ರಾಜೇಂದ್ರಬಾಬು ಪುತ್ರಿ ನಕ್ಷತ್ರ 'ಗೋಕುಲ' ಚಿತ್ರದ ಮೂಲಕ ಸ್ಯಾಂಡಲ್ವುಡ್ಡಿಗೆ ಕಾಲಿಡುತ್ತಿದ್ದಾರೆ. ಅವರ ಸಿನೆಮಾ ಭವಿಷ್ಯ ಈ ಚಿತ್ರದ ಮೂಲಕವೇ ತಿಳಿಯಲಿದೆ. ಅಪ್ಪನ ನಿರ್ದೇಶನದಲ್ಲಿ ನಟಿಸಬೇಕೆಂಬ ಮಹದಾಸೆ ಯಾವಾಗ ಈಡೇರುತ್ತದೋ ಎಂಬ ಕನಸಿನಲ್ಲಿರುವ ನಕ್ಷತ್ರಳಿಗೆ ಗೋಕುಲ ಚಿತ್ರ ತುಂಬಾ ಖುಷಿ ಕೊಟ್ಟಿತಂತೆ.
ನಕ್ಷತ್ರಳಿಗೆ ತನ್ನ ಮೊದಲ ಚಿತ್ರದ ದಿನಗಳು ಅಂಥ ಟೆನ್ಶನ್ನ ದಿನವಾಗಿರಲಿಲ್ಲವಂತೆ. ಶೂಟಿಂಗ್ ದಿನಗಳಲ್ಲಿ ಬೇಜಾರೆನಿಸದೆ ಫ್ಯಾಮಿಲಿಯೊಂದಿಗೆ ಪ್ರವಾಸಕ್ಕೆ ಹೋದಂತೆ ಅನುಭವ ಆಯಿತಂತೆ. ಈ ಚಿತ್ರದಲ್ಲಿ ನಕ್ಷತ್ರ, ಶೆಟ್ಟರ ಮನೆಯ ಮಗ್ದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಗೋಕುಲದ ಕಥೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎನ್ನುವ ನಕ್ಷತ್ರ, ಇದೊಂದು ಹಾರ್ಟ್ ಟಚಿಂಗ್ ಮೂವಿ ಎನ್ನುತ್ತಾರೆ. ಚಿತ್ರದಲ್ಲಿ ನಟಿಸುವ ಕುರಿತು ಮನೆಯಲ್ಲಿ ಯಾರೊಬ್ಬರೂ ನಖರಾ ಮಾಡುವುದಿಲ್ಲ. ಆ ವಿಷಯದಲ್ಲಿ ಮಾತ್ರ ನಾನು ತುಂಬಾ ಅದೃಷ್ಟವಂತೆ ಎನ್ನುತ್ತಾರೆ ಅವರು.
ಸಿನೆಮಾ ಎಂದ ಮೇಲೆ ಗ್ಲಾಮರಸ್ ಆಗಿ ಇರಬೇಕಾಗುತ್ತದೆ ಹಾಗಂತ ಅತಿಯಾಗಿ ಕತ್ತರಿಸಿದ ಬಟ್ಟೆಗಳನ್ನು ನಾನು ಹಾಕಲು ರೆಡಿಯಿಲ್ಲ ಎನ್ನುತ್ತಾರೆ ನಕ್ಷತ್ರ. ಅದೇನೇ ಇರಲಿ, ಈ ನಕ್ಷತ್ರ ನಿಜವಾಗಿಯೂ ಬೆಳ್ಳಿತೆರೆಯಲ್ಲಿ ಮಿನುಗುತ್ತಾ ಅಂತ ನೋಡಬೇಕು.