ಬಹುಮುಖ ಪ್ರತಿಭೆ ಮಾಧವನ್

ಶನಿವಾರ, 23 ಮೇ 2009( 15:09 IST )
ದಕ್ಷಿಣ ಇಂಡಿಯಾ ಸಿನೆಮಾ ಜಗತ್ತಿನ ಸ್ಟಾರ್ ಆರ್ ಮಾಧವನ್ 1970 ಜೂನ್ 1ರಂದು ಜಾರ್ಖಂಡ್‌ನಲ್ಲಿ ಜನಿಸಿದರು. ಇತರ ನಟರಿಗಿಂತ ತೀರಾ ಭಿನ್ನರಾದ ಮಾಧವನ್ ಮದುವೆ ಆದ ನಂತರ ಅಂದರೆ 29ನೇ ವಯಸ್ಸಿನಲ್ಲಿ ಸಿನೆಮಾ ಲೋಕಕ್ಕೆ ಕಾಲಿಟ್ಟರು. ಮಾಧವನ್ ನಟನೆಯ ಮೊದಲ ತಮಿಳು ಚಿತ್ರ 'ಅಲೈಪಾಯುದೆ'. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯನ್ನು ಪಡೆಯಿತು. 'ರೆಹನಾ ಹೈ ತೆರೆ ದಿಲ್ ಮೇ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಮಾಧವನ್‌ಗೀಗ ಕೈತುಂಬಾ ಚಿತ್ರಗಳು.