ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ ಮತ್ತು ರಾಕಿ ಕಥೆ! (Darshan | Raki | Raksha Bandhan | Remake)
ಸುದ್ದಿ/ಗಾಸಿಪ್
Feedback Print Bookmark and Share
 
Darshan
MOKSHA
ದರ್ಶನ್ ಅಭಿನಯದ ಚಿತ್ರಗಳೆಂದರೆ ಅಲ್ಲಿ ಖಡಕ್ ಸಂಭಾಷಣೆ ಇದ್ದೇ ಇದೆ. ಜತೆಗೆ, ಕೈ ಬೆರಳು ಮಡಚಿ ಡೈಲಾಗ್ ಹೊಡೆಯುತ್ತಿದ್ದರೆ ದರ್ಶನ್ ಅಭಿಮಾನಿ ಪ್ರೇಕ್ಷಕ ವರ್ಗ ಬೆನ್ನು ತಟ್ಟುತ್ತಾರೆ. ಇದು ರೀಲ್‌ನಲ್ಲಿ ಮಾತ್ರವಲ್ಲ. ರಿಯಲ್ ಲೈಫ್‌ನಲ್ಲೂ ದರ್ಶನ್ ಖಡಕ್ ಆಗಿಯೇ ಉತ್ತರಿಸುತ್ತಾರೆ.

ರಕ್ಷಾಬಂಧನ ಬಂದಿದೆ. ಅರ್ಥಾತ್ ರಾಕಿ ಹಬ್ಬ. ನಿಮ್ಮ ಅಭಿಮಾನಿಗಳಿಂದ ರಾಕಿ ಕಟ್ಟಿಸಿಕೊಳ್ತೀರಾ ಎಂದರೆ, ಅಯ್ಯೋ ನಾನಾ? ನನಗೆ ಅದರಲೆಲ್ಲ ನಂಬಿಕೆನೇ ಇಲ್ಲ. ನನ್ನ ಅಕ್ಕನಿಂದ ಮಾತ್ರ ರಾಕಿ ಕಟ್ಟಿಸಿಕೊಳ್ಳುತ್ತೇನೆ. ದಯವಿಟ್ಟು ಯಾವ ಅಭಿಮಾನಿಗಳು ನನಗೆ ರಾಕಿ ಕಟ್ಟುವುದಕ್ಕೆ ಬರಬೇಡಿ ಎನ್ನುತ್ತಾರೆ ದರ್ಶನ್.

ನನ್ನ ಅಕ್ಕನಿಗೆ ಮಾತ್ರ ಪ್ರತಿವರ್ಷ ರಾಕಿ ಕಟ್ಟುತ್ತೇನೆ. ಬೇರೆ ಯಾವ ರಾಕಿ ಬಗ್ಗೆಯೂ ನನಗೆ ನಂಬಿಕೆ ಇಲ್ಲ ಎಂದು ಮುಲಾಜಿಲ್ಲದೆ ಉತ್ತರಿಸುತ್ತಾರೆ ದರ್ಶನ್. ಅಂದ ಹಾಗೆ ದರ್ಶನ್‌ಗೆ ಕಾರಿನಲ್ಲಿ ಪ್ರಯಾಣ ತುಂಬಾ ಇಷ್ಟವಂತೆ. ಚೆನ್ನೈ ಅಥವಾ ಹೈದ್ರಾಬಾದ್‌ಗೆ ಹೋಗಬೇಕಾದರೆ ಅವರು ವಿಮಾನ ಪ್ರಯಾಣ ಮಾಡುವುದಿಲ್ಲವಂತೆ. ಇದೀಗ ದರ್ಶನ್ ಅಭಿನಯದ ಹೊಸ ರಿಮೇಕ್ ಚಿತ್ರ ಅಗಸ್ಟ್ 5ಕ್ಕೆ ಸೆಟ್ಟೇರುತ್ತಿದೆ. ಸಾಧುಕೋಕಿಲ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ್ಶನ್, ರಾಕಿ ಹಬ್ಬ, ರಕ್ಷಾಬಂಧನ, ರಿಮೇಕ್