ಬಂಗಾಲ ಬೆಡಗಿ ರಿಮಿ ಸೇನ್!

ಶನಿವಾರ, 20 ಜೂನ್ 2009( 17:38 IST )
ಪ್ರಿಯದರ್ಶನ್ ಚಿತ್ರ 'ಹಂಗಾಮಾ' ಮೂಲಕ ಬಾಲಿವುಡ್ ಜಗತ್ತಿಗೆ ಕಾಲಿಟ್ಟ ಬಂಗಾಲದ ಬೆಡಗಿ ರಿಮಿ ಸೇನ್‌ಗೆ ಚಿತ್ರಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. 2003ರಲ್ಲಿ 'ಭಾಗ್‌ಬನ್', 'ಧೂಮ್'(2004), 'ಗರಮ್ ಮಸಾಲಾ'(2005), ಚಿತ್ರದಲ್ಲಿ ಉತ್ತಮ ನಟನೆಯನ್ನು ತೋರಿದರೂ 'ಕ್ಯೂಮ್‌ಕಿ', 'ದಿವಾನೆ ಹುವೇ ಪಾಗಲ್'ಗಳಂತಹ ಚಿತ್ರಗಳು ಯಶಸ್ವಿಯನ್ನು ಕಾಣಲಿಲ್ಲ. ನಂತರ 2006ರಲ್ಲಿ 'ಫಿರ್ ಹೇರಾ ಫೇರಿ'ಯಲ್ಲಿ ಮತ್ತೆ ಮಿಂಚಿದ ರಿಮಿ ನಟನೆಯ 'ಗೋಲ್‌ಮಾಲ್', 'ಹ್ಯಾಟ್ರಿಕ್' ಯಶಸ್ವಿ ಚಿತ್ರಗಳಾಗಿವೆ.