ಹಾಗಾಗಿ ಇದು ಆತನಿಗೆ ಸಂದಿಗ್ಧ ಪರಿಸ್ಥಿತಿಯಂತೆ ಭಾಸವಾಗುತ್ತದೆ. ಅದಕ್ಕಾಗಿ ಆತ ಪ್ರತಿ ರಾಶಿಯಿಂದ ಒಬ್ಬರಂತೆ 12 ಮಂದಿ ಹುಡುಗಿಯರನ್ನು ಆಯ್ಕೆ ಮಾಡುತ್ತಾನೆ. ಹೀಗಾಗಿ ಆತನಿಗೆ ಲವ್ವಿನಲ್ಲಿ ಬೀಳಲು 12 ಆಯ್ಕೆಗಳಿರುತ್ತವೆ!

ಪ್ರತಿ ದಿನಕ್ಕೆ ಇಬ್ಬರು ಹುಡುಗಿಯರಂತೆ ಆರು ದಿನಗಳಲ್ಲಿ 12 ಹುಡುಗಿಯರ ಆಯ್ಕೆಯನ್ನು ಆತ ನಡೆಸುತ್ತಾನೆ. ನಂತರದ ಮೂರು ದಿನಗಳಲ್ಲಿ ಈ 12 ಹುಡುಗಿಯರಲ್ಲಿ ಯಾರನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಲಿ ಎಂದು ಚಿಂತಿಸಲು ಇಟ್ಟುಕೊಳ್ಳುತ್ತಾನೆ. ಉಳಿದ ಕೊನೆಯ ಒಂದೇ ದಿನವನ್ನು ಅರ್ಥಾತ್ 10ನೇ ದಿನವನ್ನು ಒಬ್ಬಳ ಕುತ್ತಿಗೆಗೆ ತಾಳಿ ಬಿಗಿಯಲು ಎಂದು ಇಟ್ಟಿರುತ್ತಾನೆ. ನಂತರ ಏನಾಗುತ್ತದೆ? ಆತನ ಯಾರನ್ನು ಮದುವೆಯಾಗುತ್ತಾನೆ. ಇದಕ್ಕಾಗಿ ಚಿತ್ರ ನೋಡಬೇಕು.

'ವಾಟ್ಸ್ ಯುವರ್ ರಾಶಿ?' ಚಿತ್ರ ಮಧು ರೇ ಅವರು ಬರೆದ ಗುಜರಾತಿ ಕಾದಂಬರಿ ಕಿಂಬಾಲ್ ರೇವನ್ಸ್‌ವುಡ್ ಕಥೆಯನ್ನು ಆಧರಿಸಿದೆ. ಅಶುತೋಷ್ ಗೌರೀಕರ್ ಅವರ ಮೊದಲ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು. 12 ರಾಶಿಯ ಹುಡುಗಿಯರೊಂದಿಗೆ ನಾಯಕ ಹರ್ಮಾನ್ 12 ಹಾಡುಗಳಲ್ಲಿ ಕುಣಿಯುತ್ತಾನೆ. ಚಿತ್ರದ ಟೈಟಲ್ ಟ್ರ್ಯಾಕ್ ಆಜಾ ಲೆಹ್ರಾತೇ.. ಹಾಗೂ ಭಿಕ್‌ರೀ ಸೀ ಝುಲ್ಫೇಂ.. ಹಾಡುಗಳು ಚಿತ್ರದಿಂದ ಹೊರಬಂದ ನಂತರವೂ ಕಿವಿಯಲ್ಲಿ ಗುಂಯ್‌ಗುಡುತ್ತದೆ. ಉಳಿದಂತೆ ಐದಾರು ಹಾಡುಗಳಿಗೆ ಯಾವ ಮುಲಾಜೂ ಇಲ್ಲದೆ ಸಂಕಲನಕಾರರು ಕತ್ತರಿಸಿ ಬಿಸಾಕಬಹುದಿತ್ತು. ಚಿತ್ರಕಥೆ ಚೆನ್ನಾಗಿ ಸಾಗಿದರೂ, ಆಗಾಗ ಬರುವ ಹಾಡೇ ಚಿತ್ರವನ್ನು ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತದೆ.
Whats Your Rashee?
IFM


ಉಳಿದಂತೆ, ಕ್ಯಾಮರಾ ಕೆಲಸ ಚೆನ್ನಾಗಿದೆ. ಇನ್ನು ಹರ್ಮಾನ್ ಭವೇಜಾ ಪಾಲಿಗೆ ಇದು ಮೊದಲ ಚಿತ್ರ ಅಂತಾನೇ ಹೇಳಬಹುದು. ಈ ಮೊದಲು ಬೆರಳೆಣಿಕೆಯ ಚಿತ್ರಗಳಲ್ಲಿ ಹರ್ಮಾನ್ ನಟಿಸಿದ್ದರೂ, ವಾಟ್ಸ್ ಯುವರ್ ರಾಶಿಯಲ್ಲಿ ಹರ್ಮಾನ್ ತಮ್ಮ ಪಾತ್ರಕ್ಕೆ ಉತ್ತಮ ನ್ಯಾಯ ಸಲ್ಲಿಸುವ ಮೂಲಕ ಗಮನ ಸೆಳೆಯುತ್ತಾರೆ. ಚಿತ್ರದ ಕೇಂದ್ರಬಿಂದುವಾಗಿರುವ ಪ್ರಿಯಾಂಕಾ ಛೋಪ್ರಾ ನಟನೆಯ ಬಗ್ಗೆ ಎರಡು ಮಾತೇ ಇಲ್ಲ. 12 ಪಾತ್ರಗಳನ್ನು ಒಂದೇ ಚಿತ್ರದಲ್ಲಿ ನಿಭಾಯಿಸುವುದು ಸುಲಭದ ಮಾತಲ್ಲ. ಪ್ರಿಯಾಂಕಾ ತಮ್ಮ 12 ಪಾತ್ರಗಳಿಗೆ ಜೀವ ತುಂಬುವ ಮೂಲಕ ಭರವಸೆ ಮೂಡಿಸುತ್ತಾರೆ. ಚಿತ್ರದಲ್ಲಿ ಹಳ್ಳಿ ಹುಡುಗಿ, ಬಿಂದಾಸ್ ಹುಡುಗಿ, ಶ್ರೀಮಂತ ಹುಡುಗಿ, ಬಡ ಹುಡುಗಿ ಸೇರಿದಂತೆ ವಿವಿಧ ವರ್ಗಗಳ ಪಾತ್ರಗಳ ಒಳಹೊಕ್ಕು ನಟಿಸಿದ್ದಾರೆ ಪ್ರಿಯಾಂಕಾ. ಒಟ್ಟಾರೆ ಚಿತ್ರವನ್ನು ಮೂರುವರೆ ಗಂಟೆಗಳ ಕಾಲ ನೋಡುವುದು ಬೋರ್ ಆದರೂ, ಚೆಂದದ ಕಥಾಹಂದರವಿರುವ ಕುಟುಂಬ ಸಮೇತರಾಗಿ ನೋಡಬಲ್ಲ ಮನರಂಜನಾ ಚಿತ್ರವಿದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಾಟ್ಸ್ ಯುವರ್ ರಾಶಿ, ಪ್ರಿಯಾಂಕ ಛೋಪ್ರಾ, ಹರ್ಮಾನ್ ಭವೇಜಾ, ಅಶುತೋಷ್ ಗೌರೀಕರ್