ರಮೇಶ್ ಅರವಿಂದ್ ಹೇ ಸರಸೂ.. ಚಿತ್ರದ ಮೂಲಕ ತಮ್ಮ ಹಳೆಯ ಇಮೇಜಿಗೆ ಮರಳುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ತ್ಯಾಗರಾಜನಾಗಿ, ಸಂತ್ರಸ್ತ ನಾಯಕಿಗೆ ಸಾಂತ್ವನ ನೀಡುವ ಪಾತ್ರಗಳಲ್ಲಿ ರಮೇಶ್ ಕಾಣಿಸಿಕೊಳ್ಳುತ್ತಿದ್ದರು.
MOKSHA
ರಾಮ ಶಾಮ ಭಾಮ ಚಿತ್ರದ ನಂತರ ನಿರ್ದೇಶನದೊಂದಿಗೆ ಪ್ರಯೋಗಗಳಿಗೆ ಒಡ್ಡಿಕೊಂಡರು. ಇದೀಗ ಹಳೆಯ ದಿನಗಳನ್ನು ನೆಪಿಸಲಿದ್ದಾರೆ. ಹೇ ಸರಸೂ ಚಿತ್ರದಲ್ಲಿ ಸಂಕಷ್ಟಕ್ಕೆ ಸಿಲುಕುವ ಯುವತಿಯೊಬ್ಬಳಿಗೆ ಹಾಗೆ ಸುಮ್ಮನೆ ಪತಿಯಗುತ್ತಾರೆ. ಹಾಗೆಂದ ಮಾತ್ರಕ್ಕೆ ಇದು ಸೆಂಟಿಮೆಂಟ್ ಚಿತ್ರವೇನಲ್ಲ. ಒಂದಿಷ್ಟು ಕಣ್ಣೀರಿನೊಂದಿಗೆ ಚಿತ್ರದುದ್ದಕ್ಕೂ ಹಾಸ್ಯ ಇರುತ್ತದಂತೆ.
ಇದು ಮಲೆಯಾಳಂನ ಚಂದ್ರಲೇಖಾ ಚಿತ್ರದ ರಿಮೇಕ್. ಪ್ರಿಯದರ್ಶನ್ ನಿದೇಶಿಸಿದ್ದ ಈ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದರು. ಅವರ ಪಾತ್ರವನ್ನು ರಮೇಶ್ ಮಾಡುತ್ತಿದ್ದಾರೆ. ರಮೇಶ್ ನಾಯಕಿಯಾಗಿ ಸರಿತಾ ಜೈನ್ ನಟಿಸುತ್ತಿದ್ದಾರೆ. ಮಚ್ಚಾ ಚಿತ್ರದ ಬಳಿಕ ಅವರು ನಟಿಸುತ್ತಿರುವ ಚಿತ್ರ ಇದು.